ಐಪಿಎಲ್ 2021: ಮುಂಬೈ ಇಂಡಿಯನ್ಸ್ ಉಳಿಸಿಕೊಳ್ಳುವ ಹಾಗೂ ಕೈಬಿಡಬಹುದಾದ ಆಟಗಾರರ ಪಟ್ಟಿ

ಐಪಿಎಲ್ ಟೂರ್ನಿಯಲ್ಲಿ ಸತತ ಎರಡನೇ ವರ್ಷ ಪ್ರಶಸ್ತಿಗೆ ಮುತ್ತಿಕ್ಕಿದ ಮುಂಬೈ ಇಂಡಿಯನ್ಸ್ ಅತ್ಯಂತ ಬಲಿಷ್ಠ ತಂಡ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ತಂಡ ನಿಜವಾದ ಚಾಂಪಿಯನ್ ತಂಡವಾಗಿ ಬೆಳೆದುನಿಂತಿದೆ. ಪ್ರತಿಭಾನ್ವಿತ ಆಟಗಾರರನ್ನು ಬೆಳೆಸಿ ತಂಡವನ್ನೂ ಬಲಿಷ್ಟಗೊಳಿಸಿದೆ. ಮುಂದಿನ ಆವೃತ್ತಿಯಲ್ಲೂ ಮುಂಬೈ ಬಲಿಷ್ಠ ತಂಡವಾಗಿಯೆ ಉಳಿದುಕೊಳ್ಳಲಿದೆ.
2013ರ ಐಪಿಎಲ್ ಆವೃತ್ತಿಯ ಬಳಿಕ ಮುಂಬೈ ಸತತವಾಗಿ ಯಶಸ್ಸನ್ನು ಗಳಿಸುತ್ತಲೇ ಬಂದಿದೆ. ಎರಡು ವರ್ಷಕ್ಕೊಂದರಂತೆ ಟ್ರೋಫಿಯನ್ನು ಗೆದ್ದು ಬೀಗಿದೆ. ಈ ಬಾರಿ ಸತತ ಎರಡನೆ ಬಾರಿಗೆ ಈ ಸಾಧನೆಯನ್ನು ಮಾಡಿದೆ. ಈ ಬಾರಿ ಮೆಗಾ ಆಕ್ಷನ್ ಪ್ರಕ್ರಿಯೆ ನಡೆಯಲಿದೆ. ಆ ಮೆಗಾ ಆಕ್ಷನ್‌ನಲ್ಲಿ ಮುಂಬೈ ತಂಡದ ಬದಲಾವಣೆಯ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿಸಿದೆ.
ಆದರೆ ಮುಂಬೈ ತಂಡ ದೊಡ್ಡ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆಯಿದೆ. ಬ್ಯಾಕ್‌ಅಪ್ ಆಟಗಾರರಿಗೆ ಬದಲಿಯಾಗಿ ಬೇರೆ ಆಟಗಾರರನ್ನು ಸೇರ್ಪಡೆಗೊಳಿಸುವ ಸಾಧ್ಯತೆಯಿದೆ. ಹಾಗಾದರೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಉಳಿದುಕೊಳ್ಳುವವರು ಯಾರು, ಹೊರ ಹೋಗಬಹುದಾದ ಆಟಗಾರರು ಯಾರು ಮುಂದೆ ಓದಿ..

ಮುಂಬೈ ಬಿಡುಗಡೆಗೊಳಿಸಬಹುದಾದ ಆಟಗಾರರು
ಮುಂಬೈ ತಂಡದಲ್ಲಿ ಈ ಬಾರಿ ಅವಕಾಶವನ್ನೇ ಪಡೆಯದ ಹಾಗೂ ಅಪಡೆದರೂ ಹೇಳಿಕೊಲ್ಳುವಂತಾ ಪ್ರದರ್ಶನ ನೀಡಲು ವಿಫಲರಾದ ಆಟಗಾರರು ಮುಂದಿ ಆವೃತ್ತಿಯಲ್ಲಿ ಕಾಣಿಸಿಕೊಳ್ಳದ ಸಾಧ್ಯತೆಯಿದೆ. ಅದರಲ್ಲಿ ಪ್ರಮುಖವಾಗಿ ಕ್ರಿಸ್ ಲಿನ್, ನಥನ್ ಕೌಲ್ಟರ್‌ನೈಲ್, ಸೌರಭ್ ತಿವಾರಿ, ಶೆರ್ಫೇನ್ ರುದರ್‌ಫಾರ್ಡ್ ಹಾಗೂ ಧವಳ್ ಕುಲಕರ್ಣಿ

