Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಬೆಂಗಳೂರಿನ ಹಳೆ ಜೆರ್ಸಿ ಧರಿಸಿದೆಯಾ ಪಂಜಾಬ್?

IPL 2021: PBKS Wearing Old RCB Jersey During IPL 2021 Match vs RR?

ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮೈದಾನಕ್ಕಿಳಿದಿದ್ದವು. ಈ ವೇಳೆ ಪಂಜಾಬ್ ತಂಡದ ಜೆರ್ಸಿ ಬಹಳ ಗಮನ ಸೆಳೆದಿತ್ತು. ಇದಕ್ಕೊಂದು ಕಾರಣವಿದೆ.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಹಿಂದೆ ಕಿಂಗ್ಸ್‌ XI ಪಂಜಾಬ್‌ ಎಂದು ಕರೆಯಲ್ಪಡುತ್ತಿದ್ದ ಪಂಜಾಬ್ ಕಿಂಗ್ಸ್‌ ತಂಡ ಈ ಬಾರಿ ಹೆಸರು ಬದಲಿಸಿದ್ದಷ್ಟೇ ಅಲ್ಲ, ಜೆರ್ಸಿಯನ್ನೂ ಬದಲಿಸಿತ್ತು. ಹಿಂದೆ ಗಾಢ ಪಿಂಕ್ ಬಣ್ಣದಲ್ಲಿದ್ದ ಪಂಜಾಬ್ ಜೆರ್ಸಿ ಈ ಬಾರಿ ಗಾಢ ಕೆಂಪು ಬಣ್ಣಕ್ಕೆ ಬದಲಾಗಿತ್ತು. ಈ ಜೆರ್ಸಿ ನೋಡೋಕೆ ಥೇಟ್ ಹಿಂದೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಧರಿಸಿದ್ದ ಜೆರ್ಸಿಯನ್ನೇ ಹೋಲುತ್ತಿತ್ತು.

2008ರಲ್ಲಿ ಆರ್‌ಸಿಬಿ ಕೂಡ ಈಗ ಪಂಜಾಬ್ ತಂಡ ಧರಿಸಿದ್ದ ಇದೇ ಕೆಂಪು ಬಣ್ಣ ಮತ್ತು ಚಿನ್ನದ ಬಣ್ಣದ ರೇಖೆಗಳ ವಿನ್ಯಾಸವಿದ್ದ ಜೆರ್ಸಿ ಧರಿಸಿ ಆಡಿತ್ತು. ಸೋಮವಾರ (ಏಪ್ರಿಲ್ 12) ನಡೆದಿದ್ದ ಪಂದ್ಯದ ವೇಳೆ ಪಿಬಿಕೆಎಸ್‌ ಧರಿಸಿದ್ದ ಜೆರ್ಸಿ ನೋಡಿ ಹಿಂದಿನ ಆರ್‌ಸಿಬಿ ಜೆರ್ಸಿಯನ್ನು ಸ್ಮರಿಸಿಕೊಂಡು ಸಾಕಷ್ಟು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

ಗಮ್ಮತ್ತೆಂದರೆ, ಪಂದ್ಯದ ವೇಳೆ ಕಾಮೆಂಟರಿ ಮಾಡುತ್ತಿದ್ದ ತುಷಾರ್ ಭಟ್ ಅವರು, 'ಆರ್‌ಸಿಬಿಯ ಈಗಿನ ಜೆರ್ಸಿಯನ್ನು ಅದರ 2008ರ ಜೆರ್ಸಿಗೆ ಬದಲಾಯಿಸಲು ದೂರು ದಾಖಲಿಸಬೇಕು. ಆಗ ಮಾರ್ಚ್ 30ರಂದು ನಡೆಯುವ ಐಪಿಎಲ್ ಪಂದ್ಯದಲ್ಲಿ ನಿಜ ಆರ್‌ಸಿಬಿ ಮತ್ತು ಆರ್‌ಸಿಬಿಯ ಮಧ್ಯೆ ಪಂದ್ಯ ನಡೆಯುವುದನ್ನು ನಾವು ನೋಡಬಹುದು,' ಎಂದು ತಮಾಷೆಯಾಡಿದ್ದಾರೆ.

Story first published: Monday, April 12, 2021, 23:10 [IST]
Other articles published on Apr 12, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+