For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಅತೀ ವೇಗದ ಅರ್ಧ ಶತಕ ದಾಖಲೆ ಬರೆದ ಪೊಲಾರ್ಡ್

IPL 2021: Mumbai Indians Kieron Pollard created fastest fifty record in IPL

ನವದೆಹಲಿ: ದೆಹಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ಮೇ 1ರಂದು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 27ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ 4 ವಿಕೆಟ್‌ ರೋಚಕ ಜಯ ಗಳಿಸಿದೆ. ಐಪಿಎಲ್ ನಲ್ಲಿ ಎಂಐ ತಂಡ 200+ ದೊಡ್ಡ ಮೊತ್ತವನ್ನು ಚೇಸ್ ಮಾಡಿ ಗೆದ್ದ ದಾಖಲೆ ಇದಾಗಿದೆ.

ಇದೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆಲ್ ರೌಂಡರ್, ವೆಸ್ಟ್‌ ಇಂಡೀಸ್‌ನ ಪ್ರಮುಖ ಆಟಗಾರ ಕೀರನ್ ಪೊಲಾರ್ಡ್ ಅತೀ ವೇಗದ ಅರ್ಧ ಶತಕ ದಾಖಲೆ ನಿರ್ಮಿಸಿದ್ದಾರೆ. ಕೇವಲ 17 ಎಸೆತಗಳಲ್ಲಿ ಪೊಲಾರ್ಡ್ 50 (ಅಸಲಿಗೆ 17 ಎಸೆತಗಳಲ್ಲಿ 53 ರನ್) ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದಾರೆ.

ಎಂಐ ಪರ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಕೀರನ್ ಪೊಲಾರ್ಡ್ 34 ಎಸೆತಗಳಲ್ಲಿ ಅಜೇಯ 87 ರನ್ ಸೇರಿಸಿದರು. ಇದರಲ್ಲಿ 6 ಫೋರ್ಸ್, 8 ಸಿಕ್ಸರ್ ಸೇರಿತ್ತು. ಅಲ್ಲದೆ ಐಪಿಎಲ್‌ನಲ್ಲಿ ವೇಗದ ಅರ್ಧಶತಕ ದಾಖಲೆಗಾಗಿಯೂ ಪೊಲಾರ್ಡ್ ಗುರುತಿಸಿಕೊಂಡರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಉತ್ತಮ ಆರಂಭ ಲಭಿಸಿತು. ಫಾಫ್ ಡು ಪ್ಲೆಸಿಸ್ 50 (28), ಮೊಯೀನ್ ಅಲಿ 58 (36), ಅಂಬಾಟಿ ರಾಯುಡು 72 (27), ರವೀಂದ್ರ ಜಡೇಜಾ 22, ಋತುರಾಜ್ ಗಾಯಕ್ವಾಡ್ 4, ಸುರೇಶ್ ರೈನಾ 2 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 218 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, ಕ್ವಿಂಟನ್ ಡಿ ಕಾಕ್ 38, ರೋಹಿತ್ ಶರ್ಮಾ 35, ಕೃನಾಲ್ ಪಾಂಡ್ಯ 32, ಕೀರನ್ ಪೊಲಾರ್ಡ್ ಅಜೇಯ 87 (34), ಹಾರ್ದಿಕ್ ಪಾಂಡ್ಯ 16 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 219 ರನ್ ಗಳಿಸಿತು.

Story first published: Sunday, May 2, 2021, 7:34 [IST]
Other articles published on May 2, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+