ರೀಟೈನ್ ಮಾಡಬಹುದಾದ 5 ಆಟಗಾರರು
ಒಂದು ತಂಡ 5 ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಮೂಲಕ ತನ್ನಲ್ಲೇ ಉಳಿಸಿಕೊಲ್ಳುವ ಅವಕಾಶ ಪ್ರತಿ ಫ್ರಾಂಚೈಸಿಗೂ ಮೆಗಾ ಆಕ್ಷನ್‌ನಲ್ಲಿ ದೊರೆಯಲಿದೆ. ಈ ಐವರು ಆಟಗಾರರನ್ನು ಮುಂಬೈ ರೀಟೈನ್ ಮಾಡಿಕೊಳ್ಳಬಹುದು. ಅವರೆಂದರೆ: ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಕಿರಾನ್ ಪೊಲಾರ್ಡ್, ಸೂರ್ಯಕುಮಾರ್ ಯಾದವ್. ಈ ಆಟಗಾರರ ಜೊತೆಗೆ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿಕೊಂಡು ಇಶಾನ್ ಕಿಶನ್, ಕೃನಾಲ್ ಪಾಂಡ್ಯ ಹಾಗೂ ಟ್ರೆಂಟ್ ಬೋಲ್ಟ್ ತಂಡದಲ್ಲೇ ಉಳಿಸಿಕೊಳ್ಳಬಹುದು.

ಮುಂಬೈ ಹೊಸದಾಗಿ ಸೇರ್ಪಡೆಗೊಳಿಸಬಹುದಾದ 5 ಆಟಗಾರರು
ಮುಂಬೈ ತಂಡ ಹೊಸದಾಗಿ ಕೆಲ ಪ್ರತಿಭಾನ್ವಿತ ಆಟಗಾರರತ್ತ ದೃಷ್ಟಿ ನೆಡಲಿದೆ. ಆ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಯಿದೆ. ಅಂತಾ ಐವರು ಆಟಗಾರರ ಹೆಸರು ಇಲ್ಲಿದೆ: ಕಾರ್ತಿಕ್ ತ್ಯಾಗಿ, ರಾಹುಲ್ ತಿವಾಟಿಯಾ, ವರುಣ್ ಚಕ್ರವರ್ತಿ, ಮನನ್ ವೊಹ್ರಾ, ಮಹಿಪಾಲ್ ಲೋಮರ್.

ನಾಯಕನಾಗಿ ರೋಹಿತ್ ಭವಿಷ್ಯ
ಐದು ಬಾರಿ ತಂಡವೊಣದನ್ನು ಚಾಂಪಿಯನ್ ಪಟ್ಟಕ್ಕೆರಿಸಿದ ನಾಯಕನ ಬಗ್ಗೆ ಮುಂಬೈ ಭಿನ್ನವಾಗಿ ಯೋಚಿಸಲು ಸಾಧ್ಯವೇ ಇಲ್ಲ. ಫಿಟ್‌ನೆಸ್ ವಿಚಾರವಾಗಿ ಯಾವುದೇ ಸಮಸ್ಯೆಗಳು ಕಂಡುಬಾರದಿದ್ದಲ್ಲಿ ರೋಹಿತ್ ಮುಂದಿನ ಆವೃತ್ತಿಯಲ್ಲೂ ಮುಂಬೈ ತಂಡದ ನಾಯನಾಗಿ ಮುಂದುವರಿಯಲಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ರೋಹಿತ್ ಬ್ಯಾಟ್‌ನಿಂದ ಹೇಳಿಕೊಳ್ಳುವಂತಾ ಪ್ರದರ್ಶನ ಬರಲಿಲ್ಲ. ಆದರೆ ಫೈನಲ್ ಪಂದ್ಯದಲ್ಲಿ ಅಗತ್ಯ ಕೊಡುಗೆಯನ್ನು ನೀಡಿ ಗೆಲುವಿಗೆ ಕಾರಣದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications