ಐಪಿಎಲ್ ಬಯೋಬಬಲ್ ಬಗ್ಗೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ ಆಸಿಸ್ ಆಟಗಾರ

ಆಸ್ಟ್ರೇಲಿಯಾದ ಆಟಗಾರ ಆಂಡ್ರೋ ಟೈ ಇದ್ದಕ್ಕಿದ್ದಂತೆಯೇ ಐಪಿಎಲ್ ತೊರೆದು ತವರಿಗೆ ಮರಳಿದ 24 ಗಂಟೆಯ ಅಂತರದಲ್ಲಿ ಆಸ್ಟ್ರೇಲಿಯಾದ ಮತ್ತಿಬ್ಬರು ಆಟಗಾರರು ಭಾರತದಿಂದ ತವರಿಗೆ ವಾಪಾಸಾಗಿದ್ದಾರೆ. ಆರ್‌ಸಿಬಿ ಆಟಗಾರಾದ ಆಡಂ ಜಂಪಾ ಹಾಗೂ ಕೇನ್ ರಿಚರ್ಡ್ಸನ್ ಸೋಮವಾರ ಆರ್‌ಸಿಬಿ ತೊರೆದು ಆಸ್ಟ್ರೇಲಿಯಾಗೆ ಮರಳಿರುವುದನ್ನು ಆರ್‌ಸಿಬಿ ಖಚಿತಪಡಿಸಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಆಸಿಸ್ ಆಟಗಾರ ನಥನ್ ಕೌಲ್ಟರ್‌ನೈಲ್ ಪ್ರತಿಕ್ರಿಯಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿರುವ ಕೌಲ್ಟರ್‌ನೈಲ್ ತಾನು ಆಸ್ಟ್ರೇಲಿಯಾಗೆ ಮರಳುವ ಬಗ್ಗೆ ಯಾವುದೇ ಯೋಚನೆಯನ್ನು ಮಾಡಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತಿದ್ದರೂ ಐಪಿಎಲ್‌ಗೆ ನಿರ್ಮಾಣ ಮಾಡಿರುವ ಬಯೋಬಬಲ್‌ನಲ್ಲಿ ನಾನು ಸುರಕ್ಷಿತವಾಗಿದ್ದೇನೆ ಎಂಬ ಭಾವನೆ ಮೂಡಿದೆ. ಹೀಗಾಗಿ ತಂಡದ ಜೊತೆಗೆ ಮುಂದುವರಿಯಲು ನಾನು ಬಯಸಿದ್ದೇನೆ ಎಂದು ಕೌಲ್ಟರ್‌ನೈಲ್ ಹೇಳಿದ್ದಾರೆ.
"ನಾವು ದಿನಕ್ಕೆ ಮೂರು ಬಾರಿ ಕೊರೊನಾ ಪರೀಕ್ಷೆಗೆ ಒಳಗಾಗುತ್ತಿದ್ದೇವೆ. ಮುಂಜಾನೆ ಅದಾದ ನಂತರ ಮಧ್ಯಾಹ್ನ ಹಾಗೂ ರಾತ್ರಿ ಹೀಗೆ ಮೂರು ಬಾರಿ ನಿತ್ಯವೂ ಕೊರೊನಾ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಇದು ಪ್ರತಿಯೊಬ್ಬರಿಗೂ ಮಾಡಲಾಗುತ್ತಿದೆ. ಆಟಗಾರರು, ಸಿಬ್ಬಂದಿಗಳು ಸೇರಿದಂತೆ ಪ್ರತಿಯೊಬ್ಬರೂ ಪರೀಕ್ಷೆಗೆ ಒಳಗಾಗುತ್ತಿದ್ದಾರೆ" ಎಂದು ಕ್ರಿಕೆಟ್.ಕಾಮ್.ಎಯು ನಥನ್ ಕೌಲ್ಟರ್‌ನೈಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿದೆ.
"ಪರೀಕ್ಷೆಗಳಿಗೆ ಸಾಕಷ್ಟು ಆದ್ಯತೆಯನ್ನು ನೀಡಲಾಗುತ್ತಿದೆ. ಬಯೋಬಬಲ್ ಮೇಲೆ ಸಾಕಷ್ಟು ನಂಬಿಕೆಯನ್ನು ಹೊಂದಿದ್ದೇನೆ. ಎಲ್ಲಾ ಪ್ರೋಟೋಕಾಲ್‌ಗಳು ಮತ್ತು ಕ್ರಮಗಳು ಜಾರಿಯಲ್ಲಿವೆ. ಇದಕ್ಕಿಂತ ಹೆಚ್ಚಿನದನ್ನು ಮಾಡಲು ಸಾಧ್ಯವಿದೆ ಎಂದು ನನಗೆ ಅನಿಸುತ್ತಿಲ್ಲ" ಎಂದು ಕೌಲ್ಟರ್‌ನೈಲ್ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications