For Quick Alerts
ALLOW NOTIFICATIONS  
For Daily Alerts
 

MI vs SRH: ಸಂಭಾವ್ಯ ತಂಡಗಳು, ಪಂದ್ಯದ ಮಾಹಿತಿ, ಪಿಚ್ ವರದಿ ಹಾಗೂ ನೇರಪ್ರಸಾರದ ಮಾಹಿತಿ

 IPL 2021, Match 55, MI vs SRH Preview, Pitch Report, Playing XIs, Live streaming

ಭಾರತದಲ್ಲಿ ಆರಂಭವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡು ಮುಂದೂಡಲ್ಪಟ್ಟಿತ್ತು. ಹೀಗೆ ಮುಂದೂಡಲ್ಪಟ್ಟಿದ್ದ ಈ ಬಾರಿಯ ಐಪಿಎಲ್ ಟೂರ್ನಿ ಸದ್ಯ ಯುಎಇಯಲ್ಲಿ ಮುಂದುವರಿದಿದ್ದು ಯಾವುದೇ ಅಡಚಣೆಗಳಿಲ್ಲದೆ ಟೂರ್ನಿಯ ಎಲ್ಲಾ ಲೀಗ್ ಹಂತದ ಪಂದ್ಯಗಳು ಇಂದಿಗೆ ( ಅಕ್ಟೋಬರ್ 8 ) ಮುಕ್ತಾಯಗೊಳ್ಳಲಿವೆ.

ಹೌದು, ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತವು ಅಕ್ಟೋಬರ್ 8ರ ಶುಕ್ರವಾರದಂದು ಕೊನೆಗೊಳ್ಳಲಿದ್ದು, ಈ ದಿನದಂದು ಐಪಿಎಲ್ ಇತಿಹಾಸದಲ್ಲಿಯೇ ನಡೆಯದ ರೀತಿ ಏಕಕಾಲಕ್ಕೆ ಎರಡು ಪಂದ್ಯಗಳು ನಡೆಯಲಿವೆ. ಸಂಜೆ 7.30ಕ್ಕೆ ಅಬುಧಾಬಿಯ ಶೈಖ್ ಜಾಯೆದ್ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ ಮತ್ತು ಅದೇ ಸಮಯಕ್ಕೆ ದುಬೈ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಇಂದು ನಡೆಯಲಿರುವ ಪಂದ್ಯದಲ್ಲಿ ಪ್ಲೇ ಆಫ್ ಹಂತವನ್ನು ಪ್ರವೇಶಿಸಬೇಕೆಂದರೆ ಮುಂಬೈ ಇಂಡಿಯನ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 171 ರನ್‌ಗಳಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಆದರೆ ಇಷ್ಟು ದೊಡ್ಡ ಮಟ್ಟದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲ್ಲುವುದು ದೂರದ ಮಾತಾಗಿದ್ದು ಪ್ಲೇ ಆಫ್ ಪ್ರವೇಶಿಸುವ ಮುಂಬೈ ಇಂಡಿಯನ್ಸ್ ತಂಡದ ಕನಸು ಬಹುತೇಕ ಭಗ್ನವಾಗಿದೆ.

ಇನ್ನು ಈ ಪಂದ್ಯದ ಕುರಿತಾದ ಪಿಚ್ ವರದಿ, ಸಂಭಾವ್ಯ ಆಡುವ ಬಳಗದ ಮಾಹಿತಿ ಈ ಕೆಳಕಂಡಂತಿದೆ.

ಪಂದ್ಯದ ವಿವರ:

ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ 55ನೇ ಪಂದ್ಯವಾಗಿದ್ದು, ಈ ಪಂದ್ಯ ಅಕ್ಟೋಬರ್ 8ರ ಶುಕ್ರವಾರ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.

ಪಿಚ್ ವರದಿ:

ಮುಂಬೈ ಮತ್ತು ಹೈದರಾಬಾದ್ ನಡುವಿನ ಈ ಪಂದ್ಯ ಅಬುಧಾಬಿಯ ಶೈಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಉಪಕಾರಿಯಾಗಿರಲಿದೆ ಮತ್ತು ಸ್ಪಿನ್ ಬೌಲರ್‌ಗಳಿಗಿಂತ ವೇಗಿಗಳಿಗೆ ಈ ಪಿಚ್ ಹೆಚ್ಚು ಸಹಕಾರಿಯಾಗಿರಲಿದೆ. ಈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ತಂಡದ ಸರಾಸರಿ ಮೊತ್ತ 182 ರನ್ ಇದೆ.

ನೇರಪ್ರಸಾರ:

ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಈ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದ್ದು, ಸೋನಿ ಲಿವ್ ಅಪ್ಲಿಕೇಶನ್‌ನಲ್ಲಿಯೂ ಪಂದ್ಯದ ಲೈವ್ ವೀಕ್ಷಿಸಬಹುದಾಗಿದೆ. ಜೊತೆಗೆ ನಮ್ಮ ಮೈಖೇಲ್ ಕನ್ನಡ ವೆಬ್‌ಸೈಟ್‌ನಲ್ಲಿಯೂ ಪಂದ್ಯದ ಲೈವ್ ಸ್ಕೋರ್ ಅಪ್ ಡೇಟ್ ಇರಲಿದ್ದು ಲೈವ್ ಸ್ಕೋರ್ ತಿಳಿಯಲು ನೀವು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಸಂಭಾವ್ಯ ತಂಡಗಳು:

ಹೈದರಾಬಾದ್: ಜೇಸನ್ ರಾಯ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗಾರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಉಮ್ರಾನ್ ಮಲಿಕ್

ಮುಂಬೈ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೀರನ್ ಪೊಲ್ಲಾರ್ಡ್, ಹಾರ್ದಿಕ್ ಪಾಂಡ್ಯ, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

Story first published: Friday, October 8, 2021, 15:08 [IST]
Other articles published on Oct 8, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+