CSK vs KKR : ಐಪಿಎಲ್ 2021: ಚೆನ್ನೈ vs ಮುಂಬೈ, ಪ್ರಮುಖ ಮಾಹಿತಿ, ಡ್ರೀಮ್11 ಟಿಪ್ಸ್

ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ (ಏಪ್ರಿಲ್ 21) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಡಲಿವೆ. ಎಂಎಸ್ ಧೋನಿ ಪಡೆ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿದ್ದರೆ ಇಯಾನ್ ಮಾರ್ಗನ್ ಬಳಗ ಮೂರರಲ್ಲಿ 1 ಗೆಲುವು ಕಂಡಿದೆ. ಹೀಗಾಗಿ ಇಂದಿನ ಪಂದ್ಯ ಗೆದ್ದು ಒತ್ತಡ ಕಡಿಮೆ ಮಾಡಿಕೊಳ್ಳಲು ಕೋಲ್ಕತ್ತಾ ಎದುರು ನೋಡುತ್ತಿದೆ.
ಬುಧವಾರ ಎರಡು ಐಪಿಎಲ್ ಪಂದ್ಯಗಳು ನಡೆಯುತ್ತಿವೆ. ಆರಂಭದಲ್ಲಿ ಅಂದರೆ 3.30 PMಗೆ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾದರೆ ಎರಡನೇ ಪಂದ್ಯದಲ್ಲಿ ಚೆನ್ನೈ-ಕೋಲ್ಕತ್ತಾ ಸ್ಪರ್ಧಿಸಲಿವೆ.

ಪಿಚ್, ಹವಾಮಾನ ವರದಿ
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ವೇಳೆ ಮುಂಬೈಯಲ್ಲಿ 27-33 ಡಿಗ್ರೀ ಸೆಲ್ಶಿಯಸ್ ತಾಪಮಾನ ಇರಲಿದೆ. ತೇವಾಂಶದ ಪ್ರಮಾಣ 63% ರಷ್ಟಿರಲಿದೆ. ಮುಂಬೈ ಪಿಚ್ ಬ್ಯಾಟಿಂಗ್ ಪಿಚ್. ಎರಡನೇ ಇನ್ನಿಂಗ್ಸ್ ವೇಳೆ ಇಬ್ಬನಿ ಬೀಳುವುದರಿಂದ ಬ್ಯಾಟಿಂಗ್‌ಗೆ ಹೆಚ್ಚು ನೆರವಾಗಲಿದೆ.

ಸಿಎಸ್‌ಕೆ vs ಕೆಕೆಆರ್ ಡ್ರೀಮ್ 11 ಟಿಪ್ಸ್
* ವಿಕೆಟ್ ಕೀಪರ್ - ದಿನೇಶ್ ಕಾರ್ತಿಕ್
* ಬ್ಯಾಟ್ಸ್‌ಮನ್‌ಗಳು - ನಿತೀಶ್ ರಾಣಾ, ಸುರೇಶ್ ರೈನಾ (ವಿಸಿ), ರಾಹುಲ್ ತ್ರಿಪಾಠಿ, ಶುಬ್ಮನ್ ಗಿಲ್
* ಆಲ್‌ರೌಂಡರ್ - ಮೊಯೀನ್ ಅಲಿ (ಸಿ), ಸ್ಯಾಮ್ ಕರನ್, ಆಂಡ್ರೆ ರಸ್ಸೆಲ್
* ಬೌಲರ್‌ಗಳು - ದೀಪಕ್ ಚಾಹರ್, ಪ್ಯಾಟ್ ಕಮ್ಮಿನ್ಸ್, ವರುಣ್ ಚಕ್ರವರ್ತಿ

ಕೋಲ್ಕತ್ತಾ ಸಂಭಾವ್ಯ ತಂಡ
ನಿತೀಶ್ ರಾಣಾ, ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ಇಯೊನ್ ಮೋರ್ಗಾನ್ (ಸಿ), ಸುನಿಲ್ ನರೈನ್, ದಿನೇಶ್ ಕಾರ್ತಿಕ್ (ವಿಕೆ), ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಹರ್ಭಜನ್ ಸಿಂಗ್, ಕಮಲೇಶ್ ನಾಗರ್ಕೋಟಿ, ವರುಣ್ ಚಕ್ರವರ್ತಿ.

ಚೆನ್ನೈ ಸಂಭಾವ್ಯ ತಂಡ
ಋತುರಾಜ್ ಗಾಯಕ್ವಾಡ್, ಪಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂ.ಎಸ್. ಧೋನಿ (ನಾಯಕ-ವಿಕೆ), ಸ್ಯಾಮ್ ಕರನ್, ಶಾರ್ದೂಲ್ ಠಾಕೂರ್, ಡ್ವೇನ್ ಬ್ರಾವೋ/ಲುಂಗಿ ಎನ್‌ಗಿಡಿ, ದೀಪಕ್ ಚಾಹರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications