ಐಪಿಎಲ್‌ನಲ್ಲಿ ಮಹತ್ವದ ಮೈಲಿಗಲ್ಲು ನೆಡಲು ಸಜ್ಜಾದ ವಾರ್ನರ್, ರೈನಾ, ಬ್ರಾವೋ

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗುತ್ತಿವೆ. ಈ ಹಣಾಹಣಿಯಲ್ಲಿ ಸಾಕಷ್ಟು ಪ್ರಮುಖ ಆಟಗಾರರು ಕಣಕ್ಕಿಳಿಯುತ್ತಿದ್ದು ಹಲವಾರು ಮೈಲಿಗಲ್ಲುಗಳನ್ನು ನೆಡಲು ಸಜ್ಜಾಗಿದ್ದಾರೆ. ಅಂತಾ ಕೆಲ ಪ್ರಮುಖ ದಾಖಲೆ ಹಾಗೂ ಮೈಲಿಗಲ್ಲುಗಳ ವಿವರ ಇಲ್ಲಿದೆ.
ಡೇವಿಡ್ ವಾರ್ನರ್
*ಐಪಿಎಲ್‌ನಲ್ಲಿ 50ನೇ ಅರ್ಧ ಶತಕವನ್ನು ಬಾರಿಸಲು ಡೇವಿಡ್ ವಾರ್ನರ್‌ಗೆ ಇನ್ನು ಕೇವಲ ಒಂದು ಅರ್ಧ ಶತಕ ಮಾತ್ರವೇ ಅಗತ್ಯವಿದೆ. ಚೆನ್ನೈ ವಿರುದ್ಧ ಇದನ್ನು ಸಾಧಿಸಿದರೆ ಈ ಅತಿ ದೊಡ್ಡ ಮೈಲಿಗಲ್ಲು ದಾಟಿದ ಮೊದಲ ಆಟಗಾರ ಎನಿಸಲಿದ್ದಾರೆ. ಎರಡನೇ ಸ್ಥಾನದಲ್ಲಿ 43 ಅರ್ಧ ಶತಕಗಳಿಸಿರುವ ಶಿಖರ್ ಧವನ್ ಇದ್ದಾರೆ.
*ಇನ್ನು ಒಂದು ಸಿಕ್ಸರ್ ಸಿಡಿಸಿದರೆ ವಾರ್ನರ್ 200 ಸಿಕ್ಸರ್‌ಗಳನ್ನು ಐಪಿಎಲ್‌ನಲ್ಲಿ ಪೂರ್ಣಗೊಳಿಸಿದಂತೆ ಆಗುತ್ತದೆ.
*ವಾರ್ನರ್ ಇಂದಿನ ಪಂದ್ಯದಲ್ಲಿ 40 ರನ್‌ಗಳಿಸಿದರೆ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 10,00 ರನ್‌ಗಳ ಸಾಧನೆ ಮಾಡಿದಂತಾಗುತ್ತದೆ.
ಸುರೇಶ್ ರೈನಾ
*ಇಂದಿನ ಪಂದ್ಯದಲ್ಲಿ ಕೇವಲ ಒಂದು ಬೌಂಡರಿಗಳನ್ನು ಗಳಿಸಿದರೆ ರೈನಾ 500 ಬೌಂಡರಿಗಳನ್ನು ಐಪಿಎಲ್‌ನಲ್ಲಿ ಸಿಡಿಸಿದ ನಾಲ್ಕನೇ ಆಟಗಾರ ಎನಿಸಲಿದ್ದಾರೆ. ಶಿಖರ್ ಧವನ್, ಡೇವಿಡ್ ವಾರ್ನರ್ ಹಾಗೂ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ಉಳಿದ ಮೂವರು ಆಟಗಾರರು.
ಡ್ವೇಯ್ನ್ ಬ್ರಾವೋ
*ಇಂದಿನ ಪಂದ್ಯದಲ್ಲಿ ಒಂದು ವಿಕೆಟ್ ಗಳಿಸಿದರೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 3ನೇ ಆಟಗಾರ ಎನಿಸಲಿದ್ದಾರೆ ಡ್ವೇಯ್ನ್ ಬ್ರಾವೋ. ಮೊದಲ ಸ್ಥಾನದಲ್ಲಿ ಲಸಿತ್ ಮಲಿಂಗ ಎರಡನೇ ಸ್ಥಾನದಲ್ಲಿ ಅಮಿತ್ ಮಿಶ್ರಾ ಇದ್ದಾರೆ.
*ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಡ್ವೇನ್ ಬ್ರಾವೋ ಕಣಕ್ಕಿಳಿದರೆ ಇದು ಅವರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ 100ನೇ ಪಂದ್ಯವಾಗಿಲಿದೆ.
ಸಿದ್ದಾರ್ಥ್ ಕೌಲ್
ಇಂದಿನ ಪಂದ್ಯದಲ್ಲಿ ಎರಡು ವಿಕೆಟ್ ಪಡೆದರೆ ಸಿದ್ಧಾರ್ಥ್ ಕೌಲ್ ಐಪಿಎಲ್‌ನಲ್ಲಿ 50 ವಿಕೆಟ್ ಪಡೆದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications