Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PBKS vs KKR: Preview : ಕೊಲ್ಕತ್ತಾ vs ಪಂಜಾಬ್, ಸಂಭಾವ್ಯ ತಂಡ ಹಾಗೂ ಪಂದ್ಯದ ಮಾಹಿತಿ

IPL 2021 Match 21, PBKS vs KKR: Preview, probable XI, ahmedabad weather forecast and pitch report

ಐಪಿಎಲ್‌ನಲ್ಲಿ ಸೋಮವಾರ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಹಾಗೂ ಚೆನ್ನೈ ಕ್ರೀಡಾಂಗಣಗಳನ್ನು ಹೊರತುಪಡಿಸಿ ನಡೆಯುತ್ತಿರುವ ಮೊದಲ ಪಂದ್ಯ ಇದಾಗಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಈ ಕಾದಾಟಕ್ಕೆ ಸಾಕ್ಷಿಯಾಗುತ್ತಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ಸತತ ನಾಲ್ಕು ಸೋಲುಗಳಿಂದ ಅಕ್ಷರಶಃ ಕಂಗೆಟ್ಟು ಹೋಗಿದ್ದು ಗೆಲುವಿಗಾಗಿ ಪರಿ ತಪಿಸುತ್ತಿದೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಕೂಡ ಸೋಲಿನ ಮೇಲೆ ಸೋಲಿನ ಬಳಿಕ ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ 9 ವಿಕೆಟ್‌ಗಳ ಗೆಲುವು ಸಾಧಿಸಿದ್ದು ತಂಡದ ಉತ್ಸಾಹವನ್ನು ಹೆಚ್ಚಿಸಿದೆ.

ಅಹ್ಮದಾಬಾದ್‌ನ ಕ್ರೀಡಾಂಗಣದ ವಾತಾವರಣ ಪಂದ್ಯದ ನಡೆಯಯವ ಸಂದರ್ಭದಲ್ಲಿ ಸಾಕಷ್ಟು ಉಷ್ಣಾಂಶದಿಂದ ಕೂಡಿರಲಿದೆ. ಮಳೆಯ ಸಾಧ್ಯತೆಯಿಲ್ಲ, ಇಬ್ಬನಿಯ ಪ್ರಭಾವವೂ ಪಂದ್ಯದ ಮೇಲೆ ಕಡಿಮೆಯಿರಲಿದೆ. ಆದರೆ ಟಾಸ್ ಗೆದ್ದ ತಂಡ ರನ್ ಬೆನ್ನಟ್ಟುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಪಿಚ್ ವೇಗಿ ಹಾಗೂ ಸ್ಪಿನ್ನರ್‌ಗಳಿಗೆ ಸಮಾನವಾಗಿ ಸಹಕಾರಿಯಾಗಲಿದ್ದು 160-170 ಸವಾಲಿನ ಮೊತ್ತವೆನಿಸಲಿದೆ.

ಪಂಜಾಬ್ ಕಿಂಗ್ಸ್ ಸಂಭಾವ್ಯ ತಂಡ: ಕೆಎಲ್ ರಾಹುಲ್ (ನಾಯಕ /ವಿಕೆಟ್ ಕೀಪರ್), ಮಾಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಕ್ರಿಸ್ ಗೇಲ್, ದೀಪಕ್ ಹೂಡಾ, ಮೊಯಿಸಸ್ ಹೆನ್ರಿಕ್ಸ್, ಶಾರುಖ್ ಖಾನ್, ಜೇ ರಿಚರ್ಡ್ಸನ್ / ಫ್ಯಾಬಿಯನ್ ಅಲೆನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ ಮತ್ತು ಅರ್ಷ್‌ದೀಪ್ ಸಿಂಗ್.

ಕೊಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ತಂಡ: ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮಾರ್ಗನ್ (ನಾಯಲ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಸುನಿಲ್ ನರೈನ್ / ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ, ಶಿವಂ ಮಾವಿ ಮತ್ತು ಪ್ರಸಿದ್ಧ್ ಕೃಷ್ಣ

Story first published: Monday, April 26, 2021, 13:46 [IST]
Other articles published on Apr 26, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+