ಐಪಿಎಲ್ : ಕೊಹ್ಲಿ , ರೋಹಿತ್ ಅಲ್ಲ ವಾರ್ನರ್ ಆಪತ್ಭಾಂದವ ಎನ್ನುತ್ತಿವೆ ಈ ಅಂಕಿಅಂಶ

14ನೇ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿ ಇದೇ ತಿಂಗಳ 9ರಿಂದ ಆರಂಭವಾಗಲಿದ್ದು ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸೆಣಸಾಡಲಿವೆ. ಈ ಬಾರಿಯ ಐಪಿಎಲ್ ಹಲವಾರು ದಾಖಲೆಗಳು ನಿರ್ಮಾಣವಾಗಲು ಮತ್ತು ಈಗಾಗಲೇ ಇರುವ ದಾಖಲೆಗಳನ್ನು ಅಳಿಸಿ ಹೊಸ ದಾಖಲೆ ನಿರ್ಮಿಸಲು ವೇದಿಕೆಯಾಗುವುದಂತೂ ಪಕ್ಕಾ.
ತಂಡವೊಂದರ ಪರ ಅತಿ ಹೆಚ್ಚು ಬಾರಿ ಅತ್ಯಧಿಕ ರನ್ ಗಳಿಸಿರುವ ಆಟಗಾರ ಎಂಬ ದಾಖಲೆಯನ್ನು ಡೇವಿಡ್ ವಾರ್ನರ್ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದು ಈ ಬಾರಿ ಮತ್ತಷ್ಟು ಪಂದ್ಯಗಳಲ್ಲಿ ಅತ್ಯಧಿಕ ರನ್ ಸ್ಕೋರರ್ ಆಗುವುದರ ಮೂಲಕ ತಮ್ಮ ದಾಖಲೆಯನ್ನು ತಮ್ಮ ಹೆಸರಿನಲ್ಲಿಯೇ ಉಳಿಸಿಕೊಳ್ಳುತ್ತಾರಾ ಅಥವಾ ಬೇರೆಯವರಿಗೆ ಬಿಟ್ಟು ಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕು. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದುವರೆಗೂ 142 ಇನ್ನಿಂಗ್ಸ್ ಆಡಿರುವ ಡೇವಿಡ್ ವಾರ್ನರ್ 52 ಪಂದ್ಯಗಳಲ್ಲಿ ತಮ್ಮ ತಂಡದ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ತಂಡವೊಂದರ ಪರ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಡೇವಿಡ್ ವಾರ್ನರ್ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ವಾರ್ನರ್ ಹೊರತುಪಡಿಸಿದರೆ ರೋಹಿತ್ ಶರ್ಮಾ ತಂಡವೊಂದರ ಪರ ಅತಿ ಹೆಚ್ಚು ಬಾರಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 195 ಇನ್ನಿಂಗ್ಸ್ ಆಡಿರುವ ಶರ್ಮಾ 47 ಪಂದ್ಯಗಳಲ್ಲಿ ತಂಡದ ಪರ ಅತ್ಯಧಿಕ ರನ್ ಗಳಿಸಿದ್ದಾರೆ.
184 ಐಪಿಎಲ್ ಇನ್ನಿಂಗ್ಸ್ ಆಡಿ 45 ಬಾರಿ ತಂಡದ ಪರ ಅತ್ಯಧಿಕ ರನ್ ಸ್ಕೋರರ್ ಆಗಿರುವ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 131 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿರುವ ಕ್ರಿಸ್ ಗೇಲ್ 44 ಪಂದ್ಯಗಳಲ್ಲಿ ತಂಡದ ಪರ ಅತಿ ಹೆಚ್ಚು ರನ್ ಗಳಿಸುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ. 175 ಇನ್ನಿಂಗ್ಸ್ ಆಡಿರುವ ಶಿಖರ್ ಧವನ್ 41 ಪಂದ್ಯಗಳಲ್ಲಿ ತಂಡದ ಪರ ಅತ್ಯಧಿಕ ರನ್ ಗಳಿಸುವುದರ ಮೂಲಕ ತಂಡವೊಂದರ ಪರ ಅತಿ ಹೆಚ್ಚು ಬಾರಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.
ಈ ಐದೂ ಬ್ಯಾಟ್ಸ್‌ಮನ್‌ಗಳು ಈ ವಿಶಿಷ್ಟ ದಾಖಲೆಯಲ್ಲಿ ಕಡಿಮೆ ಅಂತರದಲ್ಲಿಯೇ ಇರುವುದರಿಂದ ಒಬ್ಬರ ದಾಖಲೆಯನ್ನು ಮತ್ತೊಬ್ಬರು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಳಿಸಿ ಹಾಕುವ ಸಾಧ್ಯತೆಗಳಿವೆ. ಐಪಿಎಲ್ ಮುಗಿದ ನಂತರ ತಂಡದ ಪರ ಹೆಚ್ಚು ಬಾರಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಯಾವ ಆಟಗಾರ ಯಾವ ಸ್ಥಾನದಲ್ಲಿರುತ್ತಾರೆ ಎಂಬುದನ್ನು ಕಾದು ನೋಡಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications