For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ನೂತನ ಫ್ರಾಂಚೈಸಿಗಳ ಹೆಸರು ಘೋಷಣೆಗೆ ದಿನಾಂಕ ನಿಗದಿ

IPL 2021: New IPL teams to be announced on october 25

ಮುಂಬೈ: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಸೆಪ್ಟೆಂಬರ್ 28ರ ಮಂಗಳವಾರ ಪ್ರಮುಖ ಎರಡು ಘೋಷಣೆಗಳನ್ನು ಮಾಡಿದೆ. ಮುಂದಿನ ಸೀಸನ್‌ನಲ್ಲಿ ಕಾಣಸಿಕೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಎರಡು ಹೊಸ ಫ್ರಾಂಚೈಸಿಗಳ ಹೆಸರು ಘೋಷಣೆಗೆ ಬಿಸಿಸಿಐ ದಿನಾಂಕ ನಿಗದಿ ಮಾಡಿದೆ.

ಅಕ್ಟೋಬರ್‌ 25ರಂದು 15ನೇ ಆವೃತ್ತಿಯ ಐಪಿಎಲ್‌ಗೆ ಬಿಸಿಸಿಐ ಎರಡು ಹೊಸ ತಂಡಗಳ ಹೆಸರುಗಳನ್ನು ಘೋಷಣೆ ಮಾಡಲಿದೆ. ಅಷ್ಟೇ ಅಲ್ಲ, ಐಪಿಎಲ್ 14ನೇ ಆವೃತ್ತಿಯ ಕೊನೇ ಎರಡು ಲೀಗ್ ಪಂದ್ಯಗಳು ಏಕಕಾಲಕ್ಕೆ ನಡೆಯಲಿವೆ ಎಂದು ಬಿಸಿಸಿಐ ಮಂಗಳವಾರ ಮಾಹಿತಿ ನೀಡಿದೆ.

ಮುಂದಿನ ವರ್ಷ ಅಂದರೆ 2022ರ ಐಪಿಎಲ್ ಆವೃತ್ತಿಗೂ ಮುನ್ನ ಆಟಗಾರರ ಮೆಗಾ ಆಕ್ಷನ್ ನಡೆಯಲಿದೆ. ಈ ವೇಳೆ ಎರಡು ಹೊಸ ಫ್ರಾಂಚೈಸಿಗಳು ಹರಾಜಿನಲ್ಲಿ ಪಾಲ್ಗೊಳ್ಳಲಿವೆ. ಘೋಷಣೆಯಾಗಲಿರುವ ಹೊಸ ತಂಡಗಳು ಯಾವುವು ಎನ್ನುವ ಬಗ್ಗೆ ಬಿಸಿಸಿಐ ಸುಳಿವು ನೀಡಿಲ್ಲ.

2021ರ ಆವೃತ್ತಿಯ ಕೊನೇ ಎರಡು ಲೀಗ್ ಪಂದ್ಯಗಳು ಏಕಕಾಲಕ್ಕೆ ನಡೆಯಲಿವೆ ಎಂದು ಬಿಸಿಸಿಐ ತಿಳಿಸಿದೆ. ಲೀಗ್‌ ಹಂತದ ಕೊನೇ ಪಂದ್ಯಗಳು ನಡೆಯೋದು ಅಕ್ಟೋಬರ್‌ 8ರ ಶುಕ್ರವಾರ. ಈ ದಿನ ಡಬಲ್ ಹೆಡ್ಡರ್ ಪಂದ್ಯಗಳಿದ್ದವು. ಅವುಗಳು ಏಕಕಾಲಕ್ಕೆ ನಡೆಯಲಿವೆ. ಅಂದರೆ ಅಕ್ಟೋಬರ್‌ 8ರಂದು ಸನ್ ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಒಂದರ ನಂತರ ಮತ್ತೊಂದು ನಡೆಯದೆ ಒಂದೇ ಸಮಯಕ್ಕೆ ನಡೆಯಲಿದೆ.

Story first published: Wednesday, September 29, 2021, 10:28 [IST]
Other articles published on Sep 29, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+