ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಬೆಂಗಳೂರು ಹಾಗೂ ಪಂಜಾಬ್ ತಂಡಗಳ ಮುಖಾಮುಖಿ ಅಂಕಿಅಂಶ

IPL 2021, Match 26: RCB vs PBKS Head-to-head records, highest run-getters, top wicket-takers

14ನೇ ಆವೃತ್ತಿಯ ಐಪಿಎಲ್‌ನ 26ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಪಂಜಾಬ್ ಕಿಂಗ್ಸ್ ಹಾಗೂ ಕೆಎಲ್ ರಾಹುಲ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಈ ಬಾರಿಯ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಉತ್ಸಾಹದಲ್ಲಿರುವ ವಿರಾಟ್ ಕೊಹ್ಲಿ ಬಳಗ ಸತತ ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್ ಕಿಂಗ್ಸ್ ತಂಡಕ್ಕೆ ಕಠಿಣ ಸವಾಲೊಡ್ಡಲಿದೆ.

ಐಪಿಎಲ್ ಇತಿಹಾಸದಲ್ಲಿ ಈ ಎರಡು ತಂಡಗಳು ಒಟ್ಟು 26 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಪಂಜಾಬ್ ಕಿಂಗ್ಸ್ ಮುನ್ನಡೆಯನ್ನು ಸಾಧಿಸಿದೆ. ಪಂಜಾಬ್ 14 ಪಂದ್ಯಗಳಲ್ಲಿ ಗೆದ್ದಿದ್ದರೆ ಬೆಂಗೂರು 12 ಪಂದ್ಯಗಳಲ್ಲಿ ವಿಜಯ ಸಾಧಿಸಿದೆ.

RCB vs PBKS, Preview: ಬೆಂಗಳೂರು vs ಪಂಜಾಬ್, ಸಂಭಾವ್ಯ ತಂಡ ಹಾಗೂ ಪಂದ್ಯದ ಮಾಹಿತಿRCB vs PBKS, Preview: ಬೆಂಗಳೂರು vs ಪಂಜಾಬ್, ಸಂಭಾವ್ಯ ತಂಡ ಹಾಗೂ ಪಂದ್ಯದ ಮಾಹಿತಿ

ಕಳೆದ ಬಾರಿಯ ಆವೃತ್ತಿಯ ಎರಡು ಪಂದ್ಯದಲ್ಲಿಯೂ ಪಂಜಾಬ್ ಕಿಂಗ್ಸ್ ಆರ್‌ಸಿಬಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಮೊದಲ ಮುಖಾಮುಖಿಯಲ್ಲಿ ಪಂಜಾಬ್ 8 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದರೆ ಎರಡನೇ ಮುಖಾಮುಖಿಯಲ್ಲಿ ಪಂಜಾಬ್ 97 ರನ್‌ಗಳ ಅಂತರದಿಂದ ಗೆದ್ದಿತ್ತು.

ಇನ್ನು ಈ ಎರಡು ತಂಡಗಳ ಮುಖಾಮುಖಿಯ ಸಂದರ್ಭದಲ್ಲಿ ಕ್ರಿಸ್ ಗೇಲ್ ಅತಿ ಹೆಚ್ಚು ಯಶಸ್ಸು ಗಳಿಸಿದ ಬ್ಯಾಟ್ಸ್‌ಮನ್ ಎನಿಸಿದ್ದಾರೆ. 2011ರಿಮದ 2017ರ ಆವೃತ್ತಿವರೆಗೆ ಆರ್‌ಸಿಬಿ ಪರವಾಗಿ ಆಡಿದ್ದ ಗೇಲ್ ಬಳಿಕ ಪಂಜಾಬ್ ಪರವಾಗಿ ಆಡುತ್ತಿದ್ದಾರೆ. ಈ ಎರಡು ತಮಡಗಳ ಮುಖಾಮುಖಿಯ ಸಂದರ್ಭದಲ್ಲಿ ಗೇಲ್ 827 ರನ್‌ಗಳನ್ನು ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿ 692 ರನ್‌ಗಳಿಸಿರುವ ಎಬಿ ಡಿವಿಲಿಯರ್ಸ್ ಹಾಗೂ ಮೂರನೇ ಸ್ಥಾನದಲ್ಲಿ 681 ರನ್‌ಗಳಿಸಿರುವ ವಿರಾಟ್ ಕೊಹ್ಲಿ ಇದ್ದಾರೆ.

ಪೃಥ್ವಿ ಶಾ ಬ್ಯಾಟಿಂಗ್ ಹೊಗಳಿ ಕೆಕೆಆರ್ ಪ್ರದರ್ಶನಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಮೆಕ್ಕಲಂಪೃಥ್ವಿ ಶಾ ಬ್ಯಾಟಿಂಗ್ ಹೊಗಳಿ ಕೆಕೆಆರ್ ಪ್ರದರ್ಶನಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಮೆಕ್ಕಲಂ

ಬೌಲರ್‌ಗಳ ಪೈಕಿ ಅತಿ ಹೆಚ್ಚಿನ ಯಶಸ್ಸನ್ನು ಯುಜುವೇಂದ್ರ ಚಾಹಲ್ ಪಡೆದುಕೊಂಡಿದ್ದಾರೆ. 21 ವಿಕೆಟ್ ಚಾಹಲ್ ಪಾಲಾಗಿದ್ದರೆ ಸಂದೀಪ್ ಶರ್ಮಾ 16 ವಿಕೆಟ್ ಪಡೆದುಕೊಂಡು ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಪಿಯೂಷ್ ಚಾವ್ಲಾ ಇದ್ದಾರೆ.

Story first published: Friday, April 30, 2021, 13:06 [IST]
Other articles published on Apr 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X