For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಬೆಂಗಳೂರು vs ಡೆಲ್ಲಿ ಹಣಾಹಣಿಯಲ್ಲಿ ಯಾರಿಗೆ ಮೇಲುಗೈ?

IPL 2021, Match 22: RCB vs DC Head-to-head record, highest run-getters, top wicket-takers

ಸತತ ನಾಲ್ಕು ಪಂದ್ಯಗಳ ಗೆಲುವಿನ ಬಳಿಕ ಸೋಲಿನ ರುಚಿ ಕಂಡ ಆರ್‌ಸಿಬಿ ತಂಡ ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಈವರೆಗಿನ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯವನ್ನು ಗೆದ್ದು ಬೀಗಿದೆ. ಹೀಗಾಗಿ ಎರಡು ಬಲಿಷ್ಠ ತಂಡಗಳ ನಡುವಿನ ಕದನದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದು ಅಭಿಮಾನಿಗಳ ಕುತೂಹಲವಾಗಿದೆ.

ಐಪಿಎಲ್ ಇತಿಹಾಸದಲ್ಲಿ ಈ ಎರಡು ತಂಡಗಳು ಈವರೆಗೆ ಒಟ್ಟು 25 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಆರ್‌ಸಿಬಿ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಡೆಲ್ಲಿ 10 ಪಂದ್ಯಗಳನ್ನು ಗೆದ್ದಿದೆ. ಹೀಗೆ ಆರ್‌ಸಿಬಿ ಸಂಪೂರ್ಣ ಮೇಲುಗೈ ಸಾಧಿಸಿದೆ.

ಕೊನೆಯ ಬಾರಿ ಐಪಿಎಲ್‌ನಲ್ಲಿ ಮುಖಾಮುಖಿಯಾಗಿದ್ದ ವೇಳೆ ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದೆ. ಅಬುದಾಬಿಯಲ್ಲಿ ನಡೆದ ಈ ಎರಡು ತಂಡಗಳ ನಡುವಿನ ಅಂತಿಮ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದಾ ಆರ್‌ಸಿಬಿ ದೇವದತ್ ಪಡಿಕ್ಕಲ್ ಅರ್ಧ ಶತಕ ಹಾಗೂ ಎಬಿ ಡಿವಿಲಿಯರ್ಸ್ 35 ರನ್‌ಗಳ ನೆರವಿನಿಂದ 152/7 ರನ್‌ಗಳಿಸಿತ್ತು. ಇದನ್ನು ಡೆಲ್ಲಿ ಕ್ಯಾಪಿಟಲ್ಸ್ 19 ಓವರ್‌ಗಳಲ್ಲಿ ಗೆದ್ದು ಬೀಗಿತ್ತು.

ಇನ್ನು ಈ ಎರಡು ತಂಡಗಳು ಮುಖಾಮುಖಿಯಾಗಿದ್ದ ವೇಳೆ ವಿರಾಟ್ ಕೊಹ್ಲಿ 921 ರನ್‌ಗಳಿಸಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಎಬಿ ಡಿವಿಲಿಯರ್ಸ್ ಇದ್ದು 589 ರನ್‌ಗಳಿಸಿದ್ದಾರೆ. ಡೆಲ್ಲಿ ತಂಡದ ಪರವಾಗಿ ನಾಯಕ ರಿಷಭ್ ಪಂತ್ ಅತಿ ಹೆಚ್ಚಿನ ರನ್ ಗಳಿಸಿದ ಆಟಗಾರನಾಗಿದ್ದಾರೆ.

ಐಪಿಎಲ್ 2021: ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು

ಬೌಲಿಂಗ್‌ ವಿಭಾಗದಲ್ಲಿ ಈ ಎರಡು ತಂಡಗಳ ಪೈಕಿ ಯುಜುವೇಂದ್ರ ಚಾಹಲ್ 14 ವಿಕೆಟ್ ಪಡೆದಿರುವ ಹೆಚ್ಚಿನ ಯಶಸ್ಸು ಗಳಿಸಿದ ಬೌಲರ್ ಎನಿಸಿದ್ದಾರೆ. ಎರಡನೇ ಸ್ಥಾನದಲ್ಲಿ 12 ವಿಕೆಟ್ ಪಡೆದುಕೊಂಡಿರುವ ಕಗಿಸೋ ರಬಡಾ ಇದ್ದಾರೆ.

Story first published: Wednesday, April 28, 2021, 13:36 [IST]
Other articles published on Apr 28, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+