ಐಪಿಎಲ್ 2021: ಡೆಲ್ಲಿ ಪರ ಕಣಕ್ಕಿಳಿಯಲು ಇಶಾಂತ್ ಶರ್ಮಾ ರೆಡಿ

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್‌ಗೆ ಒಂದು ಖುಷಿಯ ಸಂಗತಿ ಕೇಳಿ ಬಂದಿದೆ. ತಂಡದ ಪ್ರಮುಖ ವೇಗಿ ಇಶಾಂತ್ ಶರ್ಮಾ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಸಿದ್ಧರಾಗಿದ್ದಾರೆ. ಈ ಸೀಸನ್‌ನಲ್ಲಿ ಆಡಲು ಇಶಾಂತ್ ಆಡಲು ಇದ್ದ ಎಲ್ಲಾ ಅಡೆತಡೆಗಳನ್ನು ಕ್ಲೀಯರ್ ಮಾಡಿರುವುದಾಗಿ ತಿಳಿದು ಬಂದಿದೆ.
ಎಎನ್‌ಎ ಜೊತೆ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್‌ನಲ್ಲಿದ್ದ ಮೂಲವೊಂದು, ಪಾದದ ಗಾಯದ ಸಮಸ್ಯೆಯಲ್ಲಿ ಚೇತರಿಸಿಕೊಳ್ಳುತ್ತಿದ್ದ ಇಶಾಂತ್ ಶರ್ಮಾ ಈಗ ಸಂಪೂರ್ಣ ಫಿಟ್ ಆಗಿರುವುದಾಗಿ ಮತ್ತು ಮೈದಾನಕ್ಕಿಳಿಯಲು ಸಂಪೂರ್ಣ ಸಜ್ಜಾಗಿರುವುದಾಗಿ ತಿಳಿಸಿದೆ.
'ಇಶಾಂತ್ ಪಾದದ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಈಗ ಅವರು ಉತ್ತಮ ಸ್ಥಿತಿಯಲ್ಲಿದ್ದಾರೆ. ಇನ್ನೂ ನಾವು ಸಾಕಷ್ಟು ಪಂದ್ಯಗಳನ್ನು ಆಡಲಿರುವುದರಿಂದ ಪರಿಸ್ಥಿತಿ ನೋಡಿಕೊಂಡು ಇಶಾಂತ್ ನಮ್ಮ ಬೌಲಿಂಗ್ ಬಣ ಸೇರಿಕೊಳ್ಳಲಿದ್ದಾರೆ,' ಎಂದು ಮೂಲ ವಿವರಿಸಿದೆ.
ಆಡಿರುವ ಮೂರು ಪಂದ್ಯಗಳಲ್ಲಿ ಡೆಲ್ಲಿ ಎರಡರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 4 ಪಾಯಿಂಟ್ಸ್‌ನೊಂದಿಗೆ 3ನೇ ಸ್ಥಾನದಲ್ಲಿದೆ. ಏಪ್ರಿಲ್ 20ರ ಮಂಗಳವಾರ ಡೆಲ್ಲಿ ಮತ್ತು ಮುಂಬೈ ಇಂಡಿಯನ್ಸ್ ಮಧ್ಯೆ ಪಂದ್ಯ ನಡೆಯಲಿದೆ. ಈ ಪಂದ್ಯದ ಬಳಿಕ ಮತ್ತೆ ಅಂಕಪಟ್ಟಿಯಲ್ಲಿ ಏರುಪೇರಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications