ಐಪಿಎಲ್ 2021 : ಡೆಲ್ಲಿ vs ಕೊಲ್ಕತ್ತಾ ಮುಖಾಮುಖಿಯಲ್ಲಿ ಯಾರದ್ದು ಮೇಲುಗೈ?
14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ 25ನೇ ಪಂದ್ಯ ಗುರುವಾರ ( ಏಪ್ರಿಲ್ 29 ) ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಲಿದೆ. ಈ ಟೂರ್ನಿಯಲ್ಲಿ ಇದುವರೆಗೂ 6 ಪಂದ್ಯಗಳನ್ನಾಡಿ 4 ಪಂದ್ಯಗಳಲ್ಲಿ ಜಯಗಳಿಸಿ 2 ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು, 6 ಪಂದ್ಯಗಳನ್ನಾಡಿ 2 ಪಂದ್ಯಗಳಲ್ಲಿ ಗೆದ್ದು 4 ಪಂದ್ಯಗಳಲ್ಲಿ ಸೋತಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಎದುರಿಸಲಿದೆ.
ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಒಟ್ಟು 27 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 14 ಪಂದ್ಯಗಳಲ್ಲಿ ಜಯಗಳಿಸಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 12 ಪಂದ್ಯಗಳಲ್ಲಿ ಜಯ ಸಾಧಿಸಿದೆ ಹಾಗೂ ಒಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ದೊರಕಿಲ್ಲ. ಐಪಿಎಲ್ ಇತಿಹಾಸದ ಮುಖಾಮುಖಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೇಲುಗೈ ಸಾಧಿಸಿದೆ.
ಡೆಲ್ಲಿ - ಕೊಲ್ಕತ್ತಾ ಮುಖಾಮುಖಿಯ ಕಳೆದ 5 ಪಂದ್ಯಗಳು
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆದಿರುವ ಕಳೆದ 5 ಪಂದ್ಯಗಳ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 4 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕೇವಲ ಒಂದು ಪಂದ್ಯದಲ್ಲಿ ಜಯಗಳಿಸಿದೆ. ಡೆಲ್ಲಿ ಮತ್ತು ಕೊಲ್ಕತ್ತಾ ನಡುವಿನ ಕಳೆದ 5 ಪಂದ್ಯಗಳ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ಪಷ್ಟ ಮೇಲುಗೈ ಸಾಧಿಸಿದೆ.
ಕಳೆದ ಆವೃತ್ತಿಯ ಫಲಿತಾಂಶ :
2020ರ ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಲೀಗ್ ಹಂತದ 2 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದವು. ಎರಡೂ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸಿದ್ದವು.

ಡೆಲ್ಲಿ - ಕೊಲ್ಕತ್ತಾ ಮುಖಾಮುಖಿ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರು
ಡೆಲ್ಲಿ ಮತ್ತು ಕೊಲ್ಕತ್ತಾ ಮುಖಾಮುಖಿ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶ್ರೇಯಸ್ ಐಯ್ಯರ್ 425 ರನ್ ಗಳಿಸಿ ಅತ್ಯಧಿಕ ರನ್ ಗಳಿಸಿದ ಆಟಗಾರನಾಗಿದ್ದಾರೆ. ಉಳಿದಂತೆ ಗೌತಮ್ ಗಂಭೀರ್ 414 ಮತ್ತು ರಾಬಿನ್ ಉತ್ತಪ್ಪ 392 ರನ್ ಗಳಿಸಿದ್ದಾರೆ.

ಡೆಲ್ಲಿ - ಕೊಲ್ಕತ್ತಾ ಮುಖಾಮುಖಿ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು
ಡೆಲ್ಲಿ ಮತ್ತು ಕೊಲ್ಕತ್ತಾ ಮುಖಾಮುಖಿ ಪಂದ್ಯಗಳಲ್ಲಿ 20 ವಿಕೆಟ್ ಪಡೆದಿರುವ ಸುನಿಲ್ ನರೇನ್ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿದ್ದಾರೆ. ಉಳಿದಂತೆ ಉಮೇಶ್ ಯಾದವ್ ಮತ್ತು ಆ್ಯಂಡ್ರೆ ರಸೆಲ್ ತಲಾ 13 ವಿಕೆಟ್‍ಗಳನ್ನು ಪಡೆದಿದ್ದಾರೆ.

ಅತಿ ಹೆಚ್ಚು ರನ್ ಗಳಿಸಿದವರು
ಎರಡೂ ತಂಡಗಳ ಪೈಕಿ ಕಳೆದ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರೆಂದರೆ ಶಿಖರ್ ಧವನ್ 618 ರನ್, ಶ್ರೇಯಸ್ ಐಯ್ಯರ್ 519 ರನ್ ಮತ್ತು ಶುಬ್ಮನ್ ಗಿಲ್ 440 ರನ್.

ಅತಿ ಹೆಚ್ಚು ವಿಕೆಟ್ ಪಡೆದವರು
ಎರಡೂ ತಂಡಗಳ ಪೈಕಿ ಕಳೆದ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರೆಂದರೆ ಕಗಿಸೋ ರಬಾಡ 30 ವಿಕೆಟ್ಸ್, ಅನ್ರಿಚ್ ನಾರ್ಕಿಯಾ 22 ವಿಕೆಟ್ಸ್ ಮತ್ತು ವರುಣ್ ಚಕ್ರವರ್ತಿ 17 ವಿಕೆಟ್ಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications