ಐಪಿಎಲ್‌ನ ಪ್ರಥಮ ವಿಕೆಟ್ ಕೊಹ್ಲಿ ರೂಪದಲ್ಲಿ ಪಡೆದಿರುವುದು ತುಂಬಾ ವಿಶೇಷ: ಹರ್‌ಪ್ರೀತ್ ಬ್ರಾರ್

ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ವಿರಾಟ್ ಪಡೆಯ ಬ್ಯಾಟಿಂಗ್ ಲೈನ್‌ಅಪ್‌ಗೆ ಕಂಟಕವಾಗಿದ್ದು ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಹರ್‌ಪ್ರೀತ್ ಬ್ರಾರ್. ನಾಯಕ ವಿರಾಟ್ ಕೊಹ್ಲಿ ಸಹಿತ ಮೂರು ಪ್ರಮುಖ ವಿಕೆಟ್‌ಗಳು ಹರ್‌ಪ್ರೀತ್ ಪಾಲಾದವು. ಈ ಸಾಧನೆ ಯುವ ಬೌಲರ್‌ಗೆ ಸಾಕಷ್ಟು ಹುಮ್ಮಸ್ಸು ನೀಡಿದೆ.
ಈ ಸಾಧನೆಗಾಗಿ ಹರ್‌ಪ್ರೀತ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ಬಳಿಕ ಮಾತನಾಡಿದ ಹರ್‌ಪ್ರೀತ್ ಈ ಸಾಧನೆಯಿಂದಾಗಿ ತವರೂರು 'ಮೊಗಾ'ದ ಜನತೆ ತುಂಬಾ ಸಂತಸ ಹಾಗೂ ಹೆಮ್ಮೆ ಪಟ್ಟುಕೊಂಡಿರುತ್ತಾರೆ ಎಂದು ಹೇಳಿದ್ದಾರೆ. ಜೊತೆಗೆ ಚೊಚ್ಚಲ ವಿಕೆಟ್ ರೂಪದಲ್ಲಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿರುವುದು ಅತ್ಯಂತ ವಿಶೇಷ ಅನುಭವ ಎಂದು ಹೇಳಿದ್ದಾರೆ.
"ನಾನು ಮೊಗಾ ಜಿಲ್ಲೆಯವನು. ನನ್ನ ಊರಿನ ಜನರು ಈಗ ತುಂಬಾ ಸಂತಸ ಹಾಗೂ ಹೆಮ್ಮೆ ಪಟ್ಟುಕೊಂಡಿರುತ್ತಾರೆ. ವಿರಾಟ್ ಕೊಹ್ಲಿ ನನ್ನ ಎಸೆತಕ್ಕೆ ಬಾರಿಸಿದಾಗ ವಿಚಲಿತನಾಗಲಿಲ್ಲ. ಬೌಲರ್ ಕಮ್‌ಬ್ಯಾಕ್ ಮಾಡಲು ಮತ್ತೊಂದು ಅವಕಾಶ ದೊರೆಯುತ್ತದೆ" ಎಂದು ಹರ್‌ಪ್ರೀತ್ ಬ್ರಾರ್ ಪ್ರತಿಕ್ರಿಯಿಸಿದ್ದಾರೆ.
"ನನ್ನ ಮೊದಲ ಐಪಿಎಲ್ ವಿಕೆಟ್ ಕೊಹ್ಲಿ ಅವರದ್ದು. ಇದು ಅತ್ಯಂತ ವಿಶೇಷ. ಅದರ ನಂತರ ಎಲ್ಲವೂ ಸರಾಗವಾಗಿ ನಡೆದಿತ್ತು. ಆತ್ಮವಿಶ್ವಾಸ ಹೆಚ್ಚಾಗಿತ್ತು. ವಿಕೆಟ್‌ಗಳು ಅಗತ್ಯ ಸಂದರ್ಭದಲ್ಲಿ ಬಿದ್ದವು" ಎಂದು ಹರ್‌ಪ್ರೀತ್ ಬ್ರಾರ್ ತಮ್ಮ ಚೊಚ್ಚಲ ಐಪಿಎಲ್ ಪಂದ್ಯದ ಬಳಿಕ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications