Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು

IPL 2021, match 22, Royal Challengers Bangalore vs delhi capitals, match preview

ಐಪಿಎಲ್‌ನಲ್ಲಿ ಮತ್ತೊಂದು ಮಹತ್ವದ ಹಣಾಹಣಿಗೆ ವೇದಿಕೆ ಸಜ್ಜಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಸತತ ಗೆಲುವಿಗಳ ನಂತರ ಸೋಲಿನ ರುಚಿ ಕಂಡಿದ್ದ ಆರ್‌ಸಿಬಿ ಇಂದಿನ ಪಂದ್ಯದಲ್ಲಿ ಗೆದ್ದು ಮತ್ತೆ ಗೆಲುವಿನ ಹಾದಿಗೆ ಮರಳಲು ಸಜ್ಜಾಗಿದೆ.

ಈ ಬಾರಿಯ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಬಳಗ ಅದ್ಭುತವಾದ ಪ್ರದರ್ಶನ ನೀಡುತ್ತಾ ಬಂದಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಟಿಂಗ್ ವಿಭಾಗದಲ್ಲಿ ತಂಡದ ಪ್ರದರ್ಶನ ಸಾಕಷ್ಟು ಉತ್ತಮಜ ಮಟ್ಟದಲ್ಲಿದೆ. ಇದೇ ಪ್ರದರ್ಶನವನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧವೂ ಮುಂದುವರಿಸುವ ವಿಶ್ವಾಸದಲ್ಲಿದೆ ವಿರಾಟ್ ಕೊಹ್ಲಿ ಬಳಗ.

ಭಾನುವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಎಡವಿ ಸೋಲು ಕಂಡಿತ್ತು. ರವೀಂದ್ರ ಜಡೇಜಾ ಅವರ ಆಲ್‌ರೌಂಡರ್ ಆಟಕ್ಕೆ ವಿರಾಟ್ ಬಳಗ ಅಕ್ಷರಶಃ ದಂಗಾಗಿತ್ತು. ಬ್ಯಾಟಿಂಗ್ ಬೌಲಿಂಗ್ ಫೀಲ್ಡಿಂಗ್ ಎಲ್ಲಾ ವಿಭಾಗದಲ್ಲೂ ಜಡೇಜಾ ಆರ್‌ಸಿಬಿಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಇದು ಆರ್‌ಸಿಬಿ ತಂಡ 69 ರನ್‌ಗಳ ಅಂತರದಿಂದ ಸೋಲಲು ಕಾರಣವಾಯಿತು.

ಮತ್ತೊಂದೆಡೆ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿಯೂ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದೆ. ಡೆಲ್ಲಿ ತಂಡ ಈ ಬಾರಿ ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವು ಸಾಧಿಸಿದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ಭಾನುವಾರ ಸನ್‌ರೈಸರ್ಸ್ ನಡುವಿನ ಪಂದ್ಯದಲ್ಲಿ ಸೂಪರ್ ಓವರ್ ಮೂಲಕ ಗೆಲುವು ಸಾಧಿಸಿ ಎರಡು ಅಂಕಗಳನ್ನು ಖಾತೆಗೆ ಹಾಗೆಕೊಂಡಿದೆ.

Story first published: Tuesday, April 27, 2021, 8:37 [IST]
Other articles published on Apr 27, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+