RCB vs MI: ವಿರಾಟ್ ಕೊಹ್ಲಿಗೆ ಕುಟುಕಿದ ರೋಹಿತ್ ಶರ್ಮಾ!

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2 ವಿಕೆಟ್‌ಗಳ ರೋಚಕ ಗೆಲುವನ್ನಾಚರಿಸಿದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್ ಹೆಸರಿನಲ್ಲಿದ್ದ ಕೆಟ್ಟ ದಾಖಲೆ ಮುಂದುವರೆದಿದೆ. ಆದರೆ ಆರಂಭಿಕ ಪಂದ್ಯ ಸೋತರೂ ಮುಂಬೈ ನಾಯಕ ರೋಹಿತ್ ಶರ್ಮಾ, ಬೆಂಗಳೂರು ನಾಯಕ ವಿರಾಟ್ ಕೊಹ್ಲಿಗೆ ಕುಟುಕಿದ್ದಾರೆ.
ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್
2013ರ ಐಪಿಎಲ್‌ನ ಸೀಸನ್‌ನಿಂದಲೂ ಟೂರ್ನಿಯ ಮೊದಲ ಪಂದ್ಯಗಳನ್ನು ಮುಂಬೈ ಇಂಡಿಯನ್ಸ್ ಸೋಲುತ್ತಲೇ ಬಂದಿದೆ. ಅಂದರೆ ಸತತ 9 ಸೀಸನ್‌ಗಳಲ್ಲಿ ಎಂಐ ಆರಂಭಿಕ ಪಂದ್ಯವನ್ನು ಸೋತ ಕೆಟ್ಟ ದಾಖಲೆ ಹೊಂದಿದೆ. ಈ ಮುಖಭಂಗ ಮುಂದುವರೆದಿರುವ ಸಿಟ್ಟನ್ನು ಕೊಹ್ಲಿ ಮೇಲೆ ರೋಹಿತ್ ತೋರಿಸಿಕೊಂಡಿದ್ದಾರೆ.
ಉದ್ಘಾಟನಾ ಪಂದ್ಯದಲ್ಲಿ ಬೌಲಿಂಗ್ ಆಯ್ದುಕೊಂಡಿದ್ದ ಆರ್‌ಸಿಬಿಯಿಂದ ಎಬಿ ಡಿ ವಿಲಿಯರ್ಸ್ (48 ರನ್, 27 ಎಸೆತ), ಗ್ಲೆನ್ ಮ್ಯಾಕ್ಸ್‌ವೆಲ್ (39 ರನ್, 28), ವಿರಾಟ್ ಕೊಹ್ಲಿ (33 ರನ್, 29) ಸ್ಫೋಟಕ ಆಟ ಮತ್ತು ಹರ್ಷಲ್ ಪಟೇಲ್ ಮಾರಕ ಬೌಲಿಂಗ್ (5 ವಿಕೆಟ್) ತಂಡಕ್ಕೆ ಶುಭಾರಂಭ ನೀಡಿದೆ.

ಕೊಹ್ಲಿಗೆ ಕುಟುಕಿದ ರೋಹಿತ್
ಆರಂಭಿಕ ಪಂದ್ಯದಲ್ಲಿ ಸೋತ ಬಳಿಕ ಎಂಐ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಗೆಲ್ಲೋದು ನಮಗೆ ಮುಖ್ಯವಲ್ಲ. ಟೂರ್ನಿಯಲ್ಲಿ ಗೆದ್ದು ಚಾಂಪಿಯನ್ಸ್ ಪಟ್ಟಕ್ಕೇರೋದು ನಮಗೆ ಮುಖ್ಯ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಹೇಳಿದ್ದಾರೆ. ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು 4ನೇ ಓವರ್ ವೇಳೆ ಕೊಹ್ಲಿಯ ಥ್ರೋ ಮತ್ತು ಯುಜುವೇಂದ್ರ ಚಾಹಲ್ ಫೀಲ್ಡಿಂಗ್‌ನಿಂದಾಗಿ ರನ್ ಔಟ್ ಆಗಿ 19 ರನ್‌ನೊಂದಿಗೆ ನಿರಾಶೆ ಅನುಭವಿಸಿದ್ದರು.

ಸುಲಭವಾಗಿ ಸೋತಿಲ್ಲ
'ಚಾಂಪಿಯನ್‌ಶಿಪ್ ಗೆಲ್ಲೋದು ಮುಖ್ಯ, ಮೊದಲ ಪಂದ್ಯ ಗೆಲ್ಲೋದಲ್ಲ ಎಂದು ನಾನಂದುಕೊಳ್ಳುತ್ತೇನೆ. ಒಳ್ಳೆಯ ಜಿದ್ದಾಜಿದ್ದಿ ಹೋರಾಟ ನಡೆಯಿತು. ನಾವು ಸುಲಭವಾಗಿ ಪಂದ್ಯ ಸೋತಿಲ್ಲ. ಆದರೂ ಟೋಟಲ್ ಸ್ಕೋರ್ ಬಗ್ಗೆ ನಮಗೆ ಖುಷಿಯಿಲ್ಲ. ನಾವು ಇನ್ನೂ 20 ರನ್ ಕಡಿಮೆ ಗಳಿಸಿದ್ದೆವು,' ಎಂದು ರೋಹಿತ್ ವಿವರಿಸಿದ್ದಾರೆ.

ಕೊಹ್ಲಿಗೆ ರೋಹಿತ್ ಕುಟುಕಲು ಕಾರಣ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಇತಿಹಾಸದಲ್ಲಿ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಆದರೆ ಮುಂಬೈ ಇಂಡಿಯನ್ಸ್ ತಂಡ ದಾಖಲೆಯ ಐದು ಬಾರಿ ಚಾಂಪಿಯನ್ಸ್ ಪಟ್ಟಕ್ಕೇರಿದೆ. ಇದೇ ಕಾರಣಕ್ಕೆ ಆರಂಭಿಕ ಪಂದ್ಯ ಸೋತಿರುವುದಕ್ಕೆ ರೋಹಿತ್, ಕೊಹ್ಲಿಗೆ ಇರುಗೇಟು ನೀಡಿದ್ದಾರೆ. 'ಮೊದಲ ಪಂದ್ಯ ಗೆದ್ದಿದ್ದಕ್ಕೆ ಜಾಸ್ತಿ ಬೀಗಬೇಡಿ, ಟ್ರೋಫಿ ಗೆಲ್ಲಿ ನೋಡೋಣ' ಎಂಬರ್ಥದಲ್ಲಿ ಕೊಹ್ಲಿಗೆ ರೋಹಿತ್ ಸವಾಲು ಹಾಕಿದ್ದಾರೆ.
* ಸಂಕ್ಷಿಪ್ತ ಸ್ಕೋರ್: ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ, ಮುಂಬೈ-159-9 (20 Ov), ಬೆಂಗಳೂರು-160-8 (20 Ov).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications