For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಆರ್‌ಸಿಬಿಗೆ 165 ರನ್‌ಗಳ ಸವಾಲಿನ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

IPL 2021, match 56, RCB need 165 runs to win against Delhi capitals

ಐಪಿಎಲ್ 14ನೇ ಆವೃತ್ತಿಯ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಮಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸವಾಲಿನ ಮೊತ್ತ ಪೇರಿಸಲು ಯಶಸ್ವಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್‌ ಗಳಿಸಿದೆ.

ಡೆಲ್ಲಿ ತಂಡದ ಪರವಾಗಿ ಆರಂಭಿಕ ಜೋಡಿ ಉತ್ತಮ ಜೊತೆಯಾಟವನ್ನು ನೀಡಿದರು. ಮೊದಲ ವಿಕೆಟ್‌ಗೆ ಡೆಲ್ಲಿ ತಂಡ 10 ಓವರ್‌ಗಳಲ್ಲಿ 88 ರನ್‌ಗಳಿಸಿತು. ಆದರೆ ಬಳಿಕ ಆರ್‌ಸಿಬಿ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಯಿತು. 35 ಎಸೆತಗಳಲ್ಲಿ 43 ರನ್‌ಗಳಿಸಿದ ಧವನ್ ಹರ್ಷಲ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ಅದಾದ ಬಳಿಕ ಪೃಥ್ವಿ ಶಾ 48 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು.

ಇನ್ನು ಈ ಪಂದ್ಯದಲ್ಲಿ ನಾಯಕ ರಿಷಭ್ ಪಂತ್ ಹಾಗೂ ಮಾಜಿ ನಾಯಕ ಶ್ರೇಯಸ್ ಐಯ್ಯರ್ ಕಡೆಯಿಂದ ಹೇಳಿಕೊಳ್ಳುವಂತಾ ಪ್ರದರ್ಶನ ಬರಲಿಲ್ಲ. ಪಂತ್ 8 ಎಸೆತಗಳಲ್ಲಿ 10 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ಐಯ್ಯರ್ 18 ಎಸೆತಗಳಲ್ಲಿ 18 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಬಳಿಕ ವೆಸ್ಟ್ ಇಂಡೀಸ್‌ನ ಸ್ಪೋಟಕ ಆಟಗಾರ ಶಮ್ರಾನ್ ಹೇಟ್ಮೇರ್ ತಂಡದ ಆಟಗಾರರನ್ನು ಕೆಲ ಕಾಲ ಕಾಡಿದರು. 22 ಎಸೆತ ಎದುರಿಸಿದ ಶಿಮ್ರಾನ್ 29 ರನ್‌ಗಳಿಸಿದರು.

ಇನ್ನು ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಪರವಾಗಿ ಮೊಹಮ್ಮದ್ ಸಿರಾಜ್ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದರು. ಎರಡು ವಿಕೆಟ್ ಕಿತ್ತ ಸಿರಾಜ್ ಡೆತ್ ಓವರ್‌ನಲ್ಲಿ ರನ್ ನಿಯಂತ್ರಣವನ್ನು ಕೂಡ ಅದ್ಭುತವಾಗಿ ಮಾಡಿದ್ದಾರೆ. ನಿಗದಿತ ನಾಲ್ಕು ಓವರ್‌ಗಳಲ್ಲಿ ಸಿರಾಜ್ ಕೇವಲ 25 ರನ್ ನೀಡಿ 2 ವಿಕೆಟ್ ಪಡೆದುಕೊಂಡಿದ್ದಾರೆ. ಚಾಹಲ್, ಹರ್ಷಲ್ ಪಟೇಲ್ ಹಾಗೂ ಡೇನಿಯಲ್ ಕ್ರಿಶ್ಚಿಯನ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ಡೇನಿಯಲ್ ಕ್ರಿಶ್ಚಿಯನ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಜಾರ್ಜ್ ಗಾರ್ಟನ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್
ಬೆಂಚ್: ದುಷ್ಮಂತ ಚಮೀರಾ, ಸಚಿನ್ ಬೇಬಿ, ಕೈಲ್ ಜೇಮೀಸನ್, ಟಿಮ್ ಡೇವಿಡ್, ವಾನಿಂದು ಹಸರಂಗ, ನವದೀಪ್ ಸೈನಿ, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್, ಪವನ್ ದೇಶಪಾಂಡೆ

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ/ ವಿಕೆಟ್ ಕೀಪರ್), ರಿಪಾಲ್ ಪಟೇಲ್, ಶಿಮ್ರಾನ್ ಹೆಟ್ಮೀರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಚ್ ನಾರ್ಕಿಯಾ
ಬೆಂಚ್: ಇಶಾಂತ್ ಶರ್ಮಾ, ಸ್ಟೀವನ್ ಸ್ಮಿತ್, ಉಮೇಶ್ ಯಾದವ್, ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಸ್ಯಾಮ್ ಬಿಲ್ಲಿಂಗ್ಸ್, ಮಾರ್ಕಸ್ ಸ್ಟೋಯಿನಿಸ್, ಟಾಮ್ ಕುರ್ರನ್, ಬೆನ್ ದ್ವಾರಶೂಯಿಸ್, ಲಲಿತ್ ಯಾದವ್, ಕುಲ್ವಂತ್ ಖೆಜ್ರೋಲಿಯಾ, ವಿಷ್ಣು ವಿನೋದ್, ಪ್ರವೀಣ್ ದುಬೆ, ಲುಕ್ಮಾನ್ ಮೇರಿವಾಲಾ

Story first published: Friday, October 8, 2021, 21:43 [IST]
Other articles published on Oct 8, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+