Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸಿಸ್ ಆಟಗಾರರಿಗೆ ವಿಶೇಷ ವಿಮಾನ ನೀಡುವ ಬಗ್ಗೆ ಚಿಂತಿಸಿಲ್ಲ ಎಂದ ಕ್ರಿಕೆಟ್ ಆಸ್ಟ್ರೇಲಿಯಾ

IPL 2021: No charter flight for Australia players at this moment: CA Chief Hockley

ಭಾರತದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ತೀವ್ರವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಅನೇಕ ರಾಷ್ಟ್ರಗಳು ಭಾರತದಿಂದ ತೆರಳುವ ವಿಮಾನಗಳಿಗೆ ನಿರ್ಬಂಧವನ್ನು ಹೇರಿದೆ. ಇದರಲ್ಲಿ ಆಸ್ಟ್ರೇಲಿಯಾ ಕೂಡ ಒಂದಾಗಿದ್ದು ಎಲ್ಲಾ ನಾಗರೀಕ ವಿಮಾನಗಳ ಪ್ರಯಾಣವನ್ನು ಆಸ್ಟ್ರೇಲಿಯಾ ಸರ್ಕಾರ ಸಂಪೂರ್ಣವಾಗಿ ನಿರ್ಬಂಧಿಸಿದೆ.

ಈ ಹಿನ್ನಲೆಯಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿ ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ನಿಕ್ ಹಾಕ್ಲೆ ಪ್ರತಿಕ್ರಿಯಿಸಿದ್ದಾರೆ. ಭಾರತದಲ್ಲಿರುವ ಆಸ್ಟ್ರೇಲಿಯಾದ ಕ್ರಿಕೆಟಿಗರನ್ನು ತಲ್ಷಣವೇ ವಾಪಾಸ್ ಕರತರಲು ವಿಶೇಷ ವಿಮಾನದ ವ್ಯವಸ್ಥೆಯನ್ನು ಮಾಡುವ ಯೋಚನೆಗಳು ಸದ್ಯಕ್ಕೆ ನಮ್ಮ ಮುಂದಿಲ್ಲ ಎಂದಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾದ ನಿಕ್ ಹಾಕ್ಲೆ ಭಾರತದಲ್ಲಿ ಆಸ್ಟ್ರೇಲಿಯಾ ಆಟಗಾರರು ಬಯೋಬಬಲ್‌ನಲ್ಲಿ ಸುರಕ್ಷಿತವಾಗಿದ್ದಾರೆ ಎಂಬ ಭಾವನೆಯನ್ನು ಹಿಂದಿರುವುದಾಗಿ ಹೇಳಿಕೆಯನ್ನು ನೀಡಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಈ ಹೇಳಿಕೆಯನ್ನು ನೀಡುವಾಗ ಕೆಕೆಆರ್ ತಂಡದಲ್ಲಿ ಇಬ್ಬರು ಆಟಗಾರರು ಕೊರೊನಾ ಸೋಂಕಿಗೆ ತುತ್ತಾಗಿರುವ ವಿಚಾರ ಬಹಿರಂಗವಾಗಿರಲಿಲ್ಲ.

ಆಸ್ಟ್ರೇಲಿಯಾ ಸರ್ಕಾರ ಭಾರತದಿಂದ ಎಲ್ಲಾ ನಾಗರೀಕ ವಿಮಾನಗಳನ್ನು ನಿರ್ಬಂಧಿಸಿದ ನಂತರ ಆಸ್ಟ್ರೇಲಿಯಾದ ಕ್ರಿಕೆಟಿಗ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಕ್ರಿಸ್ ಲಿನ್ ಆಸ್ಟ್ರೇಲಿಯಾ ಸರ್ಕಾರದ ಬಳಿ ವಿಶೇಷ ವಿಮಾನ ಏರ್ಪಡಿದುವಂತೆ ಮನವಿಯನ್ನು ಮಾಡಿದ್ದರು. ಆದರೆ ಇದಕ್ಕೆ ಆಸ್ಟ್ರೇಲಿಯಾ ಪ್ರಧಾನಿ ನಿರಾಕರಿಸಿದ್ದರು. ಸೋಮವಾರ ಆಸಿಸ್ ಕಾಮೆಂಟೇಟರ್ ಮೈಕಲ್ ಸ್ಲೇಟರ್ ಕಟು ಮಾತುಗಳಲ್ಲಿ ಟೀಕೆಯನ್ನು ಮಾಡಿದ್ದಾರೆ. ಈಗ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಆಸಿಸ್ ಆಟಗಾರರಿಗೆ ಚಿಂತೆ ಹೆಚ್ಚಿಸುವಂತಾ ಪ್ರತಿಕ್ರಿಯೆ ನೀಡಿದ್ದಾರೆ.

Story first published: Monday, May 3, 2021, 21:10 [IST]
Other articles published on May 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+