
14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 29ನೇ ಪಂದ್ಯ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಟೂರ್ನಿಯಲ್ಲಿ ಇದುವರೆಗೂ 7 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಗೆದ್ದು 2 ಪಂದ್ಯಗಳನ್ನು ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು, 7 ಪಂದ್ಯಗಳನ್ನಾಡಿ 3ಪಂದ್ಯಗಳಲ್ಲಿ ಜಯಗಳಿಸಿ 4 ಪಂದ್ಯಗಳಲ್ಲಿ ಸೋಲುಂಡಿರುವ ಪಂಜಾಬ್ ಕಿಂಗ್ಸ್ ತಂಡ ಎದುರಿಸಲಿದೆ.
ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು 27 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ 15 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಜಯ ಗಳಿಸಿದ್ದರೆ 12 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಕಂಡಿದೆ. ಐಪಿಎಲ್ ಇತಿಹಾಸದ ಮುಖಾಮುಖಿ ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡ ಮೇಲುಗೈ ಸಾಧಿಸಿದೆ.
ಕೊನೆಯ ಐಪಿಎಲ್ ಮುಖಾಮುಖಿ
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ಒಂದು ಪಂದ್ಯವನ್ನಾಡಿದ್ದು ಆ ಪಂದ್ಯವೇ ಉಭಯ ತಂಡಗಳ ಕೊನೆಯ ಐಪಿಎಲ್ ಮುಖಾಮುಖಿ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತ್ತು.
ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಉಭಯ ತಂಡಗಳ ಕೊನೆಯ 5 ಪಂದ್ಯಗಳ ಫಲಿತಾಂಶ :
ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ ತನ್ನ ಕೊನೆಯ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಜಯಗಳಿಸಿದೆ. ಪಂಜಾಬ್ ಕಿಂಗ್ಸ್ ತಂಡ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ತನ್ನ ಕೊನೆಯ 5 ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ಜಯಗಳಿಸಿದೆ.
ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿರುವ ಎರಡೂ ತಂಡಗಳ ಆಟಗಾರರ ಪಟ್ಟಿ :
ಅತಿ ಹೆಚ್ಚು ರನ್ ಗಳಿಸಿದವರು : ಕೆಎಲ್ ರಾಹುಲ್ 331 ರನ್, ಶಿಖರ್ ಧವನ್ 311 ರನ್, ಪೃಥ್ವಿ ಶಾ 269 ರನ್, ರಿಷಬ್ ಪಂತ್ 199 ರನ್ ಹಾಗೂ ಕ್ರಿಸ್ ಗೇಲ್ 165 ರನ್.
ಅತಿ ಹೆಚ್ಚು ವಿಕೆಟ್ ಪಡೆದವರು : ಅವೇಶ್ ಖಾನ್ 13, ಮೊಹಮ್ಮದ್ ಶಮಿ 8, ಅರ್ಷ್‌ದೀಪ್ ಸಿಂಗ್ 7, ಅಮಿತ್ ಮಿಶ್ರಾ 6 ಹಾಗೂ ಕ್ರಿಸ್ ವೋಕ್ಸ್ 5 ವಿಕೆಟ್‍ಗಳು.