Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಈ ಬಾರಿ ಮುಂಬೈನಲ್ಲಿ ಐಪಿಎಲ್ ಪಂದ್ಯಗಳಿಲ್ಲ?

IPL 2021: Mumbai set to miss out on IPL staging

ನವದೆಹಲಿ: ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ ಪ್ರಮುಖ ಪಂದ್ಯಗಳು ಅಂದರೆ ಫೈನಲ್, ನಾಕೌಟ್ ಪಂದ್ಯಗಳೆಲ್ಲ ಹೆಚ್ಚಾಗಿ ಮುಂಬೈ ತಾಣದಲ್ಲಿ ನಡೆಯುತ್ತಿತ್ತು. ಆದರೆ 2021ರ ಐಪಿಎಲ್ ವೇಳೆ ಮುಂಬೈ ತಾಣದಲ್ಲಿ ಪಂದ್ಯಗಳು ನಡೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ.

14ನೇ ಆವೃತ್ತಿಯ ಐಪಿಎಲ್ ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ಆ ಬಳಿಕ ಮುಂಬೈ ಹೊರತುಪಡಿಸಿ ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಅಹ್ಮದಾಬಾದ್, ದೆಹಲಿ, ಮತ್ತು ಚೆನ್ನೈ ತಾಣಗಳನ್ನು ಮಾತ್ರ ಶಾರ್ಟ್‌ ಲಿಸ್ಟ್‌ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂತು.

ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಪ್ರಕರಣಗಳು ಹತೋಟಿಗೆ ಬರುತ್ತಿಲ್ಲ. ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಬೃಹತ್ ಕ್ರಿಕೆಟ್ ಟೂರ್ನಿಯನ್ನು ನಡೆಸಲು ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ಈಗ ತಿಳಿದು ಬಂದಿದೆ. ಏಪ್ರಿಲ್ 10ರ ನಂತರ ಐಪಿಎಲ್ ಆರಂಭವಾಗುವ ನಿರೀಕ್ಷೆಯಿದೆ.

ಭಾರತದಲ್ಲಿ ಐಪಿಎಲ್ ನಡೆಯುವುದಾದರೆ ಮುಂಬೈನಲ್ಲಿ ಪಂದ್ಯಗಳು ನಡೆದೇ ನಡೆಯುತ್ತಿತ್ತು. ಆದರೆ ಇದು ಇತಿಹಾಸದಲ್ಲೇ ಮೊದಲ ಬಾರಿಗೆ ಈ ಸಾರಿ ಮುಂಬೈ ತಾಣದಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿಲ್ಲ. ಹೀಗಾಗಿ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ಗೆ ತವರಿನಲ್ಲಿ ಪಂದ್ಯ ಆಡುವ ಅವಕಾಶ ಇಲ್ಲದಾಗಿದೆ.

Story first published: Wednesday, March 3, 2021, 0:05 [IST]
Other articles published on Mar 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+