ಐಪಿಎಲ್ 2021: ಮುಂಬೈ ಇಂಡಿಯನ್ಸ್‌ನಿಂದ ನೂತನ ಜೆರ್ಸಿ ಬಿಡುಗಡೆ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದ ನೂತನ ಜೆರ್ಸಿ ಬಿಡುಗಡೆಗೊಂಡಿದೆ. ಮಾರ್ಚ್ 27ರ ಶನಿವಾರ ಎಂಐ ಫ್ರಾಂಚೈಸಿ 2021ರ ಆವೃತ್ತಿಗೆ ಹೊಸ ಜೆರ್ಸಿ ಬಿಡುಗಡೆ ಮಾಡಿದೆ. ಇದನ್ನು ತನ್ನ ಅಧಿಕೃತ ಖಾತೆಯಲ್ಲಿ ತಿಳಿಸಿದೆ.
'ಹೆಮ್ಮೆಯೊಂದಿಗೆ ನಮ್ಮ ಬಣ್ಣ ಧರಿಸಿ ನಾವು 2021ರ ಐಪಿಎಲ್ ವೇಳೆ ಮೈದಾನಕ್ಕಿಳಿಯಲಿದ್ದೇವೆ' ಎಂದು ಮುಂಬೈ ಇಂಡಿಯನ್ಸ್ ತನ್ನ ಟ್ವೀಟ್ ಜೊತೆ ಬರೆದುಕೊಂಡಿದೆ. ಹಿಂದಿನ ಅದೇ ಆಕಾಶ ನೀಲಿ ಬಣ್ಣದಲ್ಲಿ ಜೆರ್ಸಿಯಿದೆಯಾದರೂ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.
ರೋಹಿತ್ ಶರ್ಮಾ ನಾಯಕತ್ವ ಎಂಐ ಜೆರ್ಸಿಯಲ್ಲಿ ಎದೆಯ ಭಾಗ ಎಡ ಬದಿಯಲ್ಲಿ ಮುಂಬೈ ಇಂಡಿಯನ್ಸ್ ಲೋಗೋ ಇದೆ. ಬಲಗಡೆ ಹೋಟೆಲ್ ಬ್ರ್ಯಾಂಡ್ ಮ್ಯಾರಿಯಟ್ ಬನ್‌ವೋಯ್ ಲೋಗೋ ಇದೆ. ಜೆರ್ಸಿಯ ಭುಜ ಮತ್ತು ಸೊಂಟದ ಭಾಗದಲ್ಲಿ ಚಿನ್ನದ ಬಣ್ಣದಲ್ಲಿ ಗೆರೆಗಳ ವಿನ್ಯಾಸವಿದೆ.
ಹಿಂದಿನ ಜೆರ್ಸಿಗಳಲ್ಲಿ ಬಂಗಾರದ ಬಣ್ಣದ ರೇಖೆಗಳ ವಿನ್ಯಾಸ ಗಾಢವಾಗಿತ್ತು. ಆದರೆ ಈ ಬಾರಿ ತೆಳ್ಳಗಿನ ಗೆರೆಗಳಲ್ಲಿ ವಿನ್ಯಾಸವಿದೆ. ಏಪ್ರಿಲ್ 9ರಂದು 14ನೇ ಆವೃತ್ತಿಯ ಐಪಿಎಲ್ ಆರಂಭಗೊಂಡರೆ ಮೇ 30ರಂದು ಕೊನೆಗೊಳ್ಳಲಿದೆ. ಐಪಿಎಲ್ ಉದ್ಘಾಟನಾ ಪಂದ್ಯ ಚೆನ್ನೈನಲ್ಲಿ ನಡೆಯಲಿದ್ದು ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಕಾದಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications