For Quick Alerts
ALLOW NOTIFICATIONS  
For Daily Alerts
 

ಮುಂಬೈ ಆಟಗಾರರು ಮುಂದಿನ ವಾರ ಲಸಿಕೆ ಪಡೆಯಲಿದ್ದಾರೆ: ಕ್ರಿಸ್ ಲಿನ್

IPL 2021: Mumbai Indians opener Chris Lynn reveals players to get COVID-19 vaccine next week

ಭಾರತದಲ್ಲಿ ಕೊರೊನಾ ವೈರಸ್ ಆತಂಕ ಸಾಕಷ್ಟು ಹೆಚ್ಚಾಗಿರುವ ಸಂದರ್ಭದಲ್ಲಿಯೂ ಐಪಿಎಲ್ ಈವರೆಗೆ ಯಶಸ್ವಿಯಾಗು ಮುಂದುವರಿದಿದೆ. ಆದರೆ ಕೆಲ ಆಸ್ಟ್ರೇಲಿಯಾ ಆಟಗಾರರು ದಿಢೀರ್ ಆಗಿ ತವರಿಗೆ ಮರಳಿರುವುದು ಗೊಂದಲದ ವಾತಾವರಣಕ್ಕೆ ಕಾರಣವಾಗಿದೆ. ಈ ಮಧ್ಯೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಮುಂದಿನ ವಾರ ಲಸಿಕೆಯನ್ನು ಪಡೆದುಕೊಳ್ಳಲಿದ್ದಾರೆ ಎಂದು ವಿವರಿಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಕ್ರಿಸ್ ಲಿನ್ ಕ್ರಿಕೆಟ್ ಆಸ್ಟ್ರೇಲಿಯಾ ಬಳಿ ಮನವಿಯೊಂದನ್ನು ಮಾಡಿದ್ದಾರೆ. ಐಪಿಎಲ್ ಅಂತ್ಯದ ಬಳಿಕ ಎಲ್ಲಾ ಆಸ್ಟ್ರೇಲಿಯನ್ ಕ್ರಿಕೆಟಿಗರಿಗೆ ತವರಿಗೆ ಮರಳಲು ಚಾರ್ಟರ್ಡ್ ಫ್ಲೈಟ್ ವ್ಯವಸ್ಥೆಯನ್ನು ಮಾಡುವಂತೆ ಕೇಳಿಕೊಂಡಿದ್ದಾರೆ. ಇದೇ ಸಂದರ್‌ಣದಲ್ಲಿ ಮುಂದಿನ ವಾರ ಮುಂಬೈ ಇಂಡಿಯನ್ಸ್ ಆಟಗಾರರು ವ್ಯಾಕ್ಸಿನ್ ಪಡೆದುಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಆಸ್ಟ್ರೇಲಿಯಾದ ಮೂವರು ಆಟಗಾರರು ಇತ್ತೀಚೆಗೆ ಕೊರೊನಾ ವೈರಸ್‌ನ ಭೀತಿಯಿಂದ ತವರಿಗೆ ಮರಳಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಆಂಡ್ರೋ ಟೈ ಮೊದಲಿಗೆ ತವರಿಗೆ ಮರಳಿದರೆ ಅದಾದ 24 ಗಂಟೆಗಳ ಅಂತರದಲ್ಲಿ ಆರ್‌ಸಿಬಿ ತಂಡದ ಇಬ್ಬರು ಆಟಗಾರರಾದ ಆಡಂ ಜಂಪಾ ಹಾಗೂ ಕೇನ್ ರಿಚರ್ಡ್ಸನ್ ತವರಿಗೆ ಮರಳಿದ್ದಾರೆ.

ಸೋಮವಾರ ಕ್ರಿಕೆಟ್ ಆಸ್ಟ್ರೇಲಿಯಾ ಐಪಿಎಲ್‌ನಲ್ಲಿ ಪಾಲ್ಗೊಂಡಿರುವ ಆಸ್ಟ್ರೇಲಿಯನ್ ಕ್ರಿಕೆಟ್ ಆಟಗಾರರಲ್ಲಿ ಆರೋಗ್ಯ ಹಾಗೂ ಪ್ರಯಾಣದ ಯೋಜನೆಗಳ ಮಾಹಿತಿಗಳನ್ನು ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಕ್ರಿಸ್ ಲಿನ್ ಕ್ರಕೆಟ್ ಆಸ್ಟ್ರೇಲಿಯಾಗೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ವಾಪಸಾತಿಗೆ ಚಾರ್ಟರ್ಡ್ ಫ್ಲೈಟ್ ಕಳುಹಿಸುವ ಬಗ್ಗೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

"ನಮಗಿಂತ ತುಂಬಾ ಕಠಿಣ ಸಂದರ್ಭದಲ್ಲಿ ಜನರು ಇದ್ದಾರೆ ಎಂಬ ಅರಿವಿದೆ. ಆದರೆ ನಾವು ಕಠಿಣವಾದ ಬಯೋಬಬಲ್‌ನಿಮದ ಹೋಗುತ್ತಿದ್ದೇವೆ ಮತ್ತು ಮುಂದಿನವಾರ ನಾವು ಲಸಿಕೆಯನ್ನು ಕೂಡ ಪಡೆದುಕೊಳ್ಳಲಿದ್ದೇವೆ. ಹಾಗಾಗಿ ಸರ್ಕಾರ ವಿಶೇಷ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡುತ್ತದೆ ಎಮದು ಭಾವಿಸುತ್ತೇನೆ" ಎಂದು ಕ್ರಿಸ್ ಲಿನ್ ಹೇಳಿದ್ದಾರೆ

Story first published: Tuesday, April 27, 2021, 13:48 [IST]
Other articles published on Apr 27, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+