MI vs PBKS Preview : ಪಂಜಾಬ್ vs ಮುಂಬೈ, ಸಂಭಾವ್ಯ ತಂಡ, ಡ್ರೀಮ್11 ಟಿಪ್ಸ್

ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಕದಾಡಲಿವೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ 4ರಲ್ಲಿ 2 ಪಂದ್ಯಗಳನ್ನು ಗೆದ್ದು ಐಪಿಎಲ್ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಕೆಎಲ್ ರಾಹುಲ್ ನಾಯಕತ್ವದ ಪಂಜಾಬ್ 4ರಲ್ಲಿ 1 ಪಂದ್ಯ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 7ನೇ ಸ್ಥಾನದಲ್ಲಿದೆ.
ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಒಟ್ಟು 26 ಸಾರಿ ಮುಖಾಮುಖಿಯಾಗಿವೆ. ಇದರಲ್ಲಿ ಪಂಜಾಬ್ 12 ಸಾರಿ ಗೆದ್ದಿದ್ದರೆ, ಮುಂಬೈ 14 ಸಾರಿ ಮೇಲುಗೈ ಸಾಧಿಸಿದೆ. ಪಂಜಾಬ್ ತಂಡ ಒಮ್ಮೆಯೂ ಚಾಂಪಿಯನ್ಸ್ ಪಟ್ಟ ಗೆದ್ದಿಲ್ಲ, ಮುಂಬೈ 5 ಸಾರಿ ಟ್ರೋಫಿ ಗೆದ್ದಿದೆ.

ಪಿಚ್, ಹವಾಮಾನ ವರದಿ
ಚೆನ್ನೈಯ ಚಿದಂಬರಂ ಸ್ಟೇಡಿಯಂ ಈ ವರ್ಷ ವಿಭಿನ್ನವಾಗಿ ವರ್ತಿಸುತ್ತಿದೆ. ಈ ಪಿಚ್ ಸಾಮಾನ್ಯವಾಗಿ ಸ್ಪಿನ್ನರ್‌ಗೆ ಅನುಕೂಲವಾಗಿರುವ ಪಿಚ್. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇದು ಇನ್ನೂ ಸ್ಲೋ ಪಿಚ್ ಅನ್ನಿಸಲಿದೆ. ಇಬ್ಬನಿಯ ವಿಚಾರ ಈ ಪಿಚ್‌ನಲ್ಲಿ ಹೆಚ್ಚಿನ ಪ್ರಭಾವ ಬೀರಲಿದೆ. ಪಂದ್ಯದ ವೇಳೆ ಚೆನ್ನೈಯಲ್ಲಿ 34 ಡಿಗ್ರೀ ಸೆಲ್ಶಿಯಸ್ ತಾಪಮಾನ ಇರಲಿದೆ.

ಪಂಜಾಬ್ ಕಿಂಗ್ಸ್ ತಂಭಾವ್ಯ ತಂಡ
ಕೆ.ಎಲ್. ರಾಹುಲ್ (ಸಿ / ಡಬ್ಲ್ಯೂಕೆ), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಮೊಯಿಸಸ್ ಹೆನ್ರಿಕ್ಸ್, ಶಾರುಖ್ ಖಾನ್, ಫ್ಯಾಬಿಯನ್ ಅಲೆನ್, ಎಂ ಅಶ್ವಿನ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್.

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI
ಕ್ವಿಂಟನ್ ಡಿ ಕಾಕ್ (ವಿಕೆ), ರೋಹಿತ್ ಶರ್ಮಾ (ಸಿ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ರಾಹುಲ್ ಚಾಹರ್, ಜಯಂತ್ ಯಾದವ್, ಜಸ್ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್

ಪಂಜಾಬ್-ಮುಂಬೈ ಡ್ರೀಮ್11 ಟೀಮ್
* ವಿಕೆಟ್ ಕೀಪರ್: ಕೆಎಲ್ ರಾಹುಲ್ (ವಿಸಿ), ಇಶಾನ್ ಕಿಶನ್
* ಬ್ಯಾಟ್ಸ್‌ಮನ್: ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಸೂರ್ಯಕುಮಾರ್ ಯಾದವ್ (C)
* ಆಲ್ ರೌಂಡರ್: ಕೀರನ್ ಪೊಲಾರ್ಡ್, ದೀಪಕ್ ಹೂಡ
*ಬೌಲರ್ಸ್: ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬೂಮ್ರಾ, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications