ಎಂಎಸ್ ಧೋನಿ ವಿಕೆಟ್ ಪಡೆಯುವ ಕನಸು ನನಸಾಗಿದೆ: ಆವೇಶ್ ಖಾನ್

ಮುಂಬೈ: ಟೀಮ್ ಇಂಡಿಯಾದ ಮಾಜಿ ನಾಯಕ ಎಂಸ್ ಧೋನಿ ವಿಶ್ವ ಶ್ರೇಷ್ಠ ಕ್ರಿಕೆಟರ್‌ಗಳಲ್ಲಿ ಗುರುತಿಸಿಕೊಂಡವರು. ಭಾರತಕ್ಕೆ ವಿಶ್ವ ಟ್ರೋಫಿಗಳನ್ನು ಗೆದ್ದುಕೊಟ್ಟ ಹಿರಿಮೆ ಎಂಎಸ್‌ಡಿಗಿದೆ. ಹೀಗಾಗಿ ಜನಪ್ರಿಯ ಆಟಗಾರರಲ್ಲಿ ಗುರುತಿಸಿಕೊಂಡಿರುವ ಮಾಹಿ ವಿಕೆಟ್ ಪಡೆಯೋದು ಯಾವ ಬೌಲರ್‌ಗಾದರೂ ಖುಷಿ ಕೊಡುವ ವಿಚಾರವೆ.
ಡೆಲ್ಲಿ ಕ್ಯಾಪಿಟಲ್ಸ್‌ನ ವೇಗಿ ಆವೇಶ್ ಖಾನ್‌ಗೆ 'ಕೂಲ್ ಕ್ಯಾಪ್ಟನ್' ಧೋನಿಯ ವಿಕೆಟ್ ಪಡೆಯಬೇಕನ್ನೋ ದೊಡ್ಡ ಕನಸಿತ್ತಂತೆ. ಆ ಕನಸೀಗ ನಿಜವಾಗಿದೆ ಎಂದು ಖಾನ್ ಖುಷಿ ತೋರಿಕೊಂಡಿದ್ದಾರೆ. ಏಪ್ರಿಲ್ 10ರಂದು ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿ ಪಂದ್ಯದಲ್ಲಿ ಧೋನಿ ವಿಕೆಟ್ ಖಾನ್‌ಗೆ ಲಭಿಸಿತ್ತು.
ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್
ಐಪಿಎಲ್ 2ನೇ ಪಂದ್ಯದಲ್ಲಿ ಡಿಸಿ-ಸಿಎಸ್‌ಕೆ ಮುಖಾಮುಖಿಯಾಗಿದ್ದಾಗ 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಧೋನಿ 2 ಎಸೆತಗಳನ್ನು ಎದುರಿಸಿ 0 ರನ್‌ಗೆ ಆವೇಶ್‌ಗೆ ಬೌಲ್ಡ್ ಆಗಿದ್ದರು. ಈ ಪಂದ್ಯದಲ್ಲಿ ಆವೇಶ್‌ಗೆ 2 ವಿಕೆಟ್‌ಗಳು ಲಭಿಸಿದ್ದವು, ಸಿಎಸ್‌ಕೆ 7 ವಿಕೆಟ್‌ಗಳ ಸೋಲನುಭವಿಸಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ರಿಲೀಸ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ 24ರ ಹರೆಯದ ಆವೇಶ್, '3 ವರ್ಷಗಳ ಹಿಂದೆ ನನಗೆ ಮಾಹಿ ವಿಕೆಟ್ ಪಡೆಯುವ ಅವಕಾಶವಿತ್ತು. ಆದರೆ ಯಾರೋ ಕ್ಯಾಚ್ ಕೈಚೆಲ್ಲಿದ್ದರು. ಮಾಹಿ ವಿಕೆಟ್ ಪಡೆಯಬೇಕೆನ್ನುವ ನನ್ನ ಕನಸು ಈಗ ಕೈಗೂಡಿದೆ. ಹೀಗಾಗಿ ನನಗೆ ಖುಷಿಯಾಗಿದೆ,' ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications