ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿಯೇ ಗೆಲ್ಲುತ್ತದೆ ಎನ್ನುತ್ತಿದೆ ಈ ಅಂಕಿ-ಅಂಶ!

ಚೆನ್ನೈ: ಏಪ್ರಿಲ್ 9ರಿಂದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿ ಆರಂಭವಾಗಲಿದೆ. ನಗದು ಶ್ರೀಮಂತ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಸೆಣಸಾಡಲಿದೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 7.30 pmಗೆ ಈ ಪಂದ್ಯ ಆರಂಭಗೊಳ್ಳಲಿದೆ. ಆರಂಭಿಕ ಪಂದ್ಯವೇ ಜಿದ್ದಾಜಿದ್ದಿ ಎನಿಸುವ ನಿರೀಕ್ಷೆಯಿದೆ.
ಐಪಿಎಲ್ ಇತಿಹಾಸದಲ್ಲೇ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಅತೀ ಬಲಿಷ್ಠ ತಂಡ. ಮುಂಬೈ ಒಟ್ಟಾರೆ 5 ಬಾರಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಆದರೆ ಈ ಬಾರಿಯ ಸೀಸನ್‌ನಲ್ಲಿ ಮೊದಲ ಪಂದ್ಯದಲ್ಲಿ ಆರ್‌ಸಿಬಿಯೇ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಕುತೂಹಲಕಾರಿ ಅಂಕಿ-ಅಂಶ
ಅತೀ ಬಲಿಷ್ಠ ತಂಡ ಮುಂಬೈ ಇಂಡಿಯನ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಗೆಲ್ಲಲಿದೆ ಎನ್ನಲು ಕಾರಣವಿದೆ. ಯಾಕೆಂದರೆ ಕುತೂಹಲಕಾರಿ ಅಂಕಿ-ಅಂಶವೊಂದು ಈ ಸತ್ಯ ಬಹಿರಂಗಪಡಿಸುತ್ತಿದೆ. ಅದೇನೆಂದರೆ ಆರಂಭಿಕ ಪಂದ್ಯದಲ್ಲಿ ಮುಂಬೈ ಗೆದ್ದಿದ್ದು ಕಡಿಮೆ. ಸೋತಿದ್ದೇ ಹೆಚ್ಚು. ಸಾಲದ್ದಕ್ಕೆ ವಿರಾಟ್ ಕೊಹ್ಲಿ ಪಡೆ ಈ ಸಾರಿ ಇನ್ನೂ ಬಲಿಷ್ಠವಾಗಿರುವುದರಿಂದ ಗೆಲ್ಲುವ ನಿರೀಕ್ಷೆ ಮೂಡಿಸಿದೆ.

8 ವರ್ಷಗಳಿಂದ ಸತತ ಸೋಲು
2013ರಿಂದ 2020ರ ವರೆಗೂ ಎಂಐ ತಂಡ ಟೂರ್ನಿಯ ಆರಂಭಿಕ ಪಂದ್ಯಗಳನ್ನು ಸೋತಿದೆ ಎಂದರೆ ನಿಮಗೆ ಅಚ್ಚರಿಯೆನಿಸಬಹುದು. ಆದರೆ ಇದು ನಿಜ. ಕಳೆದ 8 ವರ್ಷಗಳಿಂದಲೂ ಮುಂಬೈ ತಂಡ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಗೆದ್ದಿದ್ದೇ ಇಲ್ಲ. ಆದರೆ ಟೂರ್ನಿಯ ಮಧ್ಯದಲ್ಲಿ ಅಥವಾ ಕಡೇ ಪಂದ್ಯಗಳಲ್ಲಿ ಗೆಲ್ಲಲು ಮುಂಬೈ ತೀವ್ರವಾದ ಹೋರಾಟ ನಡೆಸಿದ್ದು ಕಾಣಿಸುತ್ತದೆ. ಈ ನಿಟ್ಟಿನಲ್ಲಿ ಆರ್‌ಸಿಬಿಗೆ ಟೂರ್ನಿ ಆರಂಭದಲ್ಲೇ ಶುಭಾರಂಭ ಕಾಣುವ ನಿರೀಕ್ಷೆ ಹೆಚ್ಚಿದೆ.

ಆರಂಭಿಕ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಫಲಿತಾಂಶ
* 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲು
* 2015ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪರಾಜಯ
* 2016ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಎದುರು ಸೋಲು
* 2017ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಪರಾಭವ
* 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲು
* 2019ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಿನ್ನಡೆ
* 2020ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications