For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಡೆಲ್ಲಿ vs ರಾಜಸ್ಥಾನ್, ಸಂಭಾವ್ಯ ತಂಡ ಹಾಗೂ ಹೆಡ್‌ ಟು ಹೆಡ್ ಮಾಹಿತಿ

IPL 2021, match 36 DC vs RR, head to head and probable XI

ಶನಿವಾರ ಐಪಿಎಲ್‌ನಲ್ಲಿ ಡಬಲ್ ಹೆಡ್ಡರ್ ಪಂದ್ಯ ನಡೆಯಲಿದ್ದು ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿಯ ಆವೃತ್ತಿಯಲ್ಲಿಯೂ ಅಮೋಘ ಪ್ರದರ್ಶನ ನೀಡುತ್ತಿದ್ದು ಗೆಲುವಿನ ಸರಪಳಿ ಮುಂದುವರಿಸುವ ಉದ್ದೇಶ ಹೊಂದಿದೆ. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್‌ಗೆ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಪಡೆದ ರೋಮಾಂಚಕ ಗೆಲುವು ಉತ್ಸಾಹ ಹೆಚ್ಚಿಸಿದ್ದು ಮತ್ತೊಂದು ಗೆಲುವಿಗಾಗಿ ಹವಣಿಸುತ್ತಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಶಿಖರ್ ಧವನ್ ಹಾಗೂ ಪೃಥ್ವಿ ಶಾ ತಮ್ಮ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಶ್ರೇಯಸ್ ಐಯ್ಯರ್ ಕೂಡ ಅದ್ಭುತವಾದ ಕಮ್‌ಬ್ಯಾಕ್ ಮಾಡಿದ್ದಾರೆ. ಕಳೆದ ಪಂದ್ಯದಲ್ಲಿ ನಾಯಕ ರಿಷಬ್ ಪಂತ್ ಕೂಡ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಲಭ್ಯತೆ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳು ಇಲ್ಲ. ಕಳೆದ ಪಂದ್ಯದಲ್ಲಿ ಸ್ನಾಯುಸೆಳೆತಕ್ಕೆ ಒಳಗಾಗಿದ್ದ ಸ್ಟೋಯ್ನಿಸ್ ಮೈದಾನದಿಮದ ಹೊರಗುಳಿದಿದ್ದರು.

ಇನ್ನು ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಕೂಡ ಸ್ಟೋಟಕ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ಎವಿನ್ ಲೂಯಿಸ್, ಸಂಜು ಸ್ಯಾಮ್ಸನ್, ಲಿಯಾಮ್ ಲಿವಿಂಗ್ಸ್ಟನ್ನ್ ಮತ್ತು ಮಹಿಪಾಲ್ ಲೊಮರ್ ರಾಜಸ್ಥಾನ್ ಬ್ಯಾಟಿಂಗ್ ಬಳಗಕ್ಕೆ ಬಲ ನೀಡಲಿದ್ದಾರೆ. ಬೌಲಿಂಗ್ ಮಾತ್ರ ರಾಜಸ್ಥಾನ್ ರಾಯಲ್ಸ್ ಪರವಾಗಿ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿದೆ. ಆದರೆ ಅಂತಿಮ ಪಂದ್ಯದಲ್ಲಿ ಮುಸ್ತಫಿಜುರ್ ರಹ್ಮಾನ್ ಹಾಗೂ ಕಾರ್ತಿಕ್ ತ್ಯಾಗಿ ನಿಡಿದ ಅದ್ಭುತ ಪ್ರದರ್ಶನ ತಂಡಕ್ಕೆ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಆದರೆ ಡೆಲ್ಲಿ ಬಲಾಢ್ಯ ಬ್ಯಾಟಿಂಗ್ ಲೈನ್‌ಅಪ್‌ಅನ್ನು ತಡೆಯಬೇಕಾದರೆ ರಾಜಸ್ಥಾನ್ ತಂಡವಾಗಿ ಪ್ರದರ್ಶನ ನೀಡಬೇಕಿದೆ.

