ಐಪಿಎಲ್ 2021: ಪಂಜಾಬ್ vs ಹೈದರಾಬಾದ್, ಹೆಡ್ ಟು ಹೆಡ್ ರೆಕಾರ್ಡ್

ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. 3.30 PMಗೆ ಪಂದ್ಯ ಆರಂಭಗೊಳ್ಳಲಿದೆ.
ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಎರಡೂ ತಂಡಗಳೂ ಈವರೆಗೆ ತಲಾ 3 ಪಂದ್ಯಗಳನ್ನಾಡಿವೆ. ಇದರಲ್ಲಿ ಕೆಎಲ್ ರಾಹುಲ್ ನಾಯಕತ್ವದ ಪಂಜಾಬ್ 1ರಲ್ಲಿ ಗೆದ್ದಿದ್ದರೆ, ಡೇವಿಡ್ ವಾರ್ನರ್ ಪಡೆ ಒಂದರಲ್ಲೂ ಗೆಲುವು ಕಂಡಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಹೈದರಾಬಾದ್ ಗೆಲ್ಲಲೇಬೇಕಿದೆ.
ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ಮತ್ತು ಹೈದರಾಬಾದ್ ತಂಡಗಳು ಒಟ್ಟಿಗೆ 16 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 11ರಲ್ಲಿ ಹೈದರಾಬಾದ್ ಗೆದ್ದಿದ್ದರೆ, 5 ಗೆಲುವು ಪಂಜಾಬ್ ಹೆಸರಿನಲ್ಲಿದೆ. ಈ ಅಂಕಿ-ಅಂಶಗಳ ಪ್ರಕಾರ ಹೈದರಾಬಾದ್ ಹೆಚ್ಚು ಬಲಶಾಲಿ ತಂಡವಾಗಿ ಕಾಣಿಸಿದೆ.
ಕಳೆದಸಾರಿ ಅಂದರೆ ಅಕ್ಟೋಬರ್ 24ರಂದು ಕಡೇಯ ಸಾರಿ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ 7 ವಿಕೆಟ್ ಕಳೆದು 126 ರನ್ ಗಳಿಸಿದ್ದರೆ, 19.5 ಓವರ್‌ಗೆ 114 ರನ್ ಬಾರಿಸಿದ ಹೈದರಾಬಾದ್ 12 ರನ್‌ನಿಂದ ಸೋತಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications