ಐಪಿಎಲ್ 2021: ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್

ಐಪಿಎಲ್‌ನ ಮತ್ತೊಂದು ಜಿದ್ದಾಜಿದ್ದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರನೇ ಗೆಲುವು ಸಾಧಿಸಿದೆ.
ಮುಂಬೈ ಇಂಡಿಯನ್ಸ್ ನೀಡಿದ 138 ರನ್‌ಗಳ ಸುಲಭ ಸವಾಲನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಶಿಖರ್ ಧವನ್ ಮತ್ತೊಂದು ಉತ್ತಮ ಇನ್ನಿಂಗ್ಸ್ ನೀಡಿದರು. ಸ್ಟೀವ್ ಸ್ಮಿತ್ ಹಾಗೂ ಲಲಿತ್ ಯಾದವ್ ಕೂಡ ಡೆಲ್ಲಿ ಗೆಲುವಿಗೆ ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡಿದರು.

ಮತ್ತೆ ಮಿಂಚಿದ ಧವನ್
ಪಂಜಾಬ್ ಕಿಂಗ್ಸ ವಿರುದ್ಧದ ಪಂದ್ಯದಲ್ಲಿ ಶತಕದ ಅಂಚಿನಲ್ಲಿ ಎಡವಿದ್ದ ಶಿಖರ್ ಧವನ್ ಮುಂಬೈ ಇಂಡಿಯನ್ಸ್ ವಿರುದ್ಧ 45 ರನ್ ಬಾರಿಸಿದರು. ಈ ಬ್ಯಾಟಿಂಗ್ ಎಂಎ ಚಿದಂಬರಂ ಸ್ಟೇಡಿಯಂನ ಕಠಿಣ ಪಿಚ್‌ನಲ್ಲಿ ಡೆಲ್ಲಿ ಗೆಲುವಿಗೆ ಪ್ರಮುಖ ಪಾತ್ರವಹಿಸಿತು. ಸ್ಟೀವ್ ಸ್ಮಿತ್ 33 ರನ್‌ಗಳ ಕೊಡುಗೆ ನೀಡಿದರೆ, ಲಲೊತ್ ಯಾದವ್ 22 ರನ್‌ಗಳನ್ನು ಗಳಿಸಿದರು. ಅಂತಿಮವಾಗಿ ಶಿಮ್ರಾನ್ ಹೇಟ್ಮೇಯರ್ 9 ಎಸೆತಗಳಲ್ಲಿ 14 ರನ್ ಬಾರಿಸಿ ಇನ್ನೂ 5 ಎಸೆತಗಳು ಉಳಿದಿರುವಂತೆಯೇ ಗೆಲುವನ್ನು ಸಾರಿದರು.

ರೋಹಿತ್ ಉತ್ತಮ ಆಟ
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಪರವಾಗಿ ನಾಯಕ ರೋಹಿತ್ ಶರ್ಮಾ ಉತ್ತಮ ಆಟವನ್ನು ಪ್ರದರ್ಶಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮುಂಬೈ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಬಾರದ ಕಾರಣ ಮುಂಬೈ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಯಿತು.

ವಿಫಲವಾದ ಡೆಲ್ಲಿ ಬ್ಯಾಟ್ಸ್‌ಮನ್‌ಗಳು
ನಾಯಕ ರೋಹಿತ್ ವಿಕೆಟ್ ಪಡೆದ ನಂತರ ಡೆಲ್ಲಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಸಿತು. ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಕಿರಾನ್ ಪೊಲಾರ್ಡ್, ಇಶಾನ್ ಕಿಶನ್, ಜಯಂತ್ ಯಾದವ್ ಒಬ್ಬರ ಹಿಂದೊಬ್ಬರಂತೆ ಫೆವಿಲಿಯನ್ ಹಾದಿ ಹಿಡಿದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಕೇವಲ 137 ರನ್‌ಗಳಿಸಲಷ್ಟೇ ಮುಂಬೈ ಶಕ್ತವಾಯಿತು.

ಮುಂಬೈಗೆ ಆಘಾತ ನೀಡಿದ ಮಿಶ್ರಾ
ಡೆಲ್ಲಿ ಬೌಲಿಂಗ್‌ನಲ್ಲಿ ಅಮಿತ್ ಮಿಶ್ರಾ ಅಬ್ಬರಿಸಿದರು. ಮುಂಬೈ ತಂಡದ ಪ್ರಮುಖ ನಾಲ್ಕು ವಿಕೆಟ್‌ಗಳು ಮಿಶ್ರಾ ಪಾಲಾದವು. ಆವೇಶ್ ಖಾನ್ 2 ವಿಕೆಟ್ ಪಡೆದರೆ ಸ್ಟೋಯ್ನಿಸ್, ರಬಡಾ, ಲಲಿತ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications