ಐಪಿಎಲ್: ಟಾಮ್ ಬ್ಯಾಂಟನ್ ಐಪಿಎಲ್ ಬಿಡಲಿ ಎಂದ ಮೈಕಲ್ ವಾನ್

ಲಂಡನ್: ಲಂಡನ್: ಇಂಗ್ಲೆಂಡ್‌ನ ಯುವ ಕ್ರಿಕೆಟಿಗ ಟಾಮ್ ಬ್ಯಾಂಟನ್ ಐಪಿಎಲ್ ತ್ಯಜಿಸಬೇಕು ಎಂದು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಹೇಳಿದ್ದಾರೆ. ಬ್ಯಾಂಟನ್ ಅವರು ಟೆಸ್ಟ್ ಕಡೆಗೆ ಹೆಚ್ಚು ಗಮನ ಹರಿಸಿದರೆ ಉತ್ತಮ. ಟಿ20ಗಿಂತಲೂ ಅವರಿಗೆ ಟೆಸ್ಟ್ ಕ್ರಿಕೆಟ್ ಹೆಚ್ಚು ಸೂಕ್ತ ಎಂದು ವಾನ್ ಸಲಹೆ ನೀಡಿದ್ದಾರೆ.
'ನಾನು ಉಸ್ತುವಾರಿ ವಹಿಸಿಕೊಂಡರೆ ನಾನು ಈ ವಾರ ಟಾಮ್ ಬ್ಯಾಂಟನ್‌ಗೆ ಫೋನ್‌ನಲ್ಲಿ ಮಾತನಾಡುತ್ತೇನೆ. ಅವನ ಐಪಿಎಲ್ ಒಪ್ಪಂದವನ್ನು ತ್ಯಜಿಸಿ ಮತ್ತು ಸಮರ್‌ಸೆಟ್ ಕೌಂಟಿ ಸೀಸನ್‌ನ ಮೊದಲ ಕೆಲವು ವಾರಗಳನ್ನು ಆಡಲು ಹೇಳುತ್ತೇನೆ. ಏಕೆಂದರೆ ಆತನಿಗೆ ಟೆಸ್ಟ್ ತಂಡದಲ್ಲಿ 6ನೇ ಸ್ಥಾನದಲ್ಲಿ ಸ್ಲಾಟ್ ಲಭ್ಯವಿದೆ,' ಎಂದು ಮೈಕಲ್ ವಾನ್ ಹೇಳಿದ್ದಾರೆ.
ಕಳೆದ ಐಪಿಎಲ್ ಸೀಸನ್‌ನಲ್ಲಿ ಹರಾಜಿನ ವೇಳೆ ಟಾಮ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಖರೀದಿಸಿತ್ತು. ಆದರೆ ಈ ಬಾರಿ ಹರಾಜಿಗೂ ಮುನ್ನ ಬ್ಯಾಂಟನ್ ಅವರನ್ನು ತಂಡದಿಂದ ಕೆಕೆಆರ್ ರಿಲೀಸ್ ಮಾಡಿತ್ತು. ಹೀಗಾಗಿ ಬ್ಯಾಂಟನ್ ಈ ಬಾರಿಯ ಐಪಿಎಲ್ ತ್ಯಜಿಸಿ ಕೌಂಟಿ ಕ್ರಿಕೆಟ್‌ನತ್ತ ಗಮನ ಹರಿಸಲು ನಿರ್ಧಾರ ತಾಳಿದ್ದರು.
'ನಾನು ಬ್ಯಾಂಟನ್ ನನ್ನು ಹತ್ತಿರದಿಂದ ನೋಡಿದ್ದೇನೆ. ಆತ ನಾಳೆ ಸೂಪರ್‌ಸ್ಟಾರ್ ಆಗಬಲ್ಲ ಬ್ಯಾಟ್ಸ್‌ಮನ್. ಐಪಿಎಲ್‌ನಲ್ಲಿ ಆತ ಸಾಕಷ್ಟು ಸಮಯ ಪಡೆಯದಿದ್ದಾಗ ಅವನ ವೃತ್ತಿ ಜೀವನದಲ್ಲಿ ಅವನಿಗೆ ಈ ಕ್ಷಣದಲ್ಲಿ ಬೇಕಾಗಿರುವುದೇನು ಅನ್ನೋದು ನನಗೆ ಗೊತ್ತಿಲ್ಲ. ಆದರೆ ಆತನಿಗೆ ಟೆಸ್ಟ್‌ನಲ್ಲಿ ಹೆಚ್ಚು ಅವಕಾಶವಿದೆ ಎಂದು ನನಗನ್ನಿಸುತ್ತಿದೆ,' ಎಂದು ವಾನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications