ಇದು ಗುರು ಮತ್ತು ಚೇಲನ ಕಾದಾಟ ಎಂದ ರವಿ ಶಾಸ್ತ್ರಿ

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡನೇ ಪಂದ್ಯ ಇಂದು (ಏಪ್ರಿಲ್ 10) ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಮತ್ತು ಡೆಲ್ಲಿ ತಂಡಗಳ ನಡುವೆ ಒಟ್ಟು 2 ಪಂದ್ಯಗಳು ನಡೆದಿದ್ದವು, ಈ ಎರಡೂ ಪಂದ್ಯಗಳಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯ ಸಾಧಿಸಿತ್ತು. ಕಳೆದ ಬಾರಿ ಕಳಪೆ ಪ್ರದರ್ಶನ ತೋರಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಈ ಬಾರಿ ಹೇಗಾದರೂ ಮಾಡಿ ಮೇಲೆತ್ತಲೇಬೇಕೆಂದು ಧೋನಿ ಸಿದ್ಧರಾಗಿದ್ದಾರೆ.
ಇತ್ತ ಇದೇ ಮೊದಲ ಬಾರಿಗೆ ನಾಯಕತ್ವದ ಹೊಣೆಯನ್ನು ಹೊತ್ತಿರುವ ರಿಷಭ್ ಪಂತ್ ನಾಯಕತ್ವದ ಮೇಲೂ ಸಹ ಭರವಸೆಗಳು ಹೆಚ್ಚಿವೆ. ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರಿಷಭ್ ಪಂತ್ ಉತ್ತಮ ಪ್ರದರ್ಶನವನ್ನು ನೀಡಿದ್ದು ಐಪಿಎಲ್ ಟೂರ್ನಿಯಲ್ಲಿಯೂ ಸಹ ಅದೇ ಫಾರ್ಮ್ ಮುಂದುವರಿಯಲಿದೆಯಾ ಕಾದು ನೋಡಬೇಕು.
ಇನ್ನು ಈ ಪಂದ್ಯದ ಕುರಿತು ಇದೀಗ ಟೀಮ್ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ ಅವರು ಟ್ವಿಟರ್ ಮೂಲಕ ಟ್ವೀಟ್ ಒಂದನ್ನು ಹಂಚಿಕೊಂಡಿದ್ದು ಸಖತ್ ವೈರಲ್ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯವನ್ನು ಗುರು ಮತ್ತು ಚೇಲನ ನಡುವೆ ನಡೆಯುವ ಕಾಳಗ ಎಂದು ರವಿಶಾಸ್ತ್ರಿ ಹೋಲಿಸಿದ್ದಾರೆ. ಇದೊಂದು ಗುರು ಮತ್ತು ಚೇಲನ ನಡುವೆ ನಡೆಯುವ ಕಾಳಗವಾಗಿದ್ದು ನೋಡುವುದಕ್ಕೆ ಸಿಕ್ಕಾಪಟ್ಟೆ ಮಜಾ ಬರಲಿದೆ, ವೀಕ್ಷಕರು ತಪ್ಪದೇ ಸ್ಟಂಪ್ ಮೈಕ್ ಗಳಿಗೆ ಕಿವಿ ಕೊಟ್ಟು ಕೇಳಿ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಮತ್ತು ರಿಷಭ್ ಪಂತ್ ಮೈದಾನದಲ್ಲಿ ಕೀಪಿಂಗ್ ಮಾಡುವಾಗ ಸ್ಟಂಪ್ ಹಿಂದೆ ನಿಂತು ಸಿಕ್ಕಾಪಟ್ಟೆ ಮಾತನಾಡುತ್ತಿರುತ್ತಾರೆ ಹೀಗಾಗಿ ಅವರ ಮಾತುಗಳನ್ನು ತಪ್ಪದೆ ಕೇಳಿ ಎಂದು ರವಿಶಾಸ್ತ್ರಿ ಅವರು ಟ್ವೀಟ್ ಮೂಲಕ ಹೇಳಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications