ಐಪಿಎಲ್ 2021: ರಾಣಾ, ತ್ರಿಪಾಠಿ ಭರ್ಜರಿ ಆಟ, ಎಸ್‌ಆರ್‌ಹೆಚ್‌ಗೆ 188 ರನ್ ಗುರಿ

ಐಪಿಎಲ್ 2021ನ ಮೂರನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಕೊಲ್ಕತ್ತಾ ನೈಟ್ ರೈಡರ್ಸ್ 187 ರನ್‌ಗಳಿಸಿ ಸವಾಲಿನ ಗುರಿಯನ್ನು ನೀಡಿದೆ. ನಿತೀಶ್ ರಾಣಾ ಹಾಗೂ ರಾಹುಲ್ ತ್ರಿಪಾಠಿ ಭರ್ಜರಿ ಆಟ ಕೆಕೆಆರ್ ತಂಡದ ದೊಡ್ಡ ಮೊತ್ತಕ್ಕೆ ಕಾರಣವಾಯಿತು. ಇಬ್ಬರು ಆಟಗಾರರು ಕೂಡ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ.
ಆರಂಭಿಕ ಆಟಗಾರ ನಿತೀಶ್ ರಾಣಾ 56 ಎಸೆತಗಳನ್ನು ಎದುರಿಸಿ 80 ರನ್‌ಗಳಿಸಿದರೆ ರಾಹುಲ್ ತ್ರಿಪಾಠಿ 29 ಎಸೆತಗಳಲ್ಲಿ 53 ರನ್ ಸೇರಿಸಿದರು. ಆದರೆ ಈ ಜೋಡಿ ಬೇರ್ಪಟ್ಟ ನಂತರ ಕೆಕೆಆರ್ ಸಣ್ಣ ಕುಸಿತವನ್ನು ಕಂಡಿತು. ಆಂಡ್ರೆ ರಸ್ಸೆಲ್, ಇಯಾನ್ ಮಾರ್ಗನ್ ಅಗ್ಗಕ್ಕೆ ವಿಕೆಟ್ ಕಳೆದುಕೊಂಡರು.
ಆದರೆ ಅಂತಿಮ ಹಂತದಲ್ಲಿ ಉಪನಾಯಕ ದಿನೇಶ್ ಕಾರ್ತಿಕ್ ಸ್ಪೋಟಕ ಆಟವನ್ನು ಪ್ರದರ್ಶಿಸಿ ತಂಡದ ಮೊತ್ತ ಹಿಗ್ಗಲು ಕಾರಣರಾದರು. ಕೇವಲ 9 ಎಸೆತ ಎದುರಿಸಿದ ದಿನೇಶ್ ಕಾರ್ತಿಕ್ 22 ರನ್ ಸಿಡಿಸಿದರು. ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿ ಮಿಂಚಿದರು.
ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಬೌಲಿಂಗ್‌ನಲ್ಲಿ ಇಬ್ಬರು ಅಫ್ಘಾನ್ ಬೌಲರ್‌ಗಳು ಮಿಂಚಿದರು. ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ತಲಾ ಎರಡು ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು. ರಶೀದ್ ಖಾನ್ ಕೇವಲ 6ರ ಸರಾಸರಿಯಲ್ಲಿ ರನ್ ನೀಡಿದರೆ ನಬಿ 8ರ ಸರಾಸರಿಯಲ್ಲಿ ರನ್ ನೀಡಿದ್ದು ಎದುರಾಳಿ ರನ್ ನಿಯಂತ್ರಣಕ್ಕೆ ಕಾರಣವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications