For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಅತೀ ವೇಗದ ಅರ್ಧ ಶತಕ ಚಚ್ಚಿದ ಇಶಾನ್ ಕಿಶನ್!

IPL 2021: Mumbai Indians Ishan Kishan smashes fastest fifty in IPL

ಅಬುಧಾಬಿ: ಮುಂಬೈ ಇಂಡಿಯನ್ಸ್ ಯುವ ಬ್ಯಾಟ್ಸ್‌ಮನ್‌ ಇಶಾನ್ ಕಿಶನ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ವಿಶಿಷ್ಠ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ವೇಗವಾಗಿ ಅರ್ಧ ಶತಕ ಬಾರಿಸಿದ ದಾಖಲೆ ಪಟ್ಟಿಗೆ ಕಿಶನ್ ಸೇರ್ಪಡೆಯಾಗಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಕಿಶನ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾರೆ. ಐಪಿಎಲ್‌ನಲ್ಲಿ ವೇಗದ ಅರ್ಧ ಶತಕಕ್ಕಾಗಿ ಕಿಶನ್ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಶುಕ್ರವಾರ (ಅಕ್ಟೋಬರ್ 8) ನಡೆದ ಐಪಿಎಲ್ 55ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರಂಭಿಕರಾಗಿ ಬಂದಿದ್ದ ಇಶಾನ್ ಕಿಶನ್ 32 ಎಸೆತಗಳಲ್ಲಿ 84 ರನ್ ಚಚ್ಚಿದ್ದರು. ಇದರಲ್ಲಿ 11 ಫೋರ್ಸ್, 4 ಸಿಕ್ಸರ್ ಸೇರಿತ್ತು.

ಕಿಶನ್ ಹೆಸರಿಗೆ ಹಲವಾರು ದಾಖಲೆ ಸೇರ್ಪಡೆ

ಕಿಶನ್ ಹೆಸರಿಗೆ ಹಲವಾರು ದಾಖಲೆ ಸೇರ್ಪಡೆ

84 ರನ್ ಬಾರಿಸಿದ ಕಿಶನ್ 9.1ನೇ ಓವರ್‌ನಲ್ಲಿ ಉಮ್ರಾನ್ ಮಲಿಕ್ ಅವರ ಎಸೆತಕ್ಕೆ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು. ಅಷ್ಟರಲ್ಲಾಗಲೇ ಕಿಶನ್ ಹೆಸರಿನಲ್ಲಿ ದಾಖಲೆ ನಿರ್ಮಾಣವಾಗಿತ್ತು. ಐಪಿಎಲ್‌ನಲ್ಲಿ ವೇಗದ ಅರ್ಧ ಶತಕಕ್ಕಾಗಿ ಕಿಶನ್ ಈಗ ದಾಖಲೆ ಪಟ್ಟಿ ಸೇರಿದ್ದಾರೆ. ಕೇವಲ 16 ಎಸೆತಗಳಲ್ಲಿ ಕಿಶನ್ 50 ರನ್ ಪೂರೈಸಿದ್ದಾರೆ. ಐಪಿಎಲ್‌ನಲ್ಲಿ ಅನೇಕ ದಾಖಲೆಗಳು ಇಶಾನ್ ಹೆಸರಿಗೆ ಸೇರ್ಪಡೆಯಾಗಿದೆ. ಮುಂಬೈ ಪರ ಅತೀ ವೇಗದ ಅರ್ಧ ಶತಕ, ಯುಎಇಯಲ್ಲಿ ನಡೆದ ಐಪಿಎಲ್‌ನಲ್ಲಿ ಅತೀ ವೇಗದ ಅರ್ಧ ಶತಕ, ಐಪಿಎಲ್‌ನಲ್ಲಿ ಸಾರ್ವಕಾಲಿಕ ವೇಗದ ಅರ್ಧ ಶತಕ ದಾಖಲೆಗಳ ಪಟ್ಟಿಯಲ್ಲಿ ಮೂರನೇ ಅತೀ ವೇಗ ಅರ್ಧ ಶತಕ ದಾಖಲೆ ಕಿಶನ್ ಹೆಸರಿಗೆ ಸೇರ್ಪಡೆಯಾಗಿದೆ.

