Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದಲ್ಲಿ ಕ್ವಾರಂಟೈನ್‌ಗೆ ಒಳಗಾದ ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ

IPL 2021: Mike Hussey will remain in India and quarantine after Covid positive

ಆಸ್ಟ್ರೇಲಿಯಾದ ಎಲ್ಲಾ ಆಟಗಾರರು ಹಾಗೂ ಕೋಚ್ ಮತ್ತು ಸಿಬ್ಬಂದಿಗಳು ಮಾಲ್ಡೀವ್ಸ್‌ಗೆ ಪ್ರಯಾಣವನ್ನು ಬೆಳೆಸಲು ಸಜ್ಜಾಗಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಭಾರತದಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಮೈಕ್ ಹಸ್ಸಿ ಕೊರೊನಾ ವೈರಸ್‌ಗೆ ತುತ್ತಾಗಿರುವ ಕಾರಣ ಭಾರತದಲ್ಲಿಯೇ ಉಳಿದುಕೊಂಡು ಕ್ವಾರಂಟೈನ್ ಪೂರೈಸಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಮಂಗಳವಾರ ವಾರ ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿತ್ತು. ಹೀಗಾಗಿ ಮರು ಪರೀಕ್ಷೆಗಾಗಿ ಗಂಟಲು ದ್ರವದ ಮಾದರಿಯನ್ನು ಕಳುಹಿಸಲಾಗಿತ್ತು. ಎರಡನೇ ವರದಿ ಕೂಡ ಪಾಸಿಟಿವ್ ಬಂದ ಕಾರಣ ಮೈಕ್ ಹಸ್ಸಿ ಕಡ್ಡಾಯವಾಗಿ 10 ದಿನಗಳ ಕ್ವಾರಂಟೈನ್ ಪೂರೈಸಬೇಕಿದೆ. ಹೀಗಾಗಿ ಡೆಲ್ಲಿಯಲ್ಲಿರುವ ತಂಡದ ಹೋಟೆಲ್‌ನಲ್ಲಿಯೇ ಹಸ್ಸಿ ಉಳಿದುಕೊಂಡಿದ್ದಾರೆ.

ಇನ್ನು ತನ್ನ ಆರೋಗ್ಯದ ಬಗ್ಗೆ ಮೈಕ್ ಹಸ್ಸಿ ಆಸ್ಟ್ರೇಲಿಯಾದ ಪತ್ರಿಕೆ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪ್ರತಿಕ್ರಿಯೆ ನೀಡಿರುವುದನ್ನು ಪ್ರಕಟಿಸಿದೆ. ಮೊಬೈಲ್ ಸಂದೇಶದ ಮೂಲಕ "I am OK" ಎನ್ನುವ ಮೂಲಕ ತಾನು ಆರೋಗ್ಯದಿಂದಿರುವುದಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಭಾನುವಾರ ನಡೆದ ಕೊರೊನಾ ಪರೀಕ್ಷೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೂವರು ನಾನ್ ಪ್ಲೇಯಿಂಗ್ ಸ್ಟಾಫ್‌ಗಳಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಆದರೆ ಸೋಮವಾರ ನಡೆಸಿದ ಎರಡನೇ ಪರೀಕ್ಷೆಯಲ್ಲಿ ಈ ವರದಿ ನೆಗೆಟಿವ್ ಎಂದಾಗಿತ್ತು. ಇದಾದ ಮರು ದಿನ ನಡೆಸಿದ ಪರೀಕ್ಷೆಯಲ್ಲಿ ಮೈಕ್ ಹಸ್ಸಿ ವರದಿ ಕೂಡ ಪಾಸಿಟಿವ್ ಬಂದಿತ್ತು. ಹೀಗಾಗಿ ಮತ್ತೊಂದು ಪರೀಕ್ಷೆಯಲ್ಲಿ ನೆಗೆಟಿವ್ ಬರುವ ನಿರೀಕ್ಷೆಯನ್ನು ಹೊಂದಿದ್ದರು. ಆದರೆ ದಿರದೃಷ್ಟವಶಾತ್ ಮೈಕ್ ಹಸ್ಸಿಯ ಎರಡನೇ ವರದಿ ಕೂಡ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಅವರು ಪ್ರತ್ಯೇಕವಾಗಿದ್ದಾರೆ.

Story first published: Thursday, May 6, 2021, 9:56 [IST]
Other articles published on May 6, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+