ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೆಂಗಳೂರು vs ಡೆಲ್ಲಿ ಮುಖಾಮುಖಿ: ಯಾವೆಲ್ಲಾ ಮಹತ್ವದ ಮೈಲಿಗಲ್ಲುಗಳು ದಾಖಲಾಗಬಹುದು ಗೊತ್ತಾ!

ipl 2021, match 22, Royal Challengers Bangalore and Delhi Capitals, records and miiletones details

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಿಷಭ್ ಪಂತ್ ಮುನ್ನಡೆಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮಂಗಳವಾರ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುವತ್ತಿದೆ. ಎರಡು ತಂಡಗಳು ಕೂಡ ಅಗ್ರ ಮೂರು ಸ್ಥಾನಗಳಲ್ಲಿ ಸ್ಥಾನ ಪಡೆದುಕೊಂಡಿದ್ದು ಇಂದಿನ ಪಂದ್ಯವನ್ನು ಗೆದ್ದು ಮೊದಲ ಸ್ಥಾನವನ್ನು ಪಡೆಯಲು ಕಾದಾಟ ನಡೆಸಲಿದೆ.

ಈ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋಡಿ ಸ್ಟೇಡಿಯಂನಲ್ಲಿ ನಡೆಯಲಿದ್ದು ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಆರ್‌ಸಿಬಿ ಹಾಗೂ ಡೆಲ್ಲಿ ಎರಡು ತಂಡಗಳಿಗೂ ಅಹ್ಮದಾಬಾದ್‌ನಲ್ಲಿ ಈ ಬಾರಿಯ ಆವೃತ್ತಿಯಲ್ಲಿ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.

ಈ ಕುತೂಹಲಕಾರಿ ಕದನದಲ್ಲಿ ಹಲವು ಆಟಗಾರರು ಮಹತ್ವದ ದಾಖಲೆ ಹಾಗೂ ಮೈಲಿಗಲ್ಲುಗಳನ್ನು ಬರೆಯುವ ಸಾಧ್ಯತೆಯಿದೆ. ಅಂತಾ ಸಂಭಾವ್ಯ ದಾಖಲೆ ಹಾಗೂ ಮೈಲಿಗಲ್ಲುಗಳ ವಿವರ ಇಲ್ಲಿದೆ.

ಐಪಿಎಲ್‌ನಲ್ಲಿ ಅತೀ ಹೆಚ್ಚು ಸೂಪರ್‌ ಓವರ್‌ ಎಸೆದ ಬೌಲರ್‌ಗಳಿವರುಐಪಿಎಲ್‌ನಲ್ಲಿ ಅತೀ ಹೆಚ್ಚು ಸೂಪರ್‌ ಓವರ್‌ ಎಸೆದ ಬೌಲರ್‌ಗಳಿವರು

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್

ಈ ಪಂದ್ಯದ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್‌ನಲ್ಲಿ ಮಹತ್ವದ ಮೈಲಿಗಲ್ಲನ್ನು ದಾಟಲಿದೆ. ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ 200ನೇ ಪಂದ್ಯವನ್ನು ಬೆಂಗಳೂರು ವಿರುದ್ಧ ಆಡುತ್ತಿದೆ. ಈ ಮೂಲಕ 200ಕ್ಕೂ ಅಧಿಕ ಐಪಿಎಲ್ ಪಂದ್ಯಗಳನ್ನು ಆಡಿದ ಮೂರನೇ ತಂಡವಾಗಲಿದೆ ಡೆಲ್ಲಿ ಕ್ಯಾಪಿಟಲ್ಸ್. ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಸಾಧನೆ ಮಾಡಿದ ಮೊದಲ ಎರಡು ತಂಡಗಳಾಗಿದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿರಾಟ್ ಕೊಹ್ಲಿ 897 ರನ್‌ಗಳಿಸಿದ್ದಾರೆ. 22 ಇನ್ನಿಂಗ್ಸ್‌ಗಳನ್ನು ಡೆಲ್ಲಿ ವಿರುದ್ಧ ಆಡಿರುವ ವಿರಾಟ್ ಕೊಹ್ಲಿ 59.80 ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ್ದು 8 ಅರ್ಧ ಶತಕ ಸಿಡಿಸಿದ್ದಾರೆ. ಡೆಲ್ಲಿ ತಂಡದ ವಿರುದ್ಧ ಐಪಿಎಲ್‌ನಲ್ಲಿ ಆಟಗಾರನೋರ್ವ ಸಿಡಿಸಿದ ಅತಿ ಹೆಚ್ಚಿನ ಸ್ಕೋರ್ ಇದಾಗಿದೆ.

ಮೊಹಮ್ಮದ್ ಸಿರಾಜ್

ಮೊಹಮ್ಮದ್ ಸಿರಾಜ್

ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಐಪಿಎಲ್‌ನಲ್ಲಿ ಪೃಥ್ವಿ ಶಾ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಏಳು ಎಸೆತಗಳನ್ನು ಸಿರಾಜ್ ಪೃರ್ಥವಿ ಶಾಗೆ ಹಾಕಿದ್ದು ಇದರಲ್ಲಿ ಎರಡು ಬಾರಿ ಶಾ ವಿಕೆಟ್ ಪಡೆದಿದ್ದಾರೆ.

ಪೃಥ್ವಿ ಶಾ

ಪೃಥ್ವಿ ಶಾ

ಡೆಲ್ಲಿ ತಂಡದ ಯುವ ಬ್ಯಾಟ್ಸ್‌ಮನ್ ಪೃಥ್ವಿ ಐಪಿಎಲ್‌ನಲ್ಲಿ ಈವರೆಗೆ 992 ರನ್‌ಗಳಿಸಿದ್ದಾರೆ. 1000 ರನ್‌ಗಳ ಮೈಲಿಗಲ್ಲು ದಾಟಲು ಶಾಗೆ 8 ರನ್‌ಗಳ ಅವಶ್ಯಕತೆಯಿದೆ.

ಎಬಿ ಡಿವಿಲಿಯರ್ಸ್:

ಎಬಿ ಡಿವಿಲಿಯರ್ಸ್:

ಆರ್‌ಸಿಬಿ ತಂಡದ ಅನುಭವಿ ಆಟಗಾರ ಎಬಿ ಡಿವಿಲಿಯರ್ಸ್ ಐಪಿಎಲ್‌ನಲ್ಲಿ 5000 ರನ್‌ಗಳ ಮೈಲಿಗಲ್ಲು ದಾಟಲು 22 ರನ್‌ಗಳ ಅವಶ್ಯಕತೆಯಿದೆ. ಐಪಿಎಲ್‌ನಲ್ಲಿ ಈ ಮೈಲಿಗಲ್ಲು ದಾಟಿದ ಎರಡನೇ ವಿದೇಶಿ ಆಟಗಾರನಾಗಲಿದ್ದಾರೆ ಎಬಿಡಿ. ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ ಮೊದಲ ವಿದೇಶಿ ಆಟಗಾರ

Story first published: Wednesday, April 28, 2021, 14:17 [IST]
Other articles published on Apr 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X