
ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಸಿಎಸ್‌ಕೆಗೆ ವಿಕೆಟ್ ಕೀಪರ್ ಆಗಿ ಕೂಲ್ ಕ್ಯಾಪ್ಟನ್ ಧೋನಿ 100 ಕ್ಯಾಚ್‌ಗಳನ್ನು ಪೂರೈಸಿದ್ದಾರೆ. ಗುರುವಾರ (ಸೆಪ್ಟೆಂಬರ್ 30) ನಡೆದ ಐಪಿಎಲ್ 44ನೇ ಪಂದ್ಯದಲ್ಲಿ ಧೋನಿ ಈ ದಾಖಲೆ ನಿರ್ಮಿಸಿದ್ದಾರೆ.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಎಂಎಸ್ ಧೋನಿ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ 100 ಕ್ಯಾಚ್‌ಗಳನ್ನು ಪೂರೈಸಿದ್ದಾರೆ. ಈ ಪಂದ್ಯದಲ್ಲಿ ಧೋನಿ ಮೂರು ಕ್ಯಾಚ್‌ಗಳನ್ನು ಪಡೆದಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್‌ನ ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್, ವೃದ್ಧಿಮಾನ್ ಸಾಹ ಮತ್ತು ಪ್ರಿಯಮ್ ಗರ್ಗ್ ಅವರ ಕ್ಯಾಚ್‌ಗಳು ಧೋನಿಗೆ ಲಭಿಸಿತ್ತು. 2 ರನ್ ಬಾರಿಸಿದ ರಾಯ್ ಜೋಶ್ ಹ್ಯಾಝಲ್ವುಡ್ ಓವರ್‌ನಲ್ಲಿ ಔಟಾದರೆ, ಸಾಹ 44 ರನ್ ಬಾರಿಸಿ ರವೀಂದ್ರ ಜಡೇಜಾ ಅವರ ಓವರ್‌ನಲ್ಲಿ ನಿರ್ಗಮಿಸಿದರು.
ಗರ್ಗ್ 7 ರನ್ ಬಾರಿಸಿ ಡ್ವೇನ್ ಬ್ರಾವೋ ಓವರ್‌ನಲ್ಲಿ ಔಟ್ ಆದರು. 40ರ ಹರೆಯದ ಧೋನಿ 215ನೇ ಐಪಿಎಲ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಧೋನಿ 90 ಟೆಸ್ಟ್ ಪಂದ್ಯಗಳಲ್ಲಿ 4876 ರನ್, 350 ಏಕದಿನ ಪಂದ್ಯಗಳಲ್ಲಿ 10773 ರನ್, 98 ಟಿ20ಐ ಪಂದ್ಯಗಳಲ್ಲಿ 1617 ರನ್, 215 ಐಪಿಎಲ್ ಪಂದ್ಯಗಳಲ್ಲಿ 4684 ರನ್ ದಾಖಲೆ ಹೊಂದಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಎಸ್‌ಆರ್‌ಎಚ್, ಜೇಸನ್ ರಾಯ್ 2, ವೃದ್ಧಿಮಾನ್ ಸಹಾ 44, ಕೇನ್ ವಿಲಿಯಮ್ಸನ್ 11, ಪ್ರಿಯಂ ಗರ್ಗ್ 7, ಅಭಿಷೇಕ್ ಶರ್ಮಾ 18, ಅಬ್ದುಲ್ ಸಮದ್ 18, ಜೇಸನ್ ಹೋಲ್ಡರ್ 5, ರಶೀದ್ ಖಾನ್ 17, ಭುವನೇಶ್ವರ್ ಕುಮಾರ್ 2 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 134 ರನ್ ಗಳಿಸಿತ್ತು.
ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI
ಜೇಸನ್ ರಾಯ್, ವೃದ್ಧಿಮಾನ್ ಸಹಾ (ವಿಕೆ), ಕೇನ್ ವಿಲಿಯಮ್ಸನ್ (ಸಿ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ.
ಬೆಂಚ್: ಡೇವಿಡ್ ವಾರ್ನರ್, ಶ್ರೀವತ್ಸ್ ಗೋಸ್ವಾಮಿ, ಮನೀಶ್ ಪಾಂಡೆ, ಕೇದಾರ್ ಜಾಧವ್, ಮೊಹಮ್ಮದ್ ನಬಿ, ಶಹಬಾಜ್ ನದೀಮ್, ವಿಜಯ್ ಶಂಕರ್, ವಿರಾಟ್ ಸಿಂಗ್, ಬೆಸಿಲ್ ತಂಪಿ, ಜಗದೀಶ ಸುಚಿತ್, ಖಲೀಲ್ ಅಹ್ಮದ್, ಮುಜೀಬ್ ಉರ್ ರೆಹಮಾನ್, ಶೆರ್ಫೇನ್ ರುದರ್‌ಫೋರ್ಡ್, ಉಮ್ರಾನ್ ಮಲಿಕ್.
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI
ರುತುರಾಜ್ ಗಾಯಕವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಅಂಬಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ (ಸಿ & ವಿಕೆ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹಜಲ್‌ವುಡ್.
ಬೆಂಚ್: ರಾಬಿನ್ ಉತ್ತಪ್ಪ, ಚೇತೇಶ್ವರ ಪೂಜಾರ, ಕರ್ಣ್ ಶರ್ಮಾ, ಇಮ್ರಾನ್ ತಾಹಿರ್, ಜೇಸನ್ ಬೆಹ್ರೆಂಡಾರ್ಫ್, ಕೃಷ್ಣಪ್ಪ ಗೌತಮ್, ಲುಂಗಿ ನ್ಗಿಡಿ, ಮಿಚೆಲ್ ಸ್ಯಾಂಟ್ನರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಹರಿ ನಿಶಾಂತ್, ಎನ್ ಜಗದೀಶನ್, ಕೆಎಂ ಆಸಿಫ್, ಹರಿಶಂಕರ್ ರೆಡ್ಡಿ, ಭಗತ್ ವರ್ಮ, ಸ್ಯಾಮ್ ಕರನ್.