ಐಪಿಎಲ್ ಪಂದ್ಯದಲ್ಲಿ ಅತೀ ಹೆಚ್ಚು ಸಾರಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿ

ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಆರ್‌ಸಿಬಿ ರೋಚಕ 6 ರನ್‌ಗಳ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ಎಸ್‌ಆರ್‌ಎಚ್ ನಾಯಕ ಡೇವಿಡ್ ವಾರ್ನರ್ ಹೋರಾಟದ ಹೊರತಾಗಿಯೂ ಹೈದರಾಬಾದ್ ಸೋಲು ಕಂಡಿತ್ತು.
ಪಂದ್ಯದ ಸೋಲಿನೊಂದಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಟೂರ್ನಿಯಲ್ಲಿ ಸತತ ಎರಡು ಸೋಲುಗಳನ್ನು ಕಂಡಿದೆಯಾದರೂ ಡೇವಿಡ್ ವಾರ್ನರ್ ವಿಶೇಷ ದಾಖಲೆಗೆ ಕಾರಣರಾಗಿದ್ದಾರೆ. ಬುಧವಾರದ ಪಂದ್ಯದಲ್ಲಿ ವಾರ್ನರ್ ತಂಡದ ಪರ 37 ಎಸೆತಗಳಲ್ಲಿ 54 ರನ್ ಬಾರಿಸಿದ್ದರು. ಇದರೊಂದಿಗೆ ಐಪಿಎಲ್‌ನಲ್ಲಿ ಅತೀ ಹೆಚ್ಚು ಬಾರಿ ಅತ್ಯಧಿಕ ರನ್ ಗಳಿಸಿದ ದಾಖಲೆ ಪಟ್ಟಿಯಲ್ಲಿ ವಾರ್ನರ್ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ.
ಅತೀ ಹೆಚ್ಚು ಬಾರಿ ಅತ್ಯಧಿಕ ರನ್ ಎಂದರೆ ಇನ್ನಿಂಗ್ಸ್ ಒಂದರಲ್ಲಿ ಒಬ್ಬ ಆಟಗಾರ ಮಾತ್ರ ಹೆಚ್ಚಿನ ರನ್ ಕೊಡುಗೆ ನೀಡಿರುತ್ತಾನೆ. ಉಳಿದ ಎಲ್ಲಾ ಆಟಗಾರರು ಗಮನಾರ್ಹ ರನ್ ಕೊಡುಗೆ ನೀಡಿರುವುದಿಲ್ಲ. ಅಂಥ ಹೆಚ್ಚಿನ ಪಂದ್ಯಗಳಲ್ಲಿ ವಾರ್ನರ್ ಕೊಡುಗೆ ಜಾಸ್ತಿ ಕಾಣಿಸುತ್ತಿದೆ.
ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್
ಐಪಿಎಲ್‌ನಲ್ಲಿ ತಂಡದ ಪರ ಅತೀ ಹೆಚ್ಚು ಬಾರಿ ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ
* ಡೇವಿಡ್ ವಾರ್ನರ್, ಆಸ್ಟ್ರೇಲಿಯಾ, 53 ಸಾರಿ
* ರೋಹಿತ್ ಶರ್ಮಾ, ಭಾರತ, 47 ಸಾರಿ
* ವಿರಾಟ್ ಕೊಹ್ಲಿ, ಭಾರತ, 45 ಸಾರಿ
* ಕ್ರಿಸ್ ಗೇಲ್, ವೆಸ್ಟ್ ಇಂಡೀಸ್, 44 ಸಾರಿ
* ಶಿಖರ್ ಧವನ್, ಭಾರತ, 42 ಸಾರಿ
* ಎಬಿ ಡಿ ವಿಲಿಯರ್ಸ್, ದಕ್ಷಿಣ ಆಫ್ರಿಕಾ, 40 ಸಾರಿ
* ಗೌತಮ್ ಗಂಭೀರ್, ಭಾರತ, 40 ಸಾರಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications