ಭಾರತೀಯರಿಗೆ ಐಪಿಎಲ್-ರಾಷ್ಟ್ರೀಯ ಕ್ಯಾಲೆಂಡರ್ ಮಧ್ಯೆ 15 ದಿನ ಬಿಡುವೂ ಇಲ್ಲ!

ನವದೆಹಲಿ: ಭಾರತಕ್ಕೆ ಪ್ರವಾಸ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಸದ್ಯ ಆತಿಥೇಯರ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡುತ್ತಿದೆ. ಕಡೇ ಪಂದ್ಯ ಮಾರ್ಚ್ 28ರಂದು ನಡೆಯಲಿದೆ. ಅದಾದ ಬಳಿಕ ಏಪ್ರಿಲ್ 9ಕ್ಕೆ ಭಾರತದ ಆಕರ್ಷಣೀಯ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಗೊಳ್ಳಲಿದೆ.
ಟೀಮ್ ಇಂಡಿಯಾ ಆಟಗಾರರು ಪಾಲ್ಗೊಳ್ಳುತ್ತಿರುವ ಅಂತಾರಾಷ್ಟ್ರೀಯ ಸರಣಿ ಮತ್ತು ಐಪಿಎಲ್ ಮಧ್ಯೆ 15 ದಿನಗಳ ಬಿಡುವೂ ಇಲ್ಲ. ಈ ವರ್ಷದುದ್ದಕ್ಕೂ ಬಹುತೇಕ ಬಿಡುವಿಲ್ಲದೆಯೇ ಭಾರತೀಯ ಆಟಗಾರರು ಕ್ರಿಕೆಟ್ ಟೂರ್ನಿಗಳಲ್ಲಿ ಬ್ಯುಸಿ ಆಗುತ್ತಿರುವುದನ್ನು ನೀವಿಲ್ಲಿ ಗಮನಿಸಬಹುದು.
ಇತ್ತೀಚಿಗೆ ಭಾರತ ಪಾಲ್ಗೊಂಡಿದ್ದ ಸರಣಿಗಳನ್ನು ಗಮನಿಸಿದರೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸರಣಿಗಳು ಸುದೀರ್ಘವಾಗಿತ್ತು. ಸುದೀರ್ಘ ಸರಣಿಗಳು ನಡೆದಾಗ ಐಪಿಎಲ್ ಮಧ್ಯೆ ಕನಿಷ್ಠ 15 ದಿನಗಳ ಬಿಡುವಾದರೂ ಕೊಡಬೇಕು ಎಂದು ಲೋಧಾ ಕಮಿಟಿ ಸೂಚಿಸಿತ್ತು. ಆದರೆ ಲೋಧಾ ಸೂಚನೆಯನ್ನು ಬಿಸಿಸಿಐ ಪರಿಗಣಿಸುವ ಸಾಧ್ಯತೆ ಕಾಣಿಸುತ್ತಿಲ್ಲ.
ಸರಣಿ ಸರಣಿ ಮಧ್ಯೆ 15 ದಿನಗಳ ಅಂತರ ಇಲ್ಲದಿದ್ದರೂ ಕೆಲಸದ ಹೊರೆ ಹೆಚ್ಚಿರುವ ಆಟಗಾರರಿಗೆ ವಿಶ್ರಾಂತಿ ನೀಡಿ ಸರಣಿಗಳಲ್ಲಿ ಆಡಿಸುತ್ತಿರುವುದಾಗಿ ಬಿಸಿಸಿಐ ಹೇಳುವುದರಿಂದ ಸದ್ಯ ನಿಗದಿಯಾಗಿರುವ ವೇಳಾಪಟ್ಟಿಯಂತೆ ಐಪಿಎಲ್ ನಡೆಯುವ ಸಾಧ್ಯತೆಯಿದೆ. ಏಪ್ರಿಲ್ 9ರಿಂದ ಆರಂಭವಾಗುವ ಐಪಿಎಲ್ ಮೇ 30ರಂದು ಕೊನೆಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications