Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಎಂಎಸ್ ಧೋನಿಯ ಹೊಸ ಅವತಾರದ ಫೋಟೋ ವೈರಲ್

IPL 2021: MS Dhonis new avatar surprised fans, photo goes viral

ಚೆನ್ನೈ: ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಕ್ರಿಕೆಟ್ ವೃತ್ತಿ ಬದುಕಿನ ಆರಂಭಿಕ ದಿನಗಳಲ್ಲಿ ಉದ್ದ ಕೂದಲಿನ ಆಕರ್ಷಣೀಯ ಆಟಗಾರನಾಗಿ ಗಮನ ಸೆಳೆದಿದ್ದರು. ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಎಂಎಸ್‌ಡಿ ಫೋಟೋ ಹರಿದಾಡುತ್ತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಅಧಿಕೃತ ಪ್ರಸಾರಕ ಸ್ಟಾರ್‌ಸ್ಪೋರ್ಟ್ಸ್‌ ತನ್ನ ಟ್ವಿಟರ್ ಖಾತೆಯಲ್ಲಿ ಒಂದು ಫೋಟೋ ಹಾಕಿಕೊಂಡಿದೆ. ಈ ಚಿತ್ರದಲ್ಲಿ ಎಂಎಸ್ ಧೋನಿ ಬೌದ್ಧ ಬಿಕ್ಷುವಿನ ಅವತಾರದಲ್ಲಿದ್ದಾರೆ. 2011ರಲ್ಲಿ ವಿಶ್ವಕಪ್‌ ಗೆದ್ದಾಗಲೂ ಧೋನಿ ಇದೇ ರೀತಿ ತಲೆ ಬೋಳಿಸಿ ಟ್ರೋಫಿಯೊಂದಿಗೆ ಪೋಸ್ ನೀಡಿದ್ದರು.

ಧೋನಿಯ ಫೋಟೋ ಹಾಕಿಕೊಂಡಿರುವ ಸ್ಟಾರ್‌ ಸ್ಪೋರ್ಟ್ಸ್‌, 'ಇಂಟರ್‌ನೆಟ್‌ನಲ್ಲಿ ಓಡಾಡುತ್ತಿರುವ ಈ ಫೋಟೋದಲ್ಲಿ ಎಂಎಸ್ ಧೋನಿಯ ಅವತಾರ ನೋಡಿದಾಗ ನಮ್ಮ ಮುಖದಲ್ಲಿ ಅಚ್ಚರಿ ಮಿನುಗಿತು. ಈ ಚಿತ್ರ ನೋಡುವಾಗ ನಿಮಗೇನು ಅನ್ನಿಸುತ್ತದೆ?,' ಎಂದು ಬರೆದುಕೊಂಡಿದೆ.

ಭಾರತ vs ಇಂಗ್ಲೆಂಡ್ ದ್ವಿತೀಯ ಟಿ20ಐ ವೇಳೆಗೆ ಧೋನಿಯ ಈ ಫೋಟೋ ಸಖತ್ ಟ್ರೆಂಡ್ ಆಗಿತ್ತು. ಸ್ಟಾರ್ ಸ್ಪೋರ್ಟ್ಸ್‌ ಹಾಕಿದ್ದ ಧೋನಿಯ ಈ ವಿಡಿಯೋದಲ್ಲಿ ರೋಹಿತ್ ಶರ್ಮಾ ಬಗ್ಗೆ ಬ್ಯಾಟಿಂಗ್‌ನ ಉಲ್ಲೇಖವಿತ್ತು. ಆದರೆ ಶರ್ಮಾ ಇಂಗ್ಲೆಂಡ್ ವಿರುದ್ಧದ ಆರಂಭಿಕ ಎರಡೂ ಪಂದ್ಯಗಳಲ್ಲಿ ಆಡದೆ ವಿಶ್ರಾಂತಿಯಲ್ಲಿದ್ದರು.

ಸ್ಟಾರ್ ಸ್ಪೋರ್ಟ್ಸ್‌ನ ಈ ಚಿತ್ರಕ್ಕೆ ಅನೇಕರು ಬೇರೆ ಬೇರೆ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. 2021ರ ಐಪಿಎಲ್‌ಗಾಗಿ ಎಂಎಸ್‌ಡಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಸದ್ಯ ಚೆನ್ನೈನಲ್ಲಿ ಅಭ್ಯಾಸ ನಡೆಸುತ್ತಿದೆ. 14ನೇ ಆವೃತ್ತಿಯ ಐಪಿಎಲ್ ಆರಂಭಿಕ ಪಂದ್ಯದಲ್ಲಿ (ಏಪ್ರಿಲ್ 9ರಂದು ಚೆನ್ನೈನಲ್ಲಿ) ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಾದಾಡಲಿವೆ.

Story first published: Monday, March 15, 2021, 9:59 [IST]
Other articles published on Mar 15, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+