Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಚೆನ್ನೈ ವಿರುದ್ಧ ದಾಖಲೆಯ ಚೇಸ್‌ನೊಂದಿಗೆ ಗೆದ್ದ ಮುಂಬೈ

IPL 2021: Mumbai Indians vs Chennai Super Kings, 27th Match, Playing XI, Report

ನವದೆಹಲಿ: ದೆಹಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ಮೇ 1ರಂದು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 27ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ 4 ವಿಕೆಟ್‌ ರೋಚಕ ಜಯ ಗಳಿಸಿದೆ. ಐಪಿಎಲ್ ಸೀಸನ್‌ನಲ್ಲಿ ಎಂಐ 200+ ದೊಡ್ಡ ಮೊತ್ತವನ್ನು ಚೇಸ್ ಮಾಡಿ ಗೆದ್ದ ದಾಖಲೆಯಾಗಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಉತ್ತಮ ಆರಂಭ ಲಭಿಸಿತು. ಫಾಫ್ ಡು ಪ್ಲೆಸಿಸ್ 50 (28), ಮೊಯೀನ್ ಅಲಿ 58 (36), ಅಂಬಾಟಿ ರಾಯುಡು 72 (27), ರವೀಂದ್ರ ಜಡೇಜಾ 22, ಋತುರಾಜ್ ಗಾಯಕ್ವಾಡ್ 4, ಸುರೇಶ್ ರೈನಾ 2 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 218 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, ಕ್ವಿಂಟನ್ ಡಿ ಕಾಕ್ 38, ರೋಹಿತ್ ಶರ್ಮಾ 35, ಕೃನಾಲ್ ಪಾಂಡ್ಯ 32, ಕೀರನ್ ಪೊಲಾರ್ಡ್ ಅಜೇಯ 87 (34), ಹಾರ್ದಿಕ್ ಪಾಂಡ್ಯ 16 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 219 ರನ್ ಗಳಿಸಿತು.

ಚೆನ್ನೈ ಇನ್ನಿಂಗ್ಸ್‌ನಲ್ಲಿ ಮುಂಬೈ ಇಂಡಿಯನ್ಸ್‌, ಟ್ರೆಂಟ್ ಬೌಲ್ಟ್ 1. ಜಸ್‌ಪ್ರೀತ್‌ ಬೂಮ್ರಾ 1, ಕೀರನ್ ಪೊಲಾರ್ಡ್ 2 ವಿಕೆಟ್‌ ಪಡೆದರೆ, ಮುಂಬೈ ಇನ್ನಿಂಗ್ಸ್‌ನಲ್ಲಿ ಸ್ಯಾಮ್ ಕರನ್ 3, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ ಮತ್ತು ಮೊಯೀನ್ ಅಲಿ ತಲಾ 1 ವಿಕೆಟ್‌ನಿಂದ ಗಮನ ಸೆಳೆದರು.

Story first published: Sunday, May 2, 2021, 0:28 [IST]
Other articles published on May 2, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+