ಐಪಿಎಲ್ 2021, RCB vs MI: ಪ್ರಿವ್ಯೂ, ಸಂಭಾವ್ಯ ತಂಡ, ನೇರಪ್ರಸಾರ, ಹವಾಮಾನ ವರದಿ, ಪಿಚ್ ರಿಪೋರ್ಟ್

14ನೇ ಆವೃತ್ತಿಯ ಉದ್ಘಾಟನಾ ಪಂದ್ಯವನ್ನಾಡಲು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ವಿರಾಟ್ ಕೊಹ್ಲಿ ನೇತೃತ್ದ ರಾಯಲ್ ಚಾಲೆಂಜರ್ಸ್ ತಂಡಗಳು ಸಜ್ಜಾಗಿದೆ. ಕೊರೊನಾ ವೈರಸ್‌ನ ಆತಂಕದ ಕಾರಣದಿಂದಾಗಿ ಸೀಮಿತ ಮೈದಾನಗಳಲ್ಲಿ ಪಂದ್ಯಗಳನ್ನು ಆಯೋಜಿಸುತ್ತಿದ್ದು ಗ್ರೂಫ್ ಹಂತದಲ್ಲಿ ತಂಡಗಳು ತವರಿನಲ್ಲಿ ಆಡುವ ಅವಕಾಶವನ್ನು ಹೊಂದಿಲ್ಲ. ಹೀಗಾಗಿ ಇದಕ್ಕೆ ಪೈರಕವಾಗಿ ತಂಡಗಳು ಯಾವ ರೀತಿಯಲ್ಲಿ ತಂಡದ ತಂತ್ರಗಳಲ್ಲಿ ಬದಲಾವಣೆ ತಂದಿದೆ ಎಂಬುದು ಕುತೂಹಲ ಮೂಡಿಸಿದೆ.

ಕಳೆದ ಬಾರಿಯ ಚಾಂಪಿಯನ್ ಮುಂಬೈ ತಂಡ ಈ ಬಾರಿಯೂ ಬಲಿಷ್ಠ ತಂಡವಾಗಿದ್ದು ಟೂರ್ನಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಮುಂಬೈ ಇಂಡಿಯನ್ಸ್‌ನ ಆಟಗಾರರಾದ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಹಾಗೂ ಕೃನಾಲ್ ಪಾಂಡ್ಯ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಗಳಿಸಿಕೊಂಡು ಅತ್ಯುತ್ತಮ ಪ್ರದರ್ಶನ ನೀಡಿರುವುದು ಈ ಆಟಗಾರರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ಐಪಿಎಲ್ : ಕಳೆದ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿ

ಮತ್ತೊಂದೆಡೆ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡದಲ್ಲಿ ಕೆಲ ಮಹತ್ವದ ಬದಲಾವಣೆಗಳು ಆಗಿದ್ದು ತಂಡ ಕಳೆದ ಬಾರಿಗಿಂತ ಬಲಿಷ್ಠವಾಗಿರುವಂತೆ ತೋರುತ್ತಿದೆ. ಕಳೆದ ಐಪಿಎಲ್‌ನಲ್ಲಿ ವಿಫಲವಾಗಿದ್ದ ಮ್ಯಾಕ್ಸ್‌ವೆಲ್ ಈ ಬಾರಿ ಆರ್‌ಸಿಬಿಗೆ ಸೇರಿಕೊಂಡಿದ್ದಾರೆ. ಜೊತೆಗೆ ಕೈಲ್ ಜ್ಯಾಮಿಸನ್, ಡೇನ್ ಕ್ರಿಶ್ಚಿಯನ್‌ರಂತಾ ಆಟಗಾರರು ಕೂಡ ಕೊಹ್ಲಿ ಪಡೆಯನ್ನು ಕೂಡಿದ್ದಾರೆ.

ಆರ್‌ಸಿಬಿ vs ಎಂಐ, ಪಂದ್ಯದ ಮಾಹಿತಿ ಮತ್ತು ನೇರಪ್ರಸಾರ

ಆರ್‌ಸಿಬಿ vs ಎಂಐ, ಪಂದ್ಯದ ಮಾಹಿತಿ ಮತ್ತು ನೇರಪ್ರಸಾರ

ದಿನಾಂಕ: 9 ಏಪ್ರಿಲ್ 2021, ಶುಕ್ರವಾರ

ಸಮಯ: ಭಾರತೀಯ ಕಾಲಮಾನ ಸಂಜೆ 7:30

ಸ್ಥಳ: ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ+ಹಾಟ್‌ಸ್ಟಾರ್ VIP

ಹವಾಮಾನ ವರದಿ

ಹವಾಮಾನ ವರದಿ

ಐಪಿಎಲ್‌ನ ಮೊದಲ ಪಂದ್ಯಕ್ಕೆ ಚೆನ್ನೈ ಬೆಚ್ಚಗಿನ ವಾತಾವರಣದ ಜೊತೆಗೆ ಆರ್ದ್ರತೆಯಿಂದ ಕೂಡಿರಲಿದೆ. ಪಂದ್ಯದ ಎರಡಡನೇ ಇನ್ನಿಂಗ್ಸ್‌ಗೆ ಇಬ್ಬನಿ ಪರಿಣಾಮ ಬೀರುವ ಸಾಧ್ಯತೆಯಿದೆ. ಮೊದಲ ಪಂದ್ಯಕ್ಕೆ 28 ಡಿಗ್ರಿ ಸೆಲ್ಸಿಯಸ್ ಸರಾಸರಿ ಉಷ್ಣಾಂಶವಿರುವ ಸಾಧ್ಯತೆಯಿದೆ.

ಪಿಚ್ ವರದಿ

ಪಿಚ್ ವರದಿ

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಸ್ಪಿನ್ನರ್‌ಗಳು ಹೆಚ್ಚಿನ ಯಶಸ್ಸು ಸಾಧಿಸಿದ್ದರು. ಇದು ಐಪಿಎಲ್ 2021ರ ಆರಂಭಿಕ ಪಂದ್ಯಕ್ಕೂ ಮುಂದುವರಿಯುವ ಸಾಧ್ಯತೆಯಿದೆ. ಈ ಅಂಗಳದಲ್ಲಿ 150ಕ್ಕಿಂತ ಅಧಿಕ ರನ್‌ಗಳಿಸಿದರೆ ಸ್ಪರ್ಧಾತ್ಮಕ ಮೊತ್ತವಾಗಿರಲಿದೆ.

ಆರ್‌ಸಿಬಿ ಸಂಭಾವ್ಯ ತಂಡ

ಆರ್‌ಸಿಬಿ ಸಂಭಾವ್ಯ ತಂಡ

ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಮೊಹಮ್ಮದ್ ಅಜರುದ್ದೀನ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್ ವೆಲ್, ಡೇನ್ ಕ್ರಿಶ್ಚಿಯನ್, ವಾಷಿಂಗ್ಟನ್ ಸುಂದರ್, ಕೈಲ್ ಜಾಮಿಸನ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ ಮತ್ತು ಯುಜ್ವೇಂದ್ರ ಚಹಲ್.

ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ

ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ

ಕ್ರಿಸ್ ಲಿನ್, ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್, ರಾಹುಲ್ ಚಾಹರ್, ಟ್ರೆಂಟ್ ಬೋಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, April 8, 2021, 15:29 [IST]
Other articles published on Apr 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X