For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಹೈದರಾಬಾದ್ vs ಬೆಂಗಳೂರು ಮುಖಾಮುಖಿಯ ಅಂಕಿಅಂಶ

IPL 2021 Match 6: RCB v SRH - Head-to-head stats, highest scorer, highest wicket-takers

ಐಪಿಎಲ್ 14ನೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಎರಡನೇ ಸೆಣೆಸಾಟಕ್ಕೆ ಸಜ್ಜಾಗಿದೆ. ಈ ಬಾರಿ ವಿರಾಟ್ ಪಡೆಗೆ ಸವಾಲೆಸೆಯಲು ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ಎದುರು ನೋಡುತ್ತಿದೆ. ಮೊದಲ ಪಂದ್ಯವನ್ನು ಸಣ್ಣ ಅಂತರದಿಂದ ಕಳೆದುಕೊಂಡಿದ್ದ ಹೈದರಾಬಾದ್ ಆರ್‌ಸಿಬಿ ವಿರುದ್ಧದ ಪಂದ್ಯ ಗೆಲ್ಲುವ ಮೂಲಕ ಈ ಆವೃತ್ತಿಯ ಮೊದಲ ಗೆಲುವಿನ ರುಚಿ ಸವಿಯಲು ಹವಣಿಸುತ್ತಿದೆ.

ವಿರಾಟ್ ಕೊಹ್ಲಿ ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವಿರುದ್ಧ ಕಾದಾಡಿ ರೋಚಕ ಗೆಲುವು ಸಾಧಿಸಿದ ಉತ್ಸಾಹದಲ್ಲಿದ್ದು ಮತ್ತೊಂದು ಗೆಲುವಿನ ಹುಮ್ಮಸ್ಸಿನಲ್ಲಿದೆ. ಆದರೆ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಹಣಾಹಣಿಯಲ್ಲಿ ಯಾವ ತಂಡದ ಮೇಲುಗೈ ಎಂಬುದರ ಅಂಶಗಳತ್ತ ಗಮನ ಹರಿಸೋಣ...

ಎರಡು ತಂಡಗಳ ಗೆಲುವಿನ ಅಂಕಿಅಂಶ

ಎರಡು ತಂಡಗಳ ಗೆಲುವಿನ ಅಂಕಿಅಂಶ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಐಪಿಎಲ್ ಇತಿಹಾಸದಲ್ಲಿ ಈವರೆಗೆ 18 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಇದರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹೆಚ್ಚು ಬಾರಿ ಗೆಲುವು ಸಾಧಿಸಿ ಮೇಲುಗೈ ಸಾಧಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡ 10 ಬಾರಿ ಗೆಲುವು ಸಾಧಿಸಿದ್ದರೆ ಆರ್‌ಸಿಬಿ ಒಂದು ಬಾರಿ ಗೆಲುವು ಕಂಡಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿದೆ.

ಕಳೆದ ಐದು ಪಂದ್ಯಗಳ ಅಂಕಿಅಂಶಗಳು

ಕಳೆದ ಐದು ಪಂದ್ಯಗಳ ಅಂಕಿಅಂಶಗಳು

ಕಳೆದ ಐದು ಪಂದ್ಯಗಳ ಅಂಕಿಅಂಶಗಳನ್ನು ಗಮನಿಸಿದರೆ ಕೂಡ ಸನ್‌ರೈಸರ್ಸ್ ಹೈದರಾಬಾದ್ ತಂಡವೇ ಆರ್‌ಸಿಬಿ ತಂಡದ ವಿರುದ್ಧ ಮೇಲುಗೈ ಸಾಧಿಸಿದೆ. ಕಳೆದ ಐದು ಪಂದ್ಯಗಳಲ್ಲಿ ಹೈದರಾಬಾದ್ ತಂಡ 3 ಗೆಲುವು ಸಾಧಿಸಿದ್ದರೆ ಆರ್‌ಸಿಬಿ ಎರಡು ಬಾರಿ ಗೆದ್ದಿದೆ. ಈ ಹಿಂದಿನ ಆವೃತ್ತಿಯಲ್ಲಿ ಹೈದರಾಬಾದ್ ಹಾಗೂ ಬೆಂಗಳೂರು ತಂಡಗಳು 3 ಬಾರಿ ಮುಖಾಮುಖಿಯಾಗಿತ್ತು. ಲೀಗ್ ಹಂತದಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಎರಡು ತಂಡಗಳು ಕೂಡ ಒಂದು ಗೆಲುವು ಒಂದು ಸೋಲಿನ ರುಚಿ ಕಂಡಿತ್ತು. ಆದರೆ ಪ್ಲೇಆಫ್‌ ಹಂತದಲ್ಲಿ ಮತ್ತೆ ಮುಖಾಮುಖಿಯಾದ ವೇಳೆ ಆರ್‌ಸಿಬಿ ವಿರುದ್ಧ ಹೈದರಾಬಾದ್ ಗೆದ್ದು ಬೀಗಿತ್ತು.

ಹೆಚ್ಚು ರನ್‌ಗಳಿಸಿದ ಆಟಗಾರರು

ಹೆಚ್ಚು ರನ್‌ಗಳಿಸಿದ ಆಟಗಾರರು

ಈ ತಂಡಗಳ ಮುಖಾಮುಖಿಯ ಸಂದರ್ಭದಲ್ಲಿ ಎರಡು ತಂಡಗಳ ನಾಯಕರು ಅತ್ಯುತ್ತಮ ಪ್ರದರ್ಶನ ನೀಡಿರುವುದು ಅಂಕಿಅಂಶಗಳಿಂದ ಖಾತ್ರಿಯಾಗುತ್ತದೆ. ಸನ್‌ರೈಸರ್ಸ್ ನಾಯಕ ಡೇವಿಡ್ ವಾರ್ನರ್ ಹಾಗೂ ವಿರಾಟ್ ಕೊಹ್ಲಿ ಈ ಎರಡು ತಂಡಗಳ ಪೈಕಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರಾಗಿದ್ದಾರೆ. 593 ರನ್‌ಗಳಿಸಿದ ವಾರ್ನರ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ 531 ರನ್‌ಗಳಿಸಿದ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳು

ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳು

ಬೌಲಿಂಗ್‌ನಲ್ಲಿ ಆರ್‌ಸಿಬಿ ತಂಡದ ಪ್ರಮುಖ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಯಶಸ್ವಿ ಬೌಲರ್ ಎನಿಸಿದ್ದಾರೆ. ಚಾಹಲ್ 16 ವಿಕೆಟ್ ಪಡೆದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಹೈದರಾಬಾದ್ ತಂಡದ ಭುವನೇಶ್ವರ್ ಕುಮಾರ್ ಇದ್ದು 14 ವಿಕೆಟ್ ಸಂಪಾದಿಸಿದ್ದಾರೆ.

Story first published: Thursday, April 15, 2021, 12:36 [IST]
Other articles published on Apr 15, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+