For Quick Alerts
ALLOW NOTIFICATIONS  
For Daily Alerts
 

ಈ ಬಾರಿಯ ಎಲ್ಲಾ 8 ಫ್ರಾಂಚೈಸಿಗಳ ವಿನಾಶಕಾರಿ ಆರಂಭಿಕ ಬ್ಯಾಟ್ಸ್‌ಮನ್‌ಗಳಿವರು!

IPL 2021: Mumbai Indians Opening Pair Will Be Most Destructive Says Aakash Chopra

ಮುಂಬೈ: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆರಂಭಕ್ಕಿನ್ನು ಕೆಲವೇ ದಿನಗಳು ಬಾಕಿಯಿರುವಾಗ ಅಭಿಮಾನಿಗಳು ಮತ್ತು ಕ್ರಿಕೆಟ್ ಪಂಡಿತರು ಫ್ರಾಂಚೈಸಿಗಳ ಆರಂಭಿಕ ಬ್ಯಾಟ್ಸ್‌ಮನ್‌ಗಳ ಬಗ್ಗೆ ಮಾತನಾಡತೊಡಗಿದ್ದಾರೆ. ಭಾರತದ ಮಾಜಿ ಆಟಗಾರ, ಈಗ ಕಾಮೆಂಟೇಟರ್ ಆಗಿರುವ ಆಕಾಶ್ ಚೋಪ್ರಾ ಐಪಿಎಲ್‌ನಲ್ಲಿ ಅತೀ ಅಪಾಯಕಾರಿ ಆರಂಭಿಕ ಜೋಡಿಯನ್ನು ಹೆಸರಿಸಿದ್ದಾರೆ.

ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಆಕಾಶ್ ಚೋಪ್ರಾ, ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ನ ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿ ಕಾಕ್ ಜೋಡಿ ಹೆಚ್ಚು ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್‌ಗಳು ಎಂದಿದ್ದಾರೆ. ಕ್ವಿಂಟನ್‌ ಡಿ ಕಾಕ್ ಬದಲಿಸಿ ಅಲ್ಲಿಗೆ ಇಶಾನ್ ಕಿಶಾನ್ ತಂದರೂ ಅದೂ ವಿನಾಶಕಾರಿ ಆರಂಭಿಕ ಜೋಡಿಯಾಗಲಿದೆ ಎಂದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಎಲ್ಲಾ 8 ಫ್ರಾಂಚೈಸಿಗಳ ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್‌ಗಳ ಮಾಹಿತಿ ಇಲ್ಲಿದೆ (ಎರಡಕ್ಕಿಂತ ಹೆಚ್ಚು ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಹೆಸರಿಸಿದ್ದರೆ ಅವರು ಬದಲಿ ಆಟಗಾರರು ಎಂದರ್ಥ)

ಎಸ್‌ಆರ್‌ಎಚ್, ಆರ್‌ಸಿಬಿ

ಎಸ್‌ಆರ್‌ಎಚ್, ಆರ್‌ಸಿಬಿ

* ಎಸ್‌ಆರ್‌ಎಚ್: ಮಾಜಿ ಚಾಂಪಿಯನ್ಸ್ ತಂಡವಾದ ಸನ್ ರೈಸರ್ಸ್ ಹೈದರಾಬಾದ್‌ನಲ್ಲೂ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಿದ್ದಾರೆ. ಡೇವಿಡ್ ವಾರ್ನರ್, ಜಾನಿ ಬೇರ್ಸ್ಟೋವ್, ವೃದ್ಧಿಮಾನ್ ಸಾಹ ಮತ್ತು ಜೇಸನ್ ರಾಯ್ ಇವರು ಎಚ್‌ಆರ್‌ಎಚ್‌ನ ಅಪಾಯಕಾರಿ ಓಪನಿಂಗ್ ಬ್ಯಾಟ್ಸ್‌ಮನ್‌ಗಳು.
* ಆರ್‌ಸಿಬಿ: ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆರಂಭಿಕ ಜೋಡಿಯಲ್ಲಿ ಬದಲಾವಣೆಯಾಗಲಿದೆ. ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಅಥವಾ ಫಿನ್ ಅಲೆನ್ ಆರಂಭಿಕರಾಗಿ ಆಡಲಿದ್ದಾರೆ.

ಎಂಐ, ಕೆಕೆಆರ್‌

ಎಂಐ, ಕೆಕೆಆರ್‌

* ಎಂಐ: ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ನಲ್ಲಿ ಆಗಲೇ ಹೇಳಿದಂತೆ ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಕ್ವಿಂಟನ್ ಡಿ ಕಾಕ್ ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್‌ಗಳು.
* ಕೆಕೆಆರ್: ಮಾಜಿ ಚಾಂಪಿಯನ್ಸ್‌ ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ಈ ಬಾರಿ ಶುಬ್‌ಮನ್ ಗಿಲ್, ಸುನಿಲ್ ನರೈನ್ ಮತ್ತು ರಾಹುಲ್ ತ್ರಿಪಾಠಿ ಆರಂಭಿಕರಾಗಿ ಆಡಲಿದ್ದಾರೆ.

ಸಿಎಸ್‌ಕೆ, ಆರ್‌ಆರ್

ಸಿಎಸ್‌ಕೆ, ಆರ್‌ಆರ್

* ಸಿಎಸ್‌ಕೆ: ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಈ ಬಾರಿ ಭಾರತದ ಬ್ಯಾಟ್ಸ್‌ಮನ್‌ ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್ ಮತ್ತು ರಾಬಿನ್ ಉತ್ತಪ್ಪ ಆರಂಭಿಕರಾಗಿ ಆಡುವ ನಿರೀಕ್ಷೆಯಿದೆ.
* ಆರ್‌ಆರ್: ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಈ ಸೀಸನ್‌ನಲ್ಲಿ ಎಂದಿನಂತೆ ಜೋಸ್ ಬಟ್ಲರ್ ಮತ್ತು ಸಂಜು ಸ್ಯಾಮ್ಸನ್ ಆರಂಭಿಕರಾಗಿ ಇಳಿಯಲಿದ್ದಾರೆ.

ಪಂಜಾಬ್ ಕಿಂಗ್ಸ್, ಡಿಸಿ

ಪಂಜಾಬ್ ಕಿಂಗ್ಸ್, ಡಿಸಿ

* ಪಿಕೆ: ಪಂಜಾಬ್ ಕಿಂಗ್ಸ್‌ ತಂಡದಲ್ಲಿ ಕನ್ನಡಿಗ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಮತ್ತು ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಈ ಬಾರಿ ಆರಂಭಿಕರಾಗಿ ಆಡಲಿದ್ದಾರೆ.
* ಡಿಸಿ: ಹಾಲಿ ರನ್ನರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಶಿಖರ್ ಧವನ್ ಮತ್ತು ಯುವ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಈ ಬಾರಿ ಆರಂಭಿಕರಾಗಿ ಆಡಲಿದ್ದಾರೆ.

Story first published: Friday, April 2, 2021, 13:53 [IST]
Other articles published on Apr 2, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+