ಐಪಿಎಲ್‌ನಲ್ಲಿ ಅತೀ ಹೆಚ್ಚು ಗೆಲುವುಗಳ ದಾಖಲೆಯಿರುವ ತಂಡಗಳ ಪಟ್ಟಿ

ಬೆಂಗಳೂರು: ಕಳೆದ ಬಾರಿ ಕೊರೊನಾವೈರಸ್ ಕಾರಣ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಲ್ಲಿ ನಡೆದಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕಳೆದು, ಕಡಿಮೆ ದಿನಗಳ ಅಂತರದಲ್ಲಿ 14ನೇ ಆವೃತ್ತಿಯ ಐಪಿಎಲ್ ಬಂದಿದೆ. ಏಪ್ರಿಲ್ 9ರಿಂದ ಮೇ 30ರ ವರೆಗೆ ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಭಾರತದಲ್ಲಿ ನಡೆಯಲಿದೆ.
ಐಪಿಎಲ್ ಇತಿಹಾಸ ಕೆದಕಿದರೆ ಅತೀ ಬಲಿಷ್ಠ ತಂಡವಾಗಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಕಾಣಿಸುತ್ತದೆ. ಎಂಐ ಒಟ್ಟಾರೆ 5 ಐಪಿಎಲ್ ಟ್ರೋಫಿಗಳನ್ನು ಗೆದ್ದಿದೆ. ಅದು ಬಿಟ್ಟರೆ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 3 ಬಾರಿ ಚಾಂಪಿಯನ್ಸ್ ಆಗಿದೆ.
ಹೆಚ್ಚು ಟ್ರೋಫಿ ಗೆದ್ದ ತಂಡಗಳನ್ನು ಬದಿಗಿಟ್ಟು ಐಪಿಎಲ್‌ನಲ್ಲಿ ಅತೀ ಹೆಚ್ಚು ಗೆಲುವುಗಳ ದಾಖಲೆಯಿರುವ ತಂಡಗಳನ್ನು ಗಮನಿಸಿದರೆ ಇದರಲ್ಲೂ ಸಹಜವಾಗೇ ಅಗ್ರ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡ ಬರುತ್ತದೆ. ವಿಶೇಷವೆಂದರೆ ಒಂದು ಬಾರಿಯೂ ಟ್ರೋಫಿಯೇ ಗೆಲ್ಲದ, ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಈ ದಾಖಲೆ ಪಟ್ಟಿಯಲ್ಲಿದೆ.
ಪಿಎಲ್‌ನಲ್ಲಿ ಹೆಚ್ಚು ಗೆಲುವಿನ ದಾಖಲೆ ಹೊಂದಿರುವ ತಂಡಗಳ ಪಟ್ಟಿ
* ಮುಂಬೈ ಇಂಡಿಯನ್ಸ್, 5 ಟ್ರೋಫಿಗಳು, 118 ಗೆಲುವುಗಳು
* ಚೆನ್ನೈ ಸೂಪರ್ ಕಿಂಗ್ಸ್, 3 ಟ್ರೋಫಿಗಳು, 106 ಗೆಲುವುಗಳು
* ಕೋಲ್ಕತ್ತಾ ನೈಟ್ ರೈಡರ್ಸ್, 2 ಕಪ್‌ಗಳು, 98 ಗೆಲುವುಗಳು
* ರಾಯಲ್ ಚಾಲೆಂಜರ್ಸ್ ಬೆಂಗಳೂರು, 0 ಟ್ರೋಫಿ, 89 ಗೆಲುವುಗಳು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications