IPL 2021: RR vs DC: ರಾಜಸ್ಥಾನ್ vs ಡೆಲ್ಲಿ, ಸಂಭಾವ್ಯ ತಂಡ, ಪಿಚ್ ರಿಪೋರ್ಟ್, ಹವಾಮಾನ ವರದಿ

ಐಪಿಎಲ್ ಪಂದ್ಯಗಳು ರೋಚಕ ಫಲಿತಾಂಶವನ್ನು ಪಡೆಯುತ್ತಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಏಳನೆ ಪಂದ್ಯದಲ್ಲಿ ಗುರುವಾರ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರೆ ರಾಜಸ್ಥಾನ್ ರಾಯಲ್ಸ್ ದೊಡ್ಡ ಮೊತ್ತವನ್ನು ಬೆನ್ನಟ್ಟಿ ಅಂತಿಮ ಹಂತದಲ್ಲಿ ಎಡವಿ ಸೋಲು ಕಂಡಿತ್ತು.
ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಎರಡು ತಂಡಗಳು ಕೂಡ ಈ ಬಾರಿ ಆವೃತ್ತಿಯಲ್ಲಿ ಹೊಸ ನಾಯಕನ ನೇತೃತ್ವದಲ್ಲಿ ಆಡುತ್ತಿದೆ. ಎರಡು ತಂಡಗಳ ನಾಯಕರು ಕೂಡ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳು ಆಗಿರುವುದು ಈ ಇಬ್ಬರ ನಡುವಿನ ಸಾಮ್ಯತೆಯಾಗಿದೆ. ಆರಂಭಿಕ ಪಂದ್ಯದಲ್ಲಿ ಸೋಲು ಕಂಡಿದ್ದರೂ ಬೃಹತ್ ಮೊತ್ತದ ಸನಿಹವನ್ನು ತಲುಪಿರುವುದು ಆರ್‌ಆರ್ ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸಿರುವುದರಲ್ಲಿ ಅನುಮಾನವಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ಕೆಲ ಪ್ರಮುಖ ಮಾಹಿತಿಗಳು ಇಲ್ಲಿದೆ

ಪಂದ್ಯದ ವಿವರ ಹಾಗೂ ನೇರಪ್ರಸಾರ
ದಿನಾಂಕ: 15 ಏಪ್ರಿಲ್ 2021, ಗುರುವಾರ
ಸಮಯ: ಸಂಜೆ 7:30
ಸ್ಥಳ: ವಾಂಖೆಡೆ ಕ್ರೀಡಾಂಗಣ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ+ಹಾಟ್‌ಸ್ಟಾರ್ VIP

ಹವಾಮಾನ ವರದಿ
ಪಂದ್ಯ ನಡೆಯುವ ದಿನ ಮುಂಬೈನ ವಾಂಖೆಡೆ ಸ್ಟೇಡಿಯಂನ ಸುತ್ತ 31 ಡಿಗ್ರಿ ಉಷ್ಣಾಂಶವಿರಲಿದ್ದು ಬಿಸಿ ವಾತಾವರಣದಿಂದ ಕೂಡಿರಲಿದೆ. ಪಂದ್ಯ ನಡೆಯುವ ಸಮಯದಲ್ಲಿ ಮಳೆ ಬರುವ ಮುನ್ಸೂಚನೆಯಿಲ್ಲ. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಮಂಜು ಪ್ರಭಾವ ಬೀರುವ ಸಾಧ್ಯತೆಯಿದೆ.

ರಾಜಸ್ಥಾನ್ ಸಂಭಾವ್ಯ ಆಡುವ ಬಳಗ
ಮನನ್ ವೊಹ್ರಾ, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ / ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಶಿವಮ್ ದುಬೆ, ರಾಹುಲ್ ತೆವಾಟಿಯಾ, ರಿಯಾನ್ ಪರಾಗ್, ಕ್ರಿಸ್ ಮೋರಿಸ್, ಶ್ರೇಯಸ್ ಗೋಪಾಲ್, ಮುಸ್ತಫಿಜುರ್ ರಹಮಾನ್, ಚೇತನ್ ಸಕರಿಯಾ.

ಡೆಲ್ಲಿ ಸಂಭಾವ್ಯ ತಂಡ
ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ರಿಷಭ್ ಪಂತ್ (ನಾಯಕ/ವಿಕೆಟ್ ಕೀಪರ್), ಮಾರ್ಕಸ್ ಸ್ಟೋಯಿನಿಸ್, ಶಿಮ್ರಾನ್ ಹೆಟ್ಮೇಯರ್, ಕ್ರಿಸ್ ವೋಕ್ಸ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ / ಟಾಮ್ ಕರ್ರನ್, ಅವೇಶ್ ಖಾನ್ ಮತ್ತು ಅಮಿತ್ ಮಿಶ್ರಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications