Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಮುಂಬೈ vs ಬೆಂಗಳೂರು, ಮುಖಾಮುಖಿ ಕಾದಾಟದಲ್ಲಿ ಯಾರದ್ದು ಮೇಲುಗೈ?

IPL 2021: MI vs RCB head-to-head records and status you need to know

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಮೂರು ಬಾರಿಯ ರನ್ನರ್‌ಅಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಕಾದಾಟದೊಂದಿಗೆ 14ನೇ ಆವೃತ್ತಿಯ ಐಪಿಎಲ್‌ಗೆ ಚಾಲನೆ ದೊರೆಯಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಎರಡು ತಂಡಗಳು ಕೂಡ ಸಾಮಾನ್ಯವಾಗಿ ಮುಂಬೈ ಅಥವಾ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಎದುರಾಗುತ್ತಿದ್ದು ಎರಡು ಮೈದಾನಗಳು ಕೂಡ ಬ್ಯಾಟ್ಸ್‌ಮನ್ ಸ್ನೇಹಿಯಾಗಿರುವ ಕಾರಣ ಹೈಸ್ಕೋರಿಂಗ್ ಮ್ಯಾಚ್‌ಗೆ ಸಾಕ್ಷಿಯಾಗುತ್ತಿತ್ತು.

ಆದರೆ 2021ರ ಐಪಿಎಲ್ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಎರಡು ತಂಡಗಳು ಭಿನ್ನ ತಾಣದಲ್ಲಿ ಮುಖಾಮುಖಿಯಾಗಿದೆ. ಚೆನ್ನೈನ ಪಿಚ್ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಿದ್ದು ಬ್ಯಾಟ್ಸ್‌ಮನ್‌ಗಳಿಗೆ ಸ್ವಲ್ಪಮಟ್ಟಿಗೆ ಸವಾಲೊಡ್ಡುವ ನಿರೀಕ್ಷೆಯಿದೆ. ಈ ಮುನ್ನ ಎರಡು ಬಾರಿ ಮಾತ್ರವೇ ಚೆನ್ನೈನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದು ಎರಡು ತಂಡಗಳು ಕೂಡ 1-1 ಗೆಲುವಿನ ಅನುಪಾತವನ್ನು ಹೊಂದಿದೆ.

ಮುಂಬೈ ಮೇಲುಗೈ

ಮುಂಬೈ ಮೇಲುಗೈ

ಆರ್‌ಸಿಬಿ ಹಾಗೂ ಮುಂಬೈ ನಡುವಿನ ಒಟ್ಟಾರೆ ಕಾದಾಟದಲ್ಲಿ ಮುಂಬೈ ಇಂಡಿಯನ್ಸ್ ಸ್ಪಷ್ಟವಾಗಿ ಮೇಲುಗೈ ಸಾಧಿಸಿದೆ. 19 ಪಂದ್ಯಗಳಲ್ಲಿ ಮುಂಬೈ ಗೆಲುವು ಸಾಧಿಸಿದ್ದರೆ ಬೆಂಗಳೂರು 10 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಕಳೆದ ಐಪಿಎಲ್ 2020 ಆವೃತ್ತಿಯಲ್ಲಿ ಈ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದು ತಲಾ ಒಂದೊಂದು ಗೆಲುವು ಸಾಧಿಸಿತ್ತು.

ಕೊಹ್ಲಿ ಯಶಸ್ವಿ ಬ್ಯಾಟ್ಸ್‌ಮನ್

ಕೊಹ್ಲಿ ಯಶಸ್ವಿ ಬ್ಯಾಟ್ಸ್‌ಮನ್

ಈ ಎರಡು ತಂಡಗಳ ಮುಖಾಮುಖಿಯಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ 26 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದು 637 ರನ್‌ಗಳಿಸಿದ್ದಾರೆ.

ಬೌಲಿಂಗ್‌ನಲ್ಲಿ ಚಾಹಲ್ ಉತ್ತಮ

ಬೌಲಿಂಗ್‌ನಲ್ಲಿ ಚಾಹಲ್ ಉತ್ತಮ

ಈ ಎರಡು ತಂಡಗಳ ನಡುವಿನ ಕಾದಾಟದಲ್ಲಿ ಬೌಲಿಂಗ್‌ನಲ್ಲಿ ಯಶಸ್ಸು ಕಂಡಿದ್ದು ಆರ್‌ಸಿಬಿ ಸ್ಪಿನ್ನರ್ ಯುಜುವೇಂದ್ರ ಚಾಹಲ್. ಮುಂಬೈ ಇಂಡಿಯನ್ಸ್ ವಿರುದ್ಧ ಯುಜಿ 13 ಪಂದ್ಯಗಳಲ್ಲಿ ಆಡಿದ್ದು 19 ವಿಕೆಟ್ ಕಬಳಿಸಿದ್ದಾರೆ. ಮುಂಬೈ ವಿರುದ್ಧ 4/38 ರನ್‌ಗಳಿಸಿರುವುದು ಚಾಹಲ್ ಅವರ ಅತ್ಯುತ್ತಮ ಬೌಲಿಂಗ್ ದಾಖಲೆಯಾಗಿದೆ.

ಆರ್‌ಸಿಬಿ ಪರ ಪೊಲಾರ್ಡ್, ಬೂಮ್ರಾಗೆ ಯಶಸ್ಸು

ಆರ್‌ಸಿಬಿ ಪರ ಪೊಲಾರ್ಡ್, ಬೂಮ್ರಾಗೆ ಯಶಸ್ಸು

ಇನ್ನು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಕಿರಾನ್ ಪೊಲಾರ್ಡ್ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿದ್ದಾರೆ. ಪೊಲಾರ್ಡ್ ಬೆಂಗಳೂರು ವಿರುದ್ಧ ಆಡಿದ 23 ಪಂದ್ಯಗಳಲ್ಲಿ 537 ರನ್‌ಗಳಿಸಿದ್ದಾರೆ. ಇದರಲ್ಲಿ ಅವರು 167.28ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಮುಂಬೈ ಬೌಲರ್‌ಗಳಲ್ಲಿ ಬೂಮ್ರಾ ಯಶಸ್ವಿ ಎನಿಸಿದ್ದು 15 ಪಂದ್ಯಗಳಲ್ಲಿ 19 ವಿಕೆಟ್ ಕಬಳಿಸಿದ್ದಾರೆ.

Story first published: Friday, April 9, 2021, 23:59 [IST]
Other articles published on Apr 9, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+