ಚೆನ್ನೈ ಸೂಪರ್ ಕಿಂಗ್ಸ್ ಪರ ಚೊಚ್ಚಲ ವಿಕೆಟ್ ಪಡೆದ ಮೊಯೀನ್ ಅಲಿ

ಮುಂಬೈ: 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಇಂಗ್ಲೆಂಡ್ ಆಲ್ ರೌಂಡರ್ ಮೊಯೀನ್ ಅಲಿ ಯೆಲ್ಲೋ ಆರ್ಮಿ ಪರ ಚೊಚ್ಚಲ ವಿಕೆಟ್ ಪಡೆದುಕೊಂಡಿದ್ದಾರೆ. ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 8ನೇ ಪಂದ್ಯದಲ್ಲಿ ಅಲಿಗೆ ಸೀಸನ್‌ನ ಮೊದಲ ವಿಕೆಟ್ ಲಭಿಸಿತು.
ಏಪ್ರಿಲ್ 16ರ ಶುಕ್ರವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಮೊಯೀನ್ ಅಲಿಗೆ ಜಾಯೆ ರಿಚರ್ಡ್ಸನ್ ಅವರ ವಿಕೆಟ್ ಲಭಿಸಿತು. 12.1ನೇ ಓವರ್‌ನಲ್ಲಿ ಅಲಿ, ರಿಚರ್ಡ್ಸನ್ ವಿಕೆಟ್ ಪಡೆದುಕೊಂಡರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಹೀಗಾಗಿ 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಜಾಯೆ ರಿಚರ್ಡ್ಸನ್ ಬಂದಿದ್ದರು. ಆದರೆ 15 ರನ್ ಬಾರಿಸಿದ ರಿಚರ್ಡ್ಸನ್ ಅಲಿ ಎಸೆತಕ್ಕೆ ಬೌಲ್ಡ್ ಆಗಿ ನಿರ್ಗಮಿಸಬೇಕಾಯ್ತು.
33ರ ಹರೆಯದ ಮೊಯೀನ್ 21 ಐಪಿಎಲ್ ಪಂದ್ಯಗಳಲ್ಲಿ 345 ರನ್, 11 ವಿಕೆಟ್ ದಾಖಲೆ ಹೊಂದಿದ್ದಾರೆ. 2021ರ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಆದರೆ ಈ ಬಾರಿಯ ಹರಾಜಿಗೂ ಮುನ್ನ ಆರ್‌ಸಿಬಿ ಅಲಿಯವರನ್ನು ತಂಡದಿಂದ ರಿಲೀಸ್ ಮಾಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications