Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನನ್ನ ಪಾಲಿಗೆ ಭಾರತ ಪ್ರತಿ ಬಾರಿಯೂ ಅದ್ಭುತ ಎಂದ ಆಸ್ಟ್ರೇಲಿಯಾದ ಕಾಮೆಂಟೇಟರ್

IPL 2021: Michael Slater said India has been amazing to me every time

ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದ್ದು ಮುಂದೂಡಲಾಗಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಮೂಲದ ಕಾಮೆಂಟೇಟರ್ ಮೈಕಲ್ ಸ್ಟೇಟರ್ ಅದ್ಭುತ ಮಾತುಗಳ ಮೂಲಕ ಭಾರತೀಯರ ಎಚ್ಚರಿಕೆಯಿಂದ ಇರುವಂತೆ ಮನವಿಯನ್ನು ಮಾಡಿದ್ದಾರೆ.

ಮೊದಲಿಗೆ ಸ್ಟೇಟರ್ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿಯ ವಿರುದ್ಧ ಮತ್ತೊಂದು ಸುತ್ತಿನ ವಾಗ್ಬಾಣವನ್ನು ಪ್ರಯೋಗಿಸಿದ್ದಾರೆ. ಮಾನವನ ಸಂಕಷ್ಟದಲ್ಲಿ ಪ್ರಧಾನಿ ಧೂಮಪಾನ ಮಾಡುತ್ತಿರುವುದು ಅದ್ಭುತವಾಗಿದೆ. ಭಾರತದಲ್ಲಿರುವ ಪ್ರತಿಯೊಬ್ಬ ಆಸ್ಟ್ರೇಲಿಯಾದ ಪ್ರಜೆ ಕೂಡ ನಿಜವಾಗಿಯೂ ಆತಂಕದಲ್ಲಿದ್ದಾರೆ. ಇಲ್ಲಿ ದಾರಿಗಳಲ್ಲಿ ಬೀಳುತ್ತಿರುವ ಹೆಣಗಳನ್ನು ನಿಮ್ಮ ಖಾಸಗೀ ವಿಮಾನದಲ್ಲಿ ನೋಡಿದರೆ ಹೇಗೆ? ಎಂದು ಸ್ಲೇಟರ್ ತಮ್ಮ ಆಕ್ರೋಶ ಹಾಗೂ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಇದಾದ ಬಳಿಕ ಮತ್ತೊಂದು ಟ್ವೀಟ್‌ನಲ್ಲಿ ಭಾರತ ಮೇಲೆ ತನ್ನ ಭಾವನೆಯನ್ನು ಅವರು ವ್ಯಕ್ತಪಡಿಸಿದ್ದಾರೆ. "ನನ್ನ ಎಲ್ಲಾ ಪ್ರೀತಿ ಹಾಗೂ ಪ್ರಾರ್ಥನೆ ಎಲ್ಲಾ ಭಾರತೀಯರ ಪರವಾಗಿ ಇದೆ. ನೀವು ನನಗೆ ಏನೂ ಅಲ್ಲ. ಆದರೆ ಪ್ರತೀ ಬಾರಿಯೂ ನಾನು ಅಲ್ಲಿಗೆ ಬಂದಾಗ ನನ್ನ ಪಾಲಿಗೆ ಅದ್ಭುತವಾಗಿರುತ್ತೀರಿ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ" ಎಂದು ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

14ನೇ ಆವೃತ್ತಿಯ ಐಪಿಎಲ್‌ನಲ್ಲಿ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಲೇಟರ್ ಭಾರತದಿಂದ ಆಸ್ಟ್ರೇಲಿಯಾಗೆ ಪ್ರಯಾಣಿಸುವ ವಿಚಾರವಾಗಿ ಆಸ್ಟ್ರೇಲಿಯಾ ಪ್ರಧಾನಿ ವಿರುದ್ಧ ಕಟು ಮಾತುಗಳನ್ನು ಆಡಿದ್ದರು. ಸರ್ಕಾರದ ಅನುಮತಿಯನ್ನು ಪಡೆದು ಭಾರತಕ್ಕೆ ಬಂದಿದ್ದರೂ ನಮ್ಮನ್ನು ಆಸ್ಟ್ರೇಲಿಯಾಗೆ ಬಾರದಂತೆ ತಡೆಯಲು ನಿಮಗೆಷ್ಟು ಧೈರ್ಯ ಎಂದು ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ವಿರುದ್ಧ ಕಿಡು ಕಾರಿದ್ದರು.

Story first published: Wednesday, May 5, 2021, 18:54 [IST]
Other articles published on May 5, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+