For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಪಂಜಾಬ್ vs ಮುಂಬೈ, ಆಟಗಾರರ ಸಂಭಾವ್ಯ ದಾಖಲೆ ಹಾಗೂ ಮೈಲಿಗಲ್ಲುಗಳು

ipl 2021, match 17, PBKS vs MI, players record and milestones

ಐಪಿಎಲ್ 14ನೇ ಆವೃತ್ತಿಯ 17ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ಮುಂಬೈ ಇಂಡಿಯನ್ಸ್ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು ಎರಡು ಸೋಲು ಕಂಡಿದ್ದರೆ ಪಂಜಾಬ್ ಕಿಂಗ್ಸ್ ಆಡಿದ ನಾಲ್ಕು ಪಂದ್ಯಗಳ ಪೈಕಿ ಒಂದು ಪಂದ್ಯವನ್ನಷ್ಟೇ ಗೆದ್ದುಕೊಂಡಿದೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸುವ ಯತ್ನದಲ್ಲಿ ಎರಡು ತಂಡಗಳು ಕೂಡ ಇದೆ. ಈ ಪಂದ್ಯದಲ್ಲಿ ಎರಡು ತಂಡಗಳ ಆಟಗಾರರು ಕೂಡ ಗೆಲುವು ಮಹತ್ವದ ಮೈಲಿಗಲ್ಲು ಹಾಗೂ ದಾಖಲೆಗಳನ್ನು ಬರೆಯುವ ಸಾಧ್ಯತೆಯಿದೆ.

ಜಸ್ಪ್ರೀತ್ ಬೂಮ್ರಾ: ವೇಗಿ ಜಸ್ಪ್ರೀತ್ ಬೂಮ್ರಾ ಈವರೆಗೆ 99 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇಂದಿನ ಪಂದ್ಯದ ಮೂಲಕ ಬೂಮ್ರಾ ಮುಂಬೈ ಪರವಾಗಿ 100ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಇದರಲ್ಲಿ 96 ಪಂದ್ಯಗಳನ್ನು ಐಪಿಎಲ್‌ನಲ್ಲಿ ಆಡಿದ್ದರೆ ಉಳಿದ ಮೂರು ಪಂದ್ಯಗಳನ್ನು ಚಾಂಪಿಯನ್ಸ್ ಲೀಗ್‌ನಲ್ಲಿ ಆಡಿದ್ದಾರೆ.

ಮಯಾಂಕ್ ಅಗರ್ವಾಲ್: ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಮಯಾಂಕ್ ಅಗರ್ವಾಲ್ 981 ರನ್‌ಗಳನ್ನು ಐಪಿಎಲ್‌ನಲ್ಲಿ ಗಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ 19 ರನ್‌ಗಳಿಸಿದರೆ ಪಂಜಾಬ್ ತಂಡದ ಪರವಾಗಿ 1000 ರನ್‌ಗಳನ್ನು ಪೂರೈಸಿದಂತಾಗುತ್ತದೆ.

ಇಶಾನ್ ಕಿಶನ್: ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಯುವ ಆಟಗಾರ ಇಶಾನ್ ಕಿಶನ್ ಐಪಿಎಲ್‌ನಲ್ಲಿ 959 ರನ್‌ಗಳನ್ನು ಬಾರಿಸಿದ್ದಾರೆ. 1000 ರನ್‌ಗಳ ಮೈಲಿಗಲ್ಲಿಗೆ 41 ರನ್‌ಗಳ ಅವಶ್ಯಕತೆಯಿದೆ.

ರೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್ ಆಟಗಾರರ ಪೈಕಿ ರೋಹಿತ್ ಶರ್ಮಾ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿದ್ದಾರೆ. 33.45ರ ಸರಾಸರೊಯಲ್ಲಿ ಅವರು 669 ರನ್‌ಗಳಿಸಿದ್ದಾರೆ.

ಕ್ರಿಸ್ ಗೇಲ್: ಪ್ರಸಕ್ತ ಆಟಗಾರರ ಪೈಕಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಕ್ರಿಸ್ ಗೇಲ್ ಅತಿ ಹೆಚ್ಚಿನ ರನ್‌ಗಳಿಸಿದ ಆಟಗಾರನಾಗಿದ್ದಾರೆ. ಮುಂಬೈ ವಿರುದ್ಧ 664 ರನ್‌ಗಳಿಸಿರುವ ಗೇಲ್ ಆರು ಅರ್ಧ ಶತಕ ಗಳಿಸಿದ್ದಾರೆ.

Story first published: Friday, April 23, 2021, 16:12 [IST]
Other articles published on Apr 23, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+