Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಮಿಶ್ರಾ ಮ್ಯಾಜಿಕ್‌, ಡೆಲ್ಲಿಗೆ 138 ರನ್‌ಗಳ ಗುರಿ ನೀಡಿದ ಮುಂಬೈ

IPL 2021:Match 13, delhi capitals need 138 runs to win against Mumbai Indians

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಜಿದ್ದಾಜಿದ್ದಿನ ಕಾದಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್‌ನಲ್ಲಿ ಉತ್ತಮ ಯಶಸ್ಸು ಸಾಧಿಸಿದೆ. ಅಮಿತ್ ಮಿಶ್ರಾ ದಾಳಿಗೆ ನಲುಗಿದ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವಿಭಾಗ 138 ರನ್‌ಗಳ ಗುರಿಯನ್ನು ನೀಡಲಷ್ಟೇ ಶಕ್ತವಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್ ಕ್ವಿಂಟನ್ ಡಿಕಾಕ್ ವಿಕೆಟ್‌ಅನ್ನು 3ನೇ ಓವರ್‌ನಲ್ಲಿ ಕಳೆದುಕೊಳ್ಳುವ ಮೂಲಕ ಆಘಾತವನ್ನು ಅನುಭವಿಸಿತು. ಆದರೆ ಎರಡನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ ಹಾಗೂ ನಾಯಕ ರೋಹಿತ್ ಶರ್ಮಾ ಉತ್ತಮ ಜೊತೆಯಾಟವನ್ನು ನೀಡುವ ಮೂಲಕ ತಂಡಕ್ಕೆ ಚೇತರಿಕೆಯನ್ನು ಒದಗಿಸಿದರು.

ಆದರೆ ಈ ಜೋಡಿ ಬೇರ್ಪಡುವ ಮೂಲಕ ಮುಂಬೈ ದಿಢೀರ್ ಕುಸಿತ ಕಾಣಲು ಆರಂಭಿಸಿತು. 24 ರನ್‌ಗಳಿಸಿದ್ದ ಸೂರ್ಯಕುಮಾರ್ ಯಾದವ್‌ಗೆ ಆವೇಶ್ ಖಾನ್ ಫೆವಿಲಿಯನ್ ಹಾದಿ ತೋರಿಸಿದರು. ನಂತರ ಅಮಿತ್ ಮಿಶ್ರಾ ರೋಹಿತ್ ಶರ್ಮಾ ವಿಕೆಟ್ ಪಡೆಯುವ ಮೂಲಕ ಬೇಟೆಯನ್ನು ಆರಂಭಿಸಿದರು.

ನಾಯಕ ರೋಹಿತ್ ವಿಕೆಟ್ ಪಡೆದ ನಂತರ ಡೆಲ್ಲಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಸಿತು. ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಕಿರಾನ್ ಪೊಲಾರ್ಡ್, ಇಶಾನ್ ಕಿಶನ್, ಜಯಂತ್ ಯಾದವ್ ಒಬ್ಬರ ಹಿಂದೊಬ್ಬರಂತೆ ಫೆವಿಲಿಯನ್ ಹಾದಿ ಹಿಡಿದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಕೇವಲ 137 ರನ್‌ಗಳಿಸಲಷ್ಟೇ ಮುಂಬೈ ಶಕ್ತವಾಯಿತು.

ಡೆಲ್ಲಿ ಬೌಲಿಂಗ್‌ನಲ್ಲಿ ಅಮಿತ್ ಮಿಶ್ರಾ ಅಬ್ಬರಿಸಿದರು. ಮುಂಬೈ ತಂಡದ ಪ್ರಮುಖ ನಾಲ್ಕು ವಿಕೆಟ್‌ಗಳು ಮಿಶ್ರಾ ಪಾಲಾದವು. ಆವೇಶ್ ಖಾನ್ 2 ವಿಕೆಟ್ ಪಡೆದರೆ ಸ್ಟೋಯ್ನಿಸ್, ರಬಡಾ, ಲಲಿತ್ ಯಾದವ್ ತಲಾ ಒಂದು ವಿಕೆಟ್ ಪಡೆದರು.

Story first published: Tuesday, April 20, 2021, 21:42 [IST]
Other articles published on Apr 20, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+