ಐಪಿಎಲ್‌ನಲ್ಲಿ ವೇಗ ಅರ್ಧ ಶತಕ ದಾಖಲೆಗಳು

ಐಪಿಎಲ್‌ನಲ್ಲಿ ವೇಗ ಅರ್ಧ ಶತಕ ದಾಖಲೆಗಳು

(ಐಪಿಎಲ್‌ನಲ್ಲಿ ಅತೀ ವೇಗದ ಅರ್ಧ ಶತಕ ದಾಖಲೆಗಳು ಹಲವಾರು ಬ್ಯಾಟ್ಸ್‌ಮನ್‌ಗಳ ಹೆಸರಿನಲ್ಲಿದೆ. ಈಗ ಪಂಜಾಬ್ ಕಿಂಗ್ಸ್‌ ತಂಡದ ನಾಯಕರಾಗಿರುವ ಕೆಎಲ್ ರಾಹುಲ್ ಈ ಯಾದಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಯೂಸುಫ್ ಪಠಾಣ್ ಕೂಡ ಇದ್ದಾರೆ)
ಐಪಿಎಲ್‌ನಲ್ಲಿ ಅತೀ ವೇಗದ ಅರ್ಧ ಶತಕ ದಾಖಲೆಗಳ ಪಟ್ಟಿ
* ಕೆಎಲ್ ರಾಹುಲ್, 14 ಎಸೆತಗಳಲ್ಲಿ 50 ರನ್
* ಯೂಸುಫ್ ಪಠಾಣ್, 15 ಎಸೆತಗಳಲ್ಲಿ 50 ರನ್
* ಸುನಿಲ್ ನರೈನ್, 15 ಎಸೆತಗಳಲ್ಲಿ 50 ರನ್
* ಸುರೇಶ್ ರೈನಾ, 16 ಎಸೆತಗಳಲ್ಲಿ 50 ರನ್
* ಇಶಾನ್ ಕಿಶನ್, 16 ಎಸೆತಗಳಲ್ಲಿ 50 ರನ್

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI
ರೋಹಿತ್ ಶರ್ಮಾ (ಸಿ), ಇಶಾನ್ ಕಿಶನ್ (ವಿಕೆ), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ಜಸ್ಪ್ರೀತ್ ಬೂಮ್ರಾ, ಪಿಯೂಷ್ ಚಾವ್ಲಾ, ಟ್ರೆಂಟ್ ಬೌಲ್ಟ್.
ಬೆಂಚ್: ಕ್ವಿಂಟನ್ ಡಿ ಕಾಕ್, ಆಡಮ್ ಮಿಲ್ನೆ, ರಾಹುಲ್ ಚಹಾರ್, ಆದಿತ್ಯ ತಾರೆ, ಧವಳ್ ಕುಲಕರ್ಣಿ, ಕ್ರಿಸ್ ಲಿನ್, ರೋಶ್ ಕಲರಿಯಾ, ಅನ್ಮೋಲ್ ಪ್ರೀತ್ ಸಿಂಗ್, ಅನುಕೂಲ್ ರಾಯ್, ಮಾರ್ಕೊ ಜಾನ್ಸೆನ್, ಯುಧ್ವೀರ್ ಸಿಂಗ್, ಸೌರಭ್ ತಿವಾರಿ, ಜಯಂತ್ ಯಾದವ್.
ಸನ್ ರೈಸರ್ಸ್ ಹೈದರಾಬಾದ್
ಜೇಸನ್ ರಾಯ್, ಅಭಿಷೇಕ್ ಶರ್ಮಾ, ಮನೀಶ್ ಪಾಂಡೆ (ಸಿ), ಪ್ರಿಯಂ ಗಾರ್ಗ್, ಅಬ್ದುಲ್ ಸಮದ್, ವೃದ್ಧಿಮಾನ್ ಸಹಾ (w), ಜೇಸನ್ ಹೋಲ್ಡರ್, ರಶೀದ್ ಖಾನ್, ಮೊಹಮ್ಮದ್ ನಬಿ, ಉಮ್ರಾನ್ ಮಲಿಕ್, ಸಿದ್ದಾರ್ಥ್ ಕೌಲ್.
ಬೆಂಚ್: ಶ್ರೀವತ್ಸ್ ಗೋಸ್ವಾಮಿ, ಕೇದಾರ್ ಜಾಧವ್, ಜಗದೀಶ ಸುಚಿತ್, ಶಹಬಾಜ್ ನದೀಮ್, ಖಲೀಲ್ ಅಹಮದ್, ಸಂದೀಪ್ ಶರ್ಮಾ, ವಿರಾಟ್ ಸಿಂಗ್, ಡೇವಿಡ್ ವಾರ್ನರ್, ಬೇಸಿಲ್ ತಂಪಿ, ಮುಜೀಬ್ ಉರ್ ರೆಹಮಾನ್, ಕೇನ್ ವಿಲಿಯಮ್ಸನ್, ಭುವನೇಶ್ವರ್ ಕುಮಾರ್.

Story first published: Saturday, October 9, 2021, 10:45 [IST]
Other articles published on Oct 9, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+