ರಾಜಸ್ಥಾನ್ ರಾಯಲ್ಸ್ ತಂಡ ಈ ಬಾರಿಯ ಟೂರ್ನಿಯಲ್ಲಿ ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಜೋಫ್ರಾ ಆರ್ಚರ್ ಅವರಂತಾ ಪ್ರಮುಖ ಆಟಗಾರರ ಸೇವೆಯಿಂದ ವಂಚಿತವಾಗಿದೆ. ಈ ಆಟಗಾರರ ಸ್ಥಾನಕ್ಕೆ ಹೊಸ ಪ್ರತಿಭಾನ್ವಿತ ಆಟಗಾರರು ಸೇರಿಕೊಂಡಿದ್ದರೂ ತಂಡದವಾಗಿ ಪ್ರದರ್ಶನ ನೀಡುವುದು ಅಗತ್ಯವಾಗಿದೆ.

ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಪಂದ್ಯದಲ್ಲಿಯೂ ಗೆಲುವಿನ ನೆಚ್ಚಿನ ತಂಡ ಎನಿಸಿದೆ. ಭಾರತದ ಟಾಪ್ ಆರ್ಡರ್‌ ದಾಂಡಿಗರ ಅಬ್ಬರ ಹಾಗೂ ದಕ್ಷಿಣ ಆಫ್ರಿಕಾದ ಇಬ್ಬರು ವೇಗಿಗಳ ಭರ್ಜರಿ ಪ್ರದರ್ಶನ ಡೆಲ್ಲಿ ತಂಡಕ್ಕೆ ಬಲವನ್ನು ಹೆಚ್ಚಿಸಿದೆ. ಈ ಮಧ್ಯೆ ಆಲ್‌ರೌಂಡರ್ ಮಾರ್ಸ್ ಸ್ಟೋಯ್ನಿಸ್ ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದು ಮುಂದಿನ ಪಂದ್ಯದಲ್ಲಿ ವಿಶ್ರಾಂತಿ ಪಡೆಯುವ ಸಂಭವವಿದೆ. ಆದರೆ ಇದು ತಂಡಕ್ಕೆ ಹೆಚ್ಚಿನ ಹಿನ್ನಡೆಯುಂಟು ಮಾಡುವ ಆತಂಕವಿಲ್ಲ. ಹೀಗಾಗಿ ತಂಡದ ನಾಯಕ ರಿಷಭ್ ಪಂತ್ ಆತ್ಮ ವಿಶ್ವಾಸ ಹೆಚ್ಚಿದೆ.

ಹೆಡ್‌ ಟು ಹೆಡ್: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 23 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಇದರಲ್ಲಿ ಡೆಲ್ಲಿ ಕ್ಯಾಪಟಿಲ್ಸ್ 11 ಬಾರಿ ಗೆದ್ದಿದ್ದರೆ ರಾಜಸ್ಥಾನ್ ರಾಯಲ್ಸ್ 12 ಬಾರಿ ಗೆದ್ದುಕೊಂಡಿದೆ. ಇನ್ನು ಈ ಬಾರಿಯ ಆವೃತ್ತಿಯ ಮೊದಲ ಹಂತದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಾಜಸ್ಥಾನ್ ರಾಯಲ್ಸ್ ಸೋಲಿನ ರುಚಿ ತೋರಿಸಿತ್ತು. ಅದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿ ರಾಜಸ್ಥಾನ್ ರಾಯಲ್ಸ್ ಪಡೆಯಿದೆ.

ಡೆಲ್ಲಿ ಕ್ಯಾಪಿಟಲ್ಸ್ - ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಮಾರ್ಕಸ್ ಸ್ಟೊಯ್ನಿಸ್/ ಟಾಮ್ ಕರ್ರನ್, ಶಿಮ್ರಾನ್ ಹೆಟ್ಮೀರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅನ್ರಿಚ್ ನಾರ್ಕಿಯಾ, ಅವೇಶ್ ಖಾನ್

ರಾಜಸ್ಥಾನ ರಾಯಲ್ಸ್ - ಯಶಸ್ವಿ ಜೈಸ್ವಾಲ್, ಎವಿನ್ ಲೂಯಿಸ್, ಸಂಜು ಸ್ಯಾಮ್ಸನ್ (c & wk), ಲಿಯಾಮ್ ಲಿವಿಂಗ್ಸ್ಟೋನ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್/ ಮನನ್ ವೋಹ್ರಾ, ರಾಹುಲ್ ತೇವಾಟಿಯಾ, ಕ್ರಿಸ್ ಮೋರಿಸ್, ಮುಸ್ತಫಿಜುರ್ ರಹಮಾನ್, ಚೇತನ್ ಸಕಾರಿಯಾ, ಕಾರ್ತಿಕ್ ತ್ಯಾಗಿ

Story first published: Saturday, September 25, 2021, 10:32 [IST]
Other articles published on Sep 25